Trisha : ದಕ್ಷಿಣ ಸಿನಿಮಾಗಳಲ್ಲಿ ಖಳನಟನಾಗಿ ಹೆಸರನ್ನು ಪಡೆದಿರುವ ನಟ ಮನ್ಸೂರ್ ಆಲಿ ಖಾನ್ (Mansoor Ali Khan) ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ನಟನಾಗಿದ್ದಾರೆ. ಆದರೆ ಇತ್ತೀಚಿಗೆ ನಟ ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯಾದ ತ್ರಿಶಾ (Trisha) ಅವರ ಕುರಿತಾಗಿ ಕೀ ಳು ಮಟ್ಟದಲ್ಲಿ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದ್ದು ಸಾಕಷ್ಟು ಟೀಕೆಗಳಿಗೆ ಈ ನಟ ಗುರಿಯಾಗಿದ್ದಾರೆ.
ವಿಜಯ್ (Vijay) ಹಾಗೂ ತ್ರಿಶಾ ನಟಿಸಿರುವ ಲಿಯೋ (Leo) ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಯಶಸ್ಸನ್ನು ಕಂಡಿದೆ. ಈ ಸಿನಿಮಾದಲ್ಲಿ ಮನ್ಸೂರ್ ಆಲಿ ಖಾನ್ ಅವರು ಸಹಾ ನಟಿಸಿದ್ದಾರೆ. ಆದರೆ ಸಂದರ್ಶನವೊಂದರಲ್ಲಿ ಈ ನಟ ಆಡಿರುವ ಮಾತುಗಳು ಅನೇಕರಿಗೆ ಶಾ ಕ್ ನೀಡಿದೆ.

ಮನ್ಸೂರ್ ಅಲಿ ಖಾನ್ ಮಾತನಾಡುತ್ತಾ, ಈ ಸಿನಿಮಾದಲ್ಲಿ ತ್ರಿಶಾ ಹೀರೋಯಿನ್ ಅಂತ ಗೊತ್ತಾದಾಗ ಈ ಸಿನಿಮಾದಲ್ಲೂ ರೇ ಪ್ ಸೀನ್ ಇರುತ್ತೆ ಅಂತ ಅನ್ಕೊಂಡಿದ್ದೆ. ನನ್ನ ಹಿಂದಿನ ಸಿನಿಮಾಗಳಲ್ಲಿ ನಟಿಯರ ಜೊತೆ ಮಾಡಿದ ಹಾಗೆ ತ್ರಿಶಾನ ಬೆಡ್ ರೂಂ ಗೆ ಕರ್ಕೊಂಡು ಹೋಗಿ ರೇ ಪ್ ಮಾಡೋ ಸೀನ್ ಇರುತ್ತೆ ಅಂತ ಭಾವಿಸಿದ್ದೆ.
ಇದನ್ನೂ ಓದಿ : Big Boss: 6ನೇ ವಾರದ ಶಾಕಿಂಗ್ ಎಲಿಮಿನೇಷನ್ ಮುಗೀತು; ಮನೆಯಿಂದ ಹೊರ ಬಂದಿದ್ದು ಇವರೇ ನೋಡಿ
ನಾನು ಅಂತಹ ಬಹಳಷ್ಟು ದೃಶ್ಯಗಳನ್ನು ಮಾಡಿದ್ದೆ. ಆದರೆ ಈ ಸಿನಿಮಾದಲ್ಲಿ ತ್ರಿಶಾ ಅವರ ಮುಖವನ್ನು ಸಹಾ ನನಗೆ ತೋರಿಸಿಲ್ಲ ಎಂದಿದ್ದಾರೆ. ವೀಡಿಯೋ ವೈರಲ್ ಆದ ಮೇಲೆ ನಟಿ ತ್ರಿಶಾ ಮತ್ತು ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್ ಸಹಾ ಈ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿ,ನಟನ ಮಾತನ್ನು ಖಂಡಿಸಿದ್ದರು.

ಈ ಘಟನೆ ನಡೆದ ನಂತರ ನಟಿ ತ್ರಿಷಾ ತಾನು ಇನ್ನೆಂದೂ ಈ ನಟನ ಜೊತೆಗೆ ಸಿನಿಮಾ ಮಾಡೋದಿಲ್ಲ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಅಲ್ಲದೇ ನಟಿ ಖುಷ್ಬೂ (Khushboo) ಮನ್ಸೂರ್ ಅಲಿ ಖಾನ್ ವಿರುದ್ಧ ಕಾನೂನು ಕ್ರಮವನ್ನು ಸಹಾ ಕೈಗೊಳ್ಳಲಾಗುವುದು ಎನ್ನುವ ಮಾತನ್ನು ಸಹಾ ಹೇಳಿದ್ದಾರೆ.
ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿದ ನಂತರ ನಟ ಮನ್ಸೂರ್ ಆಲಿ ಖಾನ್ ಅವರು ವರಸೆ ಬದಲಿಸಿದ್ದು, ಎಲ್ಲಾ ಕಡೆ ಎಡಿಟೆಡ್ ವೀಡಿಯೋ ವೈರಲ್ ಆಗಿದೆ. ನಾನು ಅಷ್ಟು ಹಗುರವಾಗಿ ಮಾತನಾಡಿಲ್ಲ, ವೀಡಿಯೋ ಟ್ರಿಮ್ ಮಾಡಲಾಗಿದೆ. ಅಲ್ಲದೇ ನಾನು ಮುಂದಿನ ಚುನಾವಣೆಯಲ್ಲಿ ಪಕ್ಷವೊಂದಕ್ಕೆ ಬೆಂಬಲ ನೀಡ್ತಾ ಇರೋದ್ರಿಂದ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಹೇಳಿದ್ದಾರೆ.