ದಿ ಕೇರಳ ಸ್ಟೋರಿ ಟ್ರೇಲರ್ ವಿರುದ್ಧ ಗರಂ ಆದ ಕೇರಳ ಸಿಎಂ: ಸಿನಿಮಾ ಬಿಡುಗಡೆಗೆ ತಡೆ??

Written by Soma Shekar

Published on:

---Join Our Channel---

The Kerala story : ದಿ ಕೇರಳ ಸ್ಟೋರಿ ಸಿನಿಮಾದ ಟ್ರೈಲರ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದು, ಬಿಡುಗಡೆಯ ನಂತರ ಟ್ರೈಲರ್ ದೇಶ ವ್ಯಾಪಿಯಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ಸಿನಿಮಾ ಲವ್ ಜಿ ಹಾ ದ್ ವಿಚಾರವನ್ನು ಪ್ರಮುಖವಾಗಿ ಇಟ್ಟುಕೊಂಡು ನಿರ್ಮಾಣವಾಗಿದ್ದು, ಐ ಸಿ ಸ್ ವಿಚಾರವನ್ನು ಕೂಡಾ ಈ ಸಿನಿಮಾದಲ್ಲಿ ಪ್ರಸ್ತಾಪ ಮಾಡಲಾಗಿದೆ. ಟ್ರೈಲರ್ ಬಿಡುಗಡೆ ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈಗ ಇದರ ಬಗ್ಗೆ ಒಂದು ವರ್ಗದವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು ಎಂದು ಒಂದು ವರ್ಗದವರು ಆಗ್ರಹ ಮಾಡುತ್ತಿದ್ದಾರೆ.

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಜೋರಾಗಿ ನಡೆದಿದೆ. ದಿ ಕೇರಳ ಸ್ಟೋರಿ ಸಿನಿಮಾದ ಟ್ರೈಲರ್ ಕುರಿತಾಗಿ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದ ಕಾರಣ ಕೇರಳದಲ್ಲಿ ಈ ಸಿನಿಮಾ ಬಿಡುಗಡೆಗೆ ತಡೆ ಆದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಿ ಕೇರಳ ಸ್ಟೋರಿ ಟ್ರೈಲರ್ ನೋಡಿದ ನಂತರ ಅಸಮಾಧಾನಗೊಂಡಿದ್ದಾರೆ. ಈ ಚಿತ್ರ ಬಿಡುಗಡೆಯಾದರೆ ಕೇರಳ ರಾಜ್ಯಕ್ಕೆ ಅದೊಂದು ಕಳಂಕವಾಗಲಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಇದನ್ನೂ ಓದಿ:ಸಲ್ಮಾನ್ ಸಿನಿಮಾ ಸೆಟ್ ನಲ್ಲಿ ಹುಡುಗಿಯರ ದೇಹ ಕಾಣಿಸಬಾರದು: ಈ ನಿಯಮ ಏಕೆ? ಸ್ಪಷ್ಟನೆ ಕೊಟ್ಟ ನಟ

ಈ ಸಿನಿಮಾ ಕೇರಳದ ಕಥೆ, ಕೇರಳದ ಯುವತಿ ಒಬ್ಬಳು ಹೇಗೆ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಬಳಿಕ ಐ ಸಿ ಸ್ ಸೇರುತ್ತಾಳೆ. ಅಲ್ಲಿ ಹೇಗೆ ನರಕ ಯಾ ತ ನೆಯನ್ನು ಅನುಭವಿಸುತ್ತಾಳೆ. ಅನಂತರ ಆಕೆ ತನ್ನ ಕಥೆಯನ್ನು ಹೇಳಿಕೊಳ್ಳುತ್ತಾಳೆ ಇದು ಈ ಸಿನಿಮಾದ ಕಥಾಹಂದರವಾಗಿದೆ. ಟ್ರೈಲರ್ ನೋಡಿದ ನಂತರ ಪಿಣರಾಯಿ ವಿಜಯನ್ ಅವರು ಈ ಸಿನಿಮ ರಾಜ್ಯದ ವಿರುದ್ಧ ದ್ವೇ ಷ ವನ್ನು ಹರಡುವಂತೆ ಮಾಡುತ್ತಿದೆ. ಲವ್ ಜಿಹಾದ್ ಅನ್ನೋದು ಸುಳ್ಳು. ತನಿಖೆ ಸಂಸ್ಥೆ ನ್ಯಾಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದಿಂದ ಲವ್ ಜಿ ಹಾ ದ್ ಎನ್ನುವ ವಿಚಾರ ತಿರಸ್ಕರಿಸಲ್ಪಟ್ಟಿದೆ.

ಈಗ ಲವ್ ಜಿ ಹಾ ದ್ ಎನ್ನುವ ವಿಚಾರವನ್ನೇ ಚಿತ್ರದ ಥೀಮ್ ಆಗಿ ಮಾಡಿಕೊಂಡಿದ್ದಾರೆ. ರಾಜ್ಯದ ಬಗ್ಗೆ ಅಪಪ್ರಚಾರವನ್ನು ಮಾಡಲು ಸಂಘ ಪರಿವಾರ ತನ್ನ ಪ್ರಯತ್ನವನ್ನು ಮಾಡುತ್ತಿದೆ ಎಂದು ಪಿಣರಾಯಿ ವಿಜಯನ್ ಅಸಮಾಧಾನ ಹೊರ ಹಾಕಿದ್ದಾರೆ. ಈ ಸಿನಿಮಾದ ನಿರ್ದೇಶಕ ಸುದಿಪ್ತೋ ಸೇನ್ (Sudipto Sen) ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಹೇಳಿದ್ದಾರೆ. ಇರಾಕ್ ಮತ್ತು ಸಿರಿಯಾದಲ್ಲಿ ಉ” ಗ್ರ ಗಾ’ ಮಿ ಸಂಘಟನೆಗಳಿಗೆ ಸೇರಿಕೊಂಡ ಕೇರಳದ 32 ಸಾವಿರ ಮಹಿಳೆಯರು ಕಣ್ಮರೆಯಾಗುವುದರ ಸುತ್ತ ಚಿತ್ರದ ಕಥೆ ಸಾಗುತ್ತದೆ ಎಂದು ಹೇಳಿದ್ದಾರೆ

ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಅದಾ ಶರ್ಮ (Ada Sharma) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮೇ ಐದರಂದು ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ ಈಗ ಕೇರಳ ಸರ್ಕಾರ ಸಿನಿಮಾ ಬಿಡುಗಡೆಯ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಆದ ಕಾರಣ ಸಿನಿಮಾ ಅಂದುಕೊಂಡಂತೆ ಮೇ ಐದಕ್ಕೆ ಬಿಡುಗಡೆ ಆಗುತ್ತದೆಯೋ, ಇಲ್ಲವೋ ಎನ್ನುವ ಪ್ರಶ್ನೆಗಳು ಮೂಡಿವೆ. ಇದಕ್ಕೆ ಉತ್ತರ ದೊರೆಯಬೇಕಾದರೆ ಮೇದರವರೆಗೆ ಕಾದು ನೋಡಲೇ ಬೇಕಾಗಿದೆ.

Leave a Comment