ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ: ಇಂತಹ ಸಿನಿಮಾ ಕನ್ನಡದಲ್ಲಿ ಬಹಳ ಕಡಿಮೆ

Written by Soma Shekar

Published on:

---Join Our Channel---

Meghana Raj: ಸ್ಯಾಂಡಲ್ವುಡ್ ನ‌ ಜನಪ್ರಿಯ ನಟಿ ಮೇಘನಾ ರಾಜ್ ತಮ್ಮ ವಿವಾಹದ ನಂತರ ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಈಗ ನಟಿಯು ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದು ‘ತತ್ಸಮ ತದ್ಬವ’ (Tatsama Tadbhava)  ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಕೆಲವೇ ದಿನಗಳ ಹೊಂದೆಯಷ್ಟೇ ಈ ಸಿನಿಮಾದ ಚಿತ್ರೀಕರಣ ಸಹಾ ಸಂಪೂರ್ಣವಾಗಿದೆ. ಈಗ ನಟಿ ಮೇಘನಾ ರಾಜ್ ಅವರ ಜನ್ಮದಿನದ (Birthday) ಹಿನ್ನೆಲೆಯಲ್ಲಿ ಅವರು ಮುಖ್ಯ ಪಾತ್ರದಲ್ಲಿರುವ ತತ್ಸಮ ತದ್ಭವ ಪೋಸ್ಟರ್ ಅನ್ನು (Poster) ಚಿತ್ರ ತಂಡ ಬಿಡುಗಡೆ ಮಾಡಿದೆ.

ಮೇಘನಾ ರಾಜ್ ಅವರು ತಮ್ಮ ಸಿನಿಮಾದ ಕುರಿತಾಗಿ ಮಾಹಿತಿಯನ್ನು ನೀಡುತ್ತಾ ಈ ಹಿಂದೆ, ನಿಜವಾದ ಸ್ನೇಹಿತರು ಸದಾ ನಮ್ಮೊಂದಿಗೆ ಇರುತ್ತಾರೆ. ನನಗೆ ಅಂತಹ ಸ್ನೇಹಿತರಿದ್ದಾರೆ. ಅವರು ಈ ಸಿನಿಮಾ ನನಗಾಗಿ ಮಾಡಿದ್ದಾರೆ. ಈ ಸಿನಿಮಾದ ಮೂಲಕ ನಾನು ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶವನ್ನು ಮಾಡುತ್ತಿದ್ದೇನೆ. ಈ ಚಿತ್ರವನ್ನು ಪನ್ನಗಾಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಿಸಿದ್ದಾರೆ. ಇದಕ್ಕೆ ವಿಶಾಲ್ ಆತ್ರೇಯ ಒಂದೊಳ್ಳೆ ಕಥೆ ಮಾಡಿ, ನಿರ್ದೇಶನವನ್ನು ಮಾಡಿದ್ದಾರೆ. ಒಟ್ಟಾರೆ, ಈವರೆಗೂ ಇಂತಹ ಪಾತ್ರವನ್ನು ನಾನು ಮಾಡಿರಲಿಲ್ಲ. ಮುಂದೆ ಮಾಡ್ತೀನೋ, ಇಲ್ವೋ ಗೊತ್ತಿಲ್ಲ ಎಂದಿದ್ದರು. ಇದನ್ನೂ ಓದಿ : ಸಮಂತಾಗೆ ಸಖತ್ ಟಾರ್ಚರ್: ಹೊಸ ಥೆರಪಿ ಕಂಡು ಭಾವುಕರಾದ ಅಭಿಮಾನಿಗಳು! ಏನಾಯ್ತು ನಟಿಗೆ??

ಈ ಸಿನಿಮಾದ ಕಥೆಯನ್ನು ನನಗೆ ನಿರ್ದೇಶಕರು ವಿವರಿಸಿ ಹೇಳಿದಾಗ ನನಗೆ ಅದು ಬಹಳ ಇಷ್ಟವಾಯಿತು. ಕಥೆಯಲ್ಲೊಂದು ಮುಖ್ಯವಾದ ಪಾತ್ರ ಬರುತ್ತದೆ. ಈ ಪಾತ್ರವನ್ನು ಮಾಡುತ್ತಿರುವವರು ಯಾರೆಂದು ನಾನು ಕೇಳಿದೆ. ಅವರು ಆಗ ಅದನ್ನು ನೀವೇ ಮಾಡುತ್ತಿದ್ದೀರಾ ಎಂದು ಹೇಳಿದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿ ನನಗಿದೆಯೆಂದು ಹೇಳಿದ್ದು, ಈ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ (Prajwal Devaraj) ಸಹಾ ಸಾಥ್ ನೀಡಿದ್ದಾರೆ.

ಈ ಸಿನಿಮಾವೊಂದು ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಇಂತಹ ಸಿನಿಮಾ ಕನ್ನಡದಲ್ಲಿ ತೆರೆ ಕಂಡಿರುವುದಿ ಅಪರೂಪ. ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಬಹುದು ಎನ್ನುವ ನಂಬಿಕೆ ನನಗಿದೆ ಎಂದು ಸಿನಿಮಾ ನಿರ್ದೇಶಕ ವಿಶಾಲ್ ಆತ್ರೇಯ ಅವರು ಹೇಳಿದ್ದಾರೆ. ಪ್ರಸ್ತುತ ಚಿತ್ರ ತಂಡವು ರೀರೆಕಾರ್ಡಿಂಗ್ ನಲ್ಲಿ ತೊಡಗಿಕೊಂಡಿದೆ. ಚುನಾವಣೆ ಬಳಿಕ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ, ನಿರ್ಮಾಪಕ ಪನ್ನಗಾಭರಣ (Pannagabharana) ಮಾಹಿತಿ ನೀಡಿದ್ದಾರೆ.

ಕನ್ನಡದ ಮತ್ತೊಬ್ಬ ಹಿರಿಯ ನಟಿ ಶ್ರುತಿ (Shruthi) ಅವರು ಈ ಚಿತ್ರದಲ್ಲೊಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಅವರು ಮಾತನಾಡುತ್ತಾ, ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ನೀಡುವುದು ಮುಖ್ಯವಾಗಿದೆ. ಮೇಘನಾ ರಾಜ್ (Meghana Raj) ವಿಷಯದಲ್ಲಿ ಈಗ ಅವರ ಸ್ನೇಹಿತರೆಲ್ಲರೂ ಒಟ್ಟಾಗಿ ಸೇರಿ, ಅವರ ರೀ ಎಂಟ್ರಿಗೊಂದು ಉತ್ತಮ ಅವಕಾಶ ಸೃಷ್ಟಿಸಿದ್ದು, ಈ ಸಿನಿಮಾದಲ್ಲಿ ನಾನು ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

Leave a Comment