Tata Nexon ಬೆಲೆ ಕೇಳಿಯೇ ಸಂತೋಷದಿಂದ ಕುಣೀತಾರೆ ಜನ: ಎಷ್ಟಕ್ಕೆ ಸಿಗ್ತಿದೆ ಈ SUV?

0 5,061

Car News : ಟಾಟಾ ಮೋಟಾರ್ಸ್ ಸೆಪ್ಟೆಂಬರ್ 14, 2023 ರಂದು ಟಾಟಾ ನೆಕ್ಸಾನ್ ಫೇಸ್‌ ಲಿಫ್ಟ್ ಅನ್ನು ಲಾಂಚ್ ಮಾಡಿದೆ. ಈ ಕಾರು (Car News) ವಿನೂತನ ವಿನ್ಯಾಸ, ಸುಧಾರಿತ ಮತ್ತು ಆಧುನಿಕ ವೈಶಿಷ್ಟ್ಯಗಳು, ಉತ್ತಮ ಎಂಜಿನ್ ಅನ್ನು ಹೊಂದಿರುವ Nexon ನ ಅಪ್ಡೇಟೆಡ್ ಆವೃತ್ತಿಯಾಗಿ ಬಿಡುಗಡೆಯಾಗಿದೆ. ಟಾಟಾ ನೆಕ್ಸಾನ್ ಫೇಸ್‌ ಲಿಫ್ಟ್‌ ನ ಬಾಹ್ಯ ವಿನ್ಯಾಸವು ಸಂಪೂರ್ಣವಾಗಿ ವಿನೂತನವಾಗಿದೆ.

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ವೈಶಿಷ್ಟ್ಯಗಳು ( Tata Nexon facelift Features) :
ಹೊಸ 10.25 ಇಂಚಿನ ಟಚ್‌ಸ್ಕ್ರೀನ್, ಇನ್ಫೋಟೈನ್‌ಮೆಂಟ್ ಸಿಸ್ಟಮ್,ಹೊಸ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,  ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಒಂದು ಸುಂದರವಾದ ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ, ಆರು ಏರ್ ಬ್ಯಾಗ್ ಗಳನ್ನು ಇದರಲ್ಲಿ ನೀಡಲಾಗಿದೆ.

ಇದರ ವಿನ್ಯಾಸ ವಿನೂತನವಾಗಿದ್ದು, ಇದು ಹೊಸ ಗ್ರಿಲ್, ಹೆಡ್‌ ಲ್ಯಾಂಪ್, ಟೈಲ್ಯಾಂಪ್ ಮತ್ತು ಬಂಪರ್ ಅನ್ನು ಹೊಂದಿದೆ. ಹೊಸ ಡ್ಯಾಶ್‌ ಬೋರ್ಡ್, ಸೀಟ್ ಗಳು ಮತ್ತು ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ಒಳಾಂಗಣದಲ್ಲಿ (interior) ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಅಪ್ಡೇಟ್ ಆಗಿರುವ ವೈಶಿಷ್ಟ್ಯಗಳನ್ನು ಹೊಂದಿದೆ.

ಉತ್ತಮ ಎಂಜಿನ್‌ಗಳು (Good Engines)
ಟಾಟಾ ನೆಕ್ಸಾನ್ ಫೇಸ್‌ ಲಿಫ್ಟ್‌ನಲ್ಲಿನ ಇಂಜಿನ್ ಗಳ ವಿಚಾರಕ್ಕೆ ಬಂದಾರ ಇದರಲ್ಲಿ ಎರಡು ಇಂಜಿನ್ ಆಯ್ಕೆಗಳು ಲಭ್ಯವಿದೆ  1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್. ಪೆಟ್ರೋಲ್ ಎಂಜಿನ್ 118bhp ಪವರ್ ಮತ್ತು 170Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಆದರೆ ಡೀಸೆಲ್ ಎಂಜಿನ್  ನ ಕಡೆಗೆ ಗಮನ ನೀಡಿದರೆ ಇದು 110bhp ಪವರ್ ಮತ್ತು 260Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಬೆಲೆ (Price): ಟಾಟಾ ನೆಕ್ಸಾನ್ ಫೇಸ್‌ ಲಿಫ್ಟ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ 8.10 ಲಕ್ಷದಿಂದ ಪ್ರಾರಂಭವಾಗುತ್ತದೆ.

Leave A Reply

Your email address will not be published.