Bike News ಭಾರತೀಯರ ಹೃದಯ ಗೆದ್ದ ಟಾಪ್ 100cc ಬೈಕ್ಸ್, ಮೈಲೇಜ್ ಮತ್ತು ಬಜೆಟ್ ನಲ್ಲೂ ಸೈ!
Bike News : ಒಂದು ವೇಳೆ ನೀವು ಕಡಿಮೆ ಬೆಲೆಯಲ್ಲಿ ಅಥವಾ ನಿಮ್ಮ ಬಜೆಟ್ ನಲ್ಲಿ ಒಂದು ಉತ್ತಮವಾದ ಬೈಕ್ (bike) ಖರೀದಿ ಮಾಡಲು ಯೋಚನೆಯನ್ನು ಮಾಡುತ್ತಿದ್ದರೆ, ನಾವು ಇಂದು ನಿಮಗೆ ದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುವ 5 ಅತ್ಯುತ್ತಮ ಬೈಕ್ ಗಳ (Bike News) ಆಯ್ಕೆಗಳ ಕುರಿತಾಗಿ ಹೇಳಲು ಹೊರಟಿದ್ದೇವೆ. ಹಾಗಾದರೆ ಆ ಬೈಕ್ ಗಳು ಯಾವುದು ಎನ್ನುವುದನ್ನು ತಿಳಿಯಲು ನೀವು ಉತ್ಸುಕರಾಗಿದ್ದರೆ ಇಲ್ಲಿದೆ ಅವುಗಳ ಮಾಹಿತಿ.
ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಬೈಕ್ ದೇಶದಲ್ಲಿ ಹೆಚ್ಚು ಮಾರಾಟವಾದ ಬೈಕ್ ಆಗಿದ್ದು, ಇದು ಮೈಲೇಜ್ ಬೈಕ್ ಎಂಬ ಹೆಗ್ಗಳಿಕೆಯನ್ನು ಸಹಾ ಪಡೆದುಕೊಂಡಿದ್ದು, ಇದರ ಆರಂಭಿಕ ಬೆಲೆ 74,494 ರೂ. ಗಳಾಗಿದೆ. ಇದು ನಿಮಗೆ ಮೂರು ರೂಪಾಂತರಗಳಲ್ಲಿ, ಒಟ್ಟು 7 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ 97.2cc BS6 ಎಂಜಿನ್ ಇದ್ದು, 7.91 bhp ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಹೀರೋ ಹೆಚ್ ಎಫ್ ಡೀಲಕ್ಸ್ (Hero HF Deluxe) ಈ ಬೈಕ್ ನ ಎಕ್ಸ್ ಶೋ ರೂಂ ಬೆಲೆ 61,620 ರೂ ಗಳಾಗಿದೆ. ಇದು ನಿಮಗೆ 6 ರೂಪಾಂತರಗಳು ಮತ್ತು ಬರೋಬ್ಬರಿ 11 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ ಎಂದರೆ ಅಚ್ಚರಿಯಾಗಬಹುದು. ಇದರಲ್ಲೊ 97.2cc BS6 ಎಂಜಿನ್ ಇದ್ದು, 7.91 bhp ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಇದು ಪಡೆದಿದೆ.
ಟವಿಎಸ್ ಸ್ಪೋರ್ಟ್ (TVS sports) ಇದು ಸಹಾ ಒಂದು ಉತ್ತಮವಾದ ಮೈಲೇಜ್ ನೀಡುವ ಬೈಕ್ ಆಗಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆಯು 63,350 ರೂ. ಗಳಾಗಿದ್ದು, ನಿಮಗೆ ಈ ಬೈಕ್ 3 ರೂಪಾಂತರಗಳಲ್ಲಿ ಮತ್ತು 7 ಬಣ್ಣಗಳ ಆಯ್ಕೆಗಳಲ್ಲಿ ಸಿಗುತ್ತದೆ. ಇಂಜಿನ್ ವಿಚಾರಕ್ಕೆ ಬಂದರೆ ಇದು 109.7cc BS6 ಎಂಜಿನ್ ಅನ್ನು ಹೊಂದಿದ್ದು 8.18 bhp ಮತ್ತು 8.7 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.
ಹೊಂಡಾ ಶೈನ್ 100 (Honda Shine 100) ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆಯು 64,900 ರೂ ಗಳಾಗಿದ್ದು, ನಿಮಗೆ ಇದರ ಕೇವಲ 1 ರೂಪಾಂತರ ಲಭ್ಯವಿದೆ. ಆದರೆ ಬಣ್ಣದ ವಿಚಾರದಲ್ಲಿ ಮಾತ್ರ ನಿಮಗೆ 5 ಬಣ್ಣದ ಆಯ್ಕೆಗಳಲ್ಲಿ ಈ ಬೈಕ್ ಲಭ್ಯವಿದೆ. ಇದರಲ್ಲಿ 98.98cc BS6 ಇಂಜಿನ್ ಇದ್ದು, 7.28 bhp ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್ Xtec : (Hero Splendor Plus Xtec ) ಈ ಬೈಕ್ ನ ಬೆಲೆ 79,261 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಇದರಲ್ಲಿ ಸಹಾ ನಿಮಗೆ ಒಂದೇ ಒಂದು ರೂಪಾಂತರ ಲಭ್ಯವಿದೆ, ಬಣ್ಣದ ವಿಚಾರದಲ್ಲಿ ನಿಮಗೆ 4 ಬಣ್ಣದ ಆಯ್ಕೆಗಳು ಸಿಗುತ್ತದೆ. ಇದರಲ್ಲಿ 97.2cc BS6 ಎಂಜಿನ್ ಅಳವಡಿಸಲಾಗಿದ್ದು, 7.9 bhp ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.