ಕೇರಳ ಸ್ಟೋರಿಗೆ ಅಮೆರಿಕಾದಲ್ಲಿ ಇದೆಂತಾ ಕ್ರೇಜ್: ಸಿನಿಮಾನ ಟೀಕೆ ಮಾಡೋರು ಈಗ ಏನಂತಾರೆ?
The Kerala Story : ದಿ ಕೇರಳ ಸ್ಟೋರಿ ಸದ್ಯಕ್ಕೆ ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿರುವ ಸಿನಿಮಾ. ಈ ಸಿನಿಮಾ ಕಳೆದ ಮೇ ತಿಂಗಳಿನಲ್ಲಿ ಬಿಡುಗಡೆ ಆಯಿತು. ಆದರೆ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸಿನಿಮಾ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸದ್ದು ಮಾಡುತ್ತಲೇ ಇದೆ. ಈ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗಲೇ ಇಡೀ ದೇಶದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿತ್ತು.
ಅನಂತರ ಬಾರೀ ಟೀಕೆಗಳು, ಚರ್ಚೆಗಳ ನಡುವೆಯೇ ಸಿನಿಮಾ ಬಿಡುಗಡೆ ಆಯಿತು. ಸಿನಿಮಾಗೆ ಒಂದು ಕಡೆ ಮೆಚ್ಚುಗೆಗಳು ಹರಿದು ಬರುತ್ತಿದ್ದರೆ ಮತ್ತೊಂದು ಕಡೆ ಟೀಕೆಗಳು ಕೇಳಿ ಬಂದವು. ಇದನ್ನು ಒಂದು ಪ್ರೊಪಗ್ಯಾಂಡ (propaganda) ಸಿನಿಮಾ ಎನ್ನುವಂತೆಯೇ ಬಿಂಬಿಸಲಾಯಿತು. ಇದನ್ನೂ ಓದಿ: ಈ ವಾರದ ಸಾಧಕನ ಸುಳಿವು ಕೊಟ್ಟ ವಾಹಿನಿ: ವೀಕೆಂಡ್ ಟೆಂಟ್ ಗೆ ಈ ವಾರ ಬರೋ ಅತಿಥಿ ಯಾರು ಗೆಸ್ ಮಾಡಿ!
ಅದಾ ಶರ್ಮಾ (Ada Sharma) ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಹಿಂದೂ (Hindu) ಯುವತಿಯನ್ನು ಹೇಗೆ ಇಸ್ಲಾಂಗೆ (Islam) ಮತಾಂತರಗೊಂಡು ಐಸಿಸ್ ಗೆ ಸೇರಿಕೊಳ್ಳುವ ಕಥೆಯನ್ನು ಒಳಗೊಂಡಿದೆ. ಮತಾಂತರದ ನಂತರ ಹೇಗೆ ಯುವತಿಯರು ಇಸ್ಲಾಮಿಕ್ ರಾಷ್ಟ್ರ ತಲುಪುತ್ತಾರೆಂದು ತೋರಿಸಲಾಗಿದೆ.
ಇನ್ನು ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬಂದರೆ ಬಾಕ್ಸಾಫೀಸಿನಲ್ಲಿ (Kerala story box office collection) ಈ ವಿಚಾರದಲ್ಲಿ ಸಹಾ ಸಿನಿಮಾ ಮುಂದೆ ಇದ್ದು ಈಗಾಗಲೇ ಸಿನಿಮಾ ಇನ್ನೂರು ಕೋಟಿಗಿಂತಲೂ ಅಧಿಕ ಗಳಿಕೆಯನ್ನು ಕಂಡು ಮುಂದೆ ಸಾಗುತ್ತಿದೆ.
ಭಾರತದಲ್ಲಿ ಸಿನಿಮಾದ ಕಲೆಕ್ಷನ್ ಈಗ ಸ್ವಲ್ಪ ಇಳಿಮುಖ ಕಂಡಿದೆ. ಆದರೆ ಅಮೆರಿಕಾದಲ್ಲಿ (America) ದಿ ಕೇರಳ ಸ್ಟೋರಿ ಸಿನಿಮಾದ ಶೋ ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಅಚ್ಚರಿಯ ವಿಷಯವೊಂದು ಈಗ ಹೊರ ಬಂದು ಎಲ್ಲರ ಗಮನವನ್ನು ಸೆಳೆಯುತ್ತಿದೆ.
ದಿ ಕೇರಳ ಸ್ಟೋರಿ ಸಿನಿಮಾದ ಇಂಪ್ಯಾಕ್ಟ್ ಅಡ್ವೈಸರ್ ಪ್ರಿಯಾ ಸಮಂತ್ ಇತ್ತೀಚಿಗೆ ಮಾದ್ಯಮವೊಂದರ ಜೊತೆಗೆ ಮಾತನಾಡುತ್ತಾ, ಕೇರಳ ಸ್ಟೋರಿ ಸಿನಿಮಾ ಅಮೆರಿಕಾದಲ್ಲಿ ಇನ್ನೂರು ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿದೆ ಎಂದು ಹೇಳಿದ್ದಾರೆ.
ಸಿನಿಮಾದ ಶೋ ಗಳ ಸಂಖ್ಯೆ ಕೂಡಾ ಅಮೆರಿಕಾದಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಸಿನಿಮಾದ ಚಿತ್ರ ಇರುವ ಟೀ ಶರ್ಟ್ ಸಹಾ ಧರಿಸುತ್ತಿದ್ದಾರೆ ಎನ್ನಲಾಗಿದೆ. ದಿ ಕೇರಳ ಸ್ಟೋರಿ ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಂಡ ಮಹಿಳಾ ಪ್ರಧಾನ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಸಹಾ ಪಡೆದುಕೊಂಡಿದೆ.