Expensive EVs : ಭಾರತದ ಅತ್ಯಂತ ದುಬಾರಿ ಟಾಪ್ 5 ಎಲೆಕ್ಟ್ರಿಕ್ ಕಾರುಗಳು! ಇವುಗಳ ಫೀಚರ್ಸ್, ಬೆಲೆ ಎರಡೂ ಅದ್ಭುತ

0 44

Expensive EVs : ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆದಾರರ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆಯೊಂದು ಕಂಡು ಬರುತ್ತಿದೆ. ಜನರು ಎಲೆಕ್ಟ್ರಿಕ್ ಕಾರುಗಳ ಕಡೆಗೆ ನೀಡುತ್ತಿರುವ ಗಮನ ದಿಂದಾಗಿ ಇದೀಗ ವಾಹನ ತಯಾರಿಕಾ ಕಂಪನಿಗಳು ಸಹಾ ಜನರಿಗೆ ಸುಲಭವಾಗಿ ಸಿಗುವ ಅಗ್ಗದ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ.

ಆದರೆ ನಿಮಗೆ ದೇಶದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ತಿಳಿದಿದೆಯೇ? ಒಂದು ವೇಳೆ ನಿಮಗೆ ದೇಶದ ಅತಿ ದುಬಾರಿ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿದಿಲ್ಲ ಎನ್ನುವುದಾದರೆ ನಿಮಗಾಗಿ ಇಲ್ಲಿದೆ ಈ ಕಾರುಗಳ ಮಾಹಿತಿ.

ಮರ್ಸಿಡಿಸ್ ಬೆಂಜ್ ಇಕ್ಯೂಎಸ್ (Mercedes Benz Eqs) : ಈ ಕಾರಿನ ಪವರ್ ಗಾಗಿ 107.8kWh ಬ್ಯಾಟರಿಯನ್ನು ಬಳಸಲಾಗುತ್ತದೆ. ಆಲ್ ವೀಲ್ ಡ್ರೈವ್ (AWD) ವ್ಯವಸ್ಥೆಯನ್ನು ಇದು ಹೊಂದಿದ್ದು, ಈ AMG EQS 53 4MATIC+ ಕಾರು ಬರೋಬ್ಬರಿ 586 km ವರೆಗಿನ ಪ್ರಯಾಣಕ್ಕೆ ಸಾತ್ ನೀಡುತ್ತದೆ ಎನ್ನಲಾಗಿದೆ. ‌

ಇದರ ಎಲೆಕ್ಟ್ರಿಕ್ ಮೋಟಾರ್ 658PS ಮತ್ತು 950Nm ಔಟ್ ಪುಟ್ ಅನ್ನು ಜನರೇಟ್ ಮಾಡುತ್ತದೆ. ಡೈನಾಮಿಕ್ ಪ್ಯಾಕ್‌ ನೊಂದಿಗಿನ ಸಂರಚನೆಯು (configuration) ಒಟ್ಟು 761PS ಮತ್ತು 1020Nm ಔಟ್ ಪುಟ್ ಜನರೇಟ್ ನೀಡುತ್ತದೆ. ಇದೇ ವೇಳೆ EQS 580 4MATIC 523PS ಮತ್ತು 855Nm ಔಟ್ ಪುಟ್ ಹೊಂದಿದ್ದು, ARAI-ವ್ಯಾಪ್ತಿ ಪ್ರತಿ ಚಾರ್ಜ್‌ಗೆ 857 ಕಿಮೀ. ಎನ್ನಲಾಗಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 1.55 ಕೋಟಿ ರೂ.ನಿಂದ 2.45 ಕೋಟಿ ರೂ. ಗಳಾಗಿದೆ.

ಪೋರ್ಷೆ ಟೇಕಾನ್ ಕ್ಯಾನ್ವಾಸ್ ಟುರಿಸ್ಮೊ :
( Porsche Taycan Canvas Turismo EV )
ಈ ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆಯು 1.50 ಕೋಟಿ ಗಳಿಂದ 2.31 ಕೋಟಿ ರೂ.ಗಳ ವರೆಗೆ ಇದ್ದು, ಇದು ಒಟ್ಟು ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ರೂಪಾಂತರವನ್ನು ಅನುಸರಿಸಿ Taycan 79.2kWh ಮತ್ತು 93.4kWh ಸೇರಿದಂತೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಇದು 400 ಕಿಲೋಮೀಟರ್‌ಗಿಂತಲೂ ಹೆಚ್ಚು WLTP ಶ್ರೇಣಿಯನ್ನು ಹೊಂದಿದೆ. ಪೋರ್ಷೆ ಟೇಕಾನ್ ಸಿಂಗಲ್ ಮೋಟರ್ ಮತ್ತು ಡ್ಯುಯಲ್ ಮೋಟಾರ್ ಮಾಡೆಲ್ ಗಳಲ್ಲೂ ಲಭ್ಯವಿದೆ.

ಬಿಎಂಡಬ್ಲ್ಯೂ i7 (BMW i7)
ಈ ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆ 1.95 ಕೋಟಿ ರೂ. ಗಳಾಗಿದ್ದು, ಇದು ಕೇವಲ ಒಂದು 740 xDrive 60 ರೂಪಾಂತರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 101.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಸಿಸ್ಟಮ್‌ ನಿಂದ ಶಕ್ತಿಯನ್ನು ಪಡೆಯುತ್ತದೆ, ಇದು 544PS ಮತ್ತು 745Nm ಔಟ್ ಪುಟ್ ಅನ್ನು ಉತ್ಪಾದಿಸುತ್ತದೆ. ಇದರ ಸರಾಸರಿ ವೇಗದ ಅನ್ವಯ WLTP ವ್ಯಾಪ್ತಿಯು 625 ಕಿ.ಮೀ. ಗಳಾಗಿದೆ. ಈ ಕಾರನ್ನು 195kW ಚಾರ್ಜರ್‌ ನೊಂದಿಗೆ ಕೇವಲ 34 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದಾಗಿದೆ.

ಆಡಿ ಇ-ಟ್ರಾನ್ ಜಿಟಿ (Audi e tron gt) ಈ ಕಾರಿನ ಎಕ್ಸ್ ಶೋ ರೂಂ ಬೆಲೆ 1.70 ರಿಂದ 1.94 ಕೋಟಿ ರೂಪಾಯಿಗಳ ವರೆಗೆ ಇದೆ. ಇದು ಮಾರುಕಟ್ಟೆಯಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇ-ಟ್ರಾನ್ ಜಿಟಿ ಮತ್ತು ಆರ್ ಎಸ್ ಇ-ಟ್ರಾನ್ ಜಿಟಿ. ಇ-ಟ್ರಾನ್ GT 522 hp ಶಕ್ತಿಯನ್ನು ಹೊಂದಿದ್ದರೆ, ಆದರೆ RS ಮಾಡೆಲ್ ನಲ್ಲಿ 637 hp ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಅಳವಡಿಸಲಾಗಿದೆ.

ಬಿಎಂಡಬ್ಲ್ಯೂ iX : (BMW iX)
ಈ ಎಲೆಕ್ಟ್ರಿಕ್ SUV ಯ ಎಕ್ಸ್ ಶೋ ರೂಂ ಬೆಲೆ 1.16 ಕೋಟಿ ರೂಪಾಯಿಗಳಾಗಿದ್ದು, ಇದು xDrive 40 ರೂಪಾಂತರದಲ್ಲಿ ಮಾತ್ರವೇ ಗ್ರಾಹಕರಿಗೆ ಲಭ್ಯವಿದೆ. iX 76.6 kWh ಸಾಮರ್ಥ್ಯದ ಒಂದು ಟಂಡೆಮ್ ಬ್ಯಾಟರಿ ಸೆಲ್ ಮತ್ತು ಆಲ್ ವೀಲ್ ಡ್ರೈವ್ ಸಿಸ್ಟಮ್‌ ನೊಂದಿಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಇದು ಹೊಂದಿದೆ. ಇದರ WLTP ವ್ಯಾಪ್ತಿಯು 425 ಕಿಮೀ ಗಳಾಗಿದೆ. ಈ EV ಅನ್ನು ಸುಮಾರು 30 ನಿಮಿಷಗಳಲ್ಲಿ 0 ರಿಂದ 80% ವರೆಗೆ ಚಾರ್ಜ್ ಮಾಡಬಹುದಾಗಿದೆ.

Leave A Reply

Your email address will not be published.