Prabhas: ಯಾರು ಏನೇ ಹೇಳಿದ್ರು ಪ್ರಭಾಸ್ ಮದುವೆ ನಡೆಯಲ್ಲ; ಪ್ರಖ್ಯಾತ ಜ್ಯೋತಿಷಿಯ ಸಂಚಲನ ಭವಿಷ್ಯ ವಾಣಿ

Written by Soma Shekar

Published on:

---Join Our Channel---

Prabhas: ಟಾಲಿವುಡ್ ನ (Tollywood) ಸ್ಟಾರ್ ನಟ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರಿಗೆ ಮದುವೆ ಯಾವಾಗ ಅನ್ನೋದು ಅವರ ಅಭಿಮಾನಿಗಳ ಬಹಳ ಕಾಲದ ಪ್ರಶ್ನೆಯಾಗಿದ. ಆಗಾಗ ಈ ನಟನ ಮದುವೆ ಕುರಿತಾಗಿ ಒಂದಷ್ಟು ಸುದ್ದಿಗಳು ಹರಿದಾಡುದ್ರೂ ಯಾವುದೇ ಸುದ್ದಿ ಅಧಿಕೃತ ಮಾತ್ರ ಆಗೋದಿಲ್ಲ. ಆದರೆ ಈಗ ಸೆಲೆಬ್ರಿಟಿಗಳ ಭವಿಷ್ಯವನ್ನು ಹೇಳುವಂತಹ ಜ್ಯೋತಿಷಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ವೇಣುಸ್ವಾಮಿ (Venu Swamy) ನಟ ಪ್ರಭಾಸ್ ಅವರ ಮದುವೆ ಕುರಿತಾಗಿ ಭವಿಷ್ಯ ವಾಣಿಯನ್ನು ನುಡಿದಿದ್ದಾರೆ.

ವೇಣು ಸ್ವಾಮಿಯವರು ಪ್ರಭಾಸ್ ಗೆ ಮದುವೆ ಯೋಗ ಇಲ್ಲ ಎಂದು ಹೇಳುವ ಮೂಲಕ ನಟನ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದ್ದಾರೆ. ವೇಣು ಸ್ವಾಮಿಯವರ ಮಾತನ್ನು ಬಹಳಷ್ಟು ಜನ ಸೆಲೆಬ್ರಿಟಿಗಳು ನಂಬುತ್ತಾರೆ ಅನ್ನೋದು ಸಹಾ ವಾಸ್ತವದ ವಿಚಾರವಾಗಿದೆ. ಅದೇ ಕಾರಣದಿಂದ ಈಗ ಪ್ರಭಾಸ್ ಮದುವೆ ವಿಚಾರದಲ್ಲೂ ಅವರ ಭವಿಷ್ಯವಾಣಿ ನಿಜವಾಗುತ್ತಾ ಅನ್ನೋ ಅನುಮಾನ ಒಂದಷ್ಟು ಜನರಿಗೆ ಮೂಡಿದೆ. ಇದನ್ನೂ ಓದಿ: Big Boss: ಮಾವುತನಿಗೆ ಇಂತ ಗತಿ ಬರಬಾರದಿತ್ತು; ರಕ್ಕಸರ ಅಬ್ಬರಕ್ಕೆ ಹಿಂಡಿ ಹಿಪ್ಪೆಯಾದ ಅವಿನಾಶ್ ಶೆಟ್ಟಿ

ಕೆಲವೇ ದಿನಗಳ ಹಿಂದೆ ಎಷ್ಟು ಪ್ರಭಾಸ್ ಅವರ ಕುಟುಂಬ ವರ್ಗ ನಟನ ಮದುವೆ (Prabhas Marriage) ವಿಚಾರವಾಗಿ ಮಾಹಿತಿ ಒಂದನ್ನು ಹಂಚಿಕೊಂಡಿತ್ತು. ಪ್ರಭಾಸ್ ಅವರ ಮದುವೆಯ ಸಿದ್ಧತೆಗಳು ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದರು. ಪ್ರಭಾಸ್ ಅವರು ಯು ಎಸ್ ನಲ್ಲಿ ನೆಲೆಸಿರುವ ಯುವತಿಯ ಜೊತೆಗೆ ಸಪ್ತಪದಿ ತುಳಿಯುತ್ತಾರೆ ಎಂದು ಹೇಳಲಾಗಿತ್ತು.

ನಟ ಮದುವೆಯಾಗಲಿರುವ ಯುವತಿಯ ತಂದೆ ಉದ್ಯಮಿಯಾಗಿದ್ದು ನಟನ ಕುಟುಂಬದ ಸದಸ್ಯರು ಮದುವೆಯ ಮಾತುಕತೆಯನ್ನು ಸಹಾ ನಡೆಸಿದ್ದಾರೆ ಎಂದು ಸುದ್ದಿಗಳಾಗಿತ್ತು. ಆದರೆ ಈ ಬಗ್ಗೆ ನಟ ಪ್ರಭಾಸ್ ಅವರು ಯಾವುದೇ ರೀತಿಯ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇವೆಲ್ಲವುಗಳ ಬೆನ್ನಲ್ಲೇ ಈಗ ವೇಣುಸ್ವಾಮಿ ಅವರ ಭವಿಷ್ಯವಾಣಿ ಎಲ್ಲರ ಗಮನ ಸೆಳೆಯುತ್ತಿದೆ.

Leave a Comment