83 ಮೂವಿ: ಸಿನಿಮಾಕ್ಕೆ ನಷ್ಟ, ರಣವೀರ್ ಸಿಂಗ್ ಸಂಭಾವನೆಗೆ ಬಿತ್ತು ಪೆಟ್ಟು, ನಟನ ಸಂಭಾವನೆ ಕೈ ಬಿಡುವ ಸಾಧ್ಯತೆ!!

ಭಾರತೀಯ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರು ಕ್ರಿಕೆಟ್ ಲೆಜೆಂಡ್ ಎನ್ನುವುದರಲ್ಲಿ ಯಾವುದೇ ಅನುಮಾನ ಖಂಡಿತ ಇಲ್ಲ. 1983 ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ನಲ್ಲಿ ಮಾಡಿದ ಸಾಧನೆಯ ಬಗ್ಗೆ, ಅ್ರ ಸುತ್ತ ಹೆಣೆದ ಕಥೆಯನ್ನಾಧರಿಸಿ ಸಿದ್ಧವಾದ ಸಿನಿಮಾ 83. ಈ ಸಿನಿಮಾ ಬಿಡುಗಡೆಗೆ ಮೊದಲೇ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಬಾಲಿವುಡ್ ನಟ ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಲೆಜೆಂಡರಿ ಆಟಗಾರ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನಷ್ಟು ಕುತೂಹಲವನ್ನು ಮೂಡಿಸಿತ್ತು. ಅಲ್ಲದೇ ಸಿನಿಮಾ […]

Continue Reading

ಇಷ್ಟು ಸಂಭಾವನೆ ಪಡೆದ ಇನ್ನೊಬ್ಬ ನಟನಿಲ್ಲ: ಬಾಲಿವುಡ್ ಸ್ಟಾರ್ ಗಳಿಗೆ ಪ್ರಭಾಸ್ ಟಕ್ಕರ್

ಬಾಹುಬಲಿ, ಸಾಹೋ ಸಿನಿಮಾಗಳ ನಂತರ ತೆಲುಗು ನಟ ಪ್ರಭಾಸ್ ಭಾರತೀಯ ಸಿನಿಮಾ ರಂಗದ ಸ್ಟಾರ್ ನಟರಲ್ಲಿ ಒಬ್ಬರೆನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಭಾಸ್ ವೃತ್ತಿ ಜೀವನದಲ್ಲಿ ಬಾಹುಬಲಿ ಸಿನಿಮಾ ಅವರ ಖ್ಯಾತಿಯನ್ನು ಭಾರತದ ಗಡಿಯಾಚೆಗೂ ಕೊಂಡೊಯ್ದಿದ್ದು, ಈ ನಟನಿಗೆ ವಿಶ್ವದಾದ್ಯಂತ ಸಹಾ ಅಭಿಮಾನಿಗಳು ಇದ್ದು, ದೊಡ್ಡ ಸ್ಟಾರ್ ಡಂ ಹೊಂದಿರುವ ನಟ ಪ್ರಭಾಸ್. ಪ್ರಭಾಸ್ ಸಿನಿಮಾಗಳು ಬಿಡುಗಡೆ ನಂತರ ಹೊಸ ದಾಖಲೆಗಳನ್ನು ಬರೆಯುವುದು ಸಹಾ ಸಾಮಾನ್ಯ ಎನ್ನುವಂತಾಗಿದೆ. ‌ ಸಿನಿಮಾಗಳು ದಾಖಲೆ ಮಾಡುವುದು ಒಂದು ಕಡೆಯಾದರೆ ಇದೀಗ ನಟ […]

Continue Reading

ರಾಕೆಟ್ ವೇಗದಲ್ಲಿ ಏರುತ್ತಿದೆ ಟಾಲಿವುಡ್ ನಟರ ಸಂಭಾವನೆ: ಶಾಕಿಂಗ್ ಎನ್ನುವಂತಿದೆ ನಟರ ಸಂಭಾವನೆ

ಇತ್ತೀಚಿನ ದಿನಗಳಲ್ಲಿ ಟಾಲಿವುಡ್ ಸಿನಿಮಾ ಹೀರೋ ಗಳ ಸಿನಿಮಾಗಳಿಗಿಂತ ಅವರ ಸಂಭಾವನೆಯ ವಿಷಯ ಸಖತ್ ಸದ್ದು ಮಾಡುತ್ತಿದೆ. ಅಲ್ಲದೇ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಏರುತ್ತಿರುವ ಹಾಗೆಯೇ ಟಾಲಿವುಡ್ ನಟರ ಸಂಭಾವನೆಯ ಮೊತ್ತ ಕೂಡಾ ಏರುತ್ತಿದೆ. ಬಾಹುಬಲಿ ಸಿನಿಮಾಗಳ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸ್ಟಾರ್ ಎನಿಸಿಕೊಂಡಿರುವ ನಟ ಪ್ರಭಾಸ್ ಪ್ರಸ್ತುತ ಟಾಲಿವುಡ್ ನಟರಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದು, ಪ್ರಭಾಸ್ ಸಂಭಾವನೆ ನಿಜಕ್ಕೂ ಶಾ ಕಿಂ ಗ್ ಎನ್ನಲಾಗಿತ್ತಿದೆ. ಟಾಲಿವುಡ್ ಚಿತ್ರ […]

Continue Reading

ಸಿನಿಮಾದಲ್ಲಿ ಹೀರೋ ವಿಜಯ ದೇವರ ಕೊಂಡ, ಆದ್ರೆ ಹೆಚ್ಚು ಸಂಭಾವನೆ ಮಾತ್ರ ಅತಿಥಿ ಪಾತ್ರಕ್ಕೆ ಹೊರತು ನಾಯಕನಿಗಲ್ಲ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಿಗೆ ಸಿಗುವಷ್ಟು ಸಂಭಾವನೆ ಬೇರೆ ಯಾವ ಕಲಾವಿದರಿಗೂ ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದರಲ್ಲೂ ಸ್ಟಾರ್ ನಟರಾದರೆ ಸಿನಿಮಾವೊಂದರ ಸಂಭಾವನೆಯಾಗಿ ಕೋಟಿ ಕೋಟಿ ತಮ್ಮ ಜೇಬಿಗೆ ಇಳಿಸುತ್ತಾರೆ. ಸಿನಿಮಾ ಹಿಟ್ ಆದರೆ ಮುಂದಿನ ಸಿನಿಮಾಕ್ಕೆ ಸಂಭಾವನೆ ಜಾಸ್ತಿಯಾಗಿ ಬಿಡುತ್ತದೆ. ಆದರೆ ಇದೀಗ ಟಾಲಿವುಡ್ ನ ಯುವ ನಟ ವಿಜಯ ದೇವರಕೊಂಡ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನಾಯಕನಿಗಿಂತಲೂ ಹೆಚ್ಚು ಸಂಭಾವನೆಯನ್ನು ಮತ್ತೊಬ್ಬರಿಗೆ ನೀಡಲಾಗಿದೆ ಎನ್ನುವ ಸುದ್ದಿ ಈಗ ಕುತೂಹಲ ಮೂಡಿಸಿದೆ. ನಟ ವಿಜಯ್ […]

Continue Reading

OTT ಯಲ್ಲಿ ಬಿಂದಾಸ್ ಬಿಗ್ ಬಾಸ್: ಸ್ಪರ್ಧಿಗಳ ಸಂಭಾವನೆ ತಿಳಿದು ಶಾಕ್ ಆದ ನೆಟ್ಟಿಗರು: ಯಾರಿಗೆ ಎಷ್ಟು ಸಂಭಾವನೆ??

ಬಿಗ್ ಬಾಸ್ ರಿಯಾಲಿಟಿ ಶೋ ಎಷ್ಟು ಜನಪ್ರಿಯತೆ ಪಡೆದಿದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದರಲ್ಲೂ ಹಿಂದಿ ಬಿಗ್ ಬಾಸ್ ಶೋ ಈಗಾಗಲೇ ಭರ್ಜರಿ, ಯಶಸ್ವಿ ಎನಿಸುವ ಹದಿನಾಲ್ಕು ಸೀಸನ್ ಗಳನ್ನು ಮುಗಿಸಿದೆ. ಬಿಗ್ ಬಾಸ್ ಹಿಂದಿ ಪ್ರತಿಯೊಂದು ಸೀಸನ್ ನಲ್ಲಿ ಸಹಾ ಟಿ ಆರ್ ಪಿ ವಿಷಯದಲ್ಲಿ ದಾಖಲೆಯನ್ನು ಬರೆಯುತ್ತದೆ. ಸಾಕಷ್ಟು ಕಾಂ ಟ್ರ ವರ್ಸಿಗಳು ಸೃಷ್ಟಿಯಾಗುತ್ತದೆ, ಬಿಗ್ ಬಾಸ್ ಸ ಸ್ಪರ್ಧಿಗಳ ಹೆಸರಿನಲ್ಲೇ ಪೇಜ್ ಗಳು ಸೃಷ್ಟಿಯಾಗುತ್ತದೆ. ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳಗಳ […]

Continue Reading

ಕೊನೇ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ದಿವ್ಯ ಸುರೇಶ್ ಅವರಿಗೆ ಸಿಕ್ತು ಉತ್ತಮ ಸಂಭಾವನೆ

ಬಿಗ್ ಬಾಸ್ ಸೀಸನ್ 8 ಇನ್ನೇನು ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಯಶಸ್ವಿ ಸೀಸನ್ ಒಂದು ಮುಗಿಯಲಿದೆ. ಹೌದು ಬಿಗ್ ಬಾಸ್ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪ್ರತಿ ಸೀಸನ್ ಸಹಾ ಒಂದಲ್ಲಾ ಒಂದು ಹೊಸತನದಿಂದ ಮೂಡಿ ಬರುತ್ತೆ. ಬಿಗ್ ಬಾಸ್ ನ ಒಂದು ಹೊಸ ಸೀಸನ್ ಆರಂ‌ಭ ಆಗುತ್ತೆ ಅನ್ನೋ ವಿಷಯ ಘೋಷಣೆ ಆದ ಕೂಡಲೇ ಸಾಮಾಜಿಕ ಮಾದ್ಯಮಗಳಲ್ಲಿ ಅದರ ಚರ್ಚೆ ಸಹಾ ಆರಂಭ ಆಗಿ […]

Continue Reading

ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ 16 ವಾರ ಕಳೆದ ಶುಭಾ ಪೂಂಜಾ ಅವರಿಗೆ ಸಿಕ್ಕ ಸಂಭಾವನೆ ಎಷ್ಟು??

ಕನ್ನಡ ಬಿಗ್ ಬಾಸ್ ಸೀಸನ್ 8 ತನ್ನ ಮುಕ್ತಾಯದ ಹಂತವನ್ನು ಯಶಸ್ವಿಯಾಗಿ ತಲುಪಿದೆ. ಈ ಬಾರಿ ಕೊರೋನಾ ಕಾರಣದಿಂದ ಅರ್ಧದಲ್ಲೇ ನಿಂತಿತ್ತು ಬಿಗ್ ಬಾಸ್. ಆದರೆ ಸೆಕೆಂಡ್ ಇನಿಂಗ್ಸ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಭರ್ಜರಿ ಯಶಸ್ಸನ್ನು ಪಡೆದುಕೊಂಡಿದ್ದು, ಬಿಗ್ ಬಾಸ್ ಗ್ರಾಂಡ್ ಫಿನಾಲೆ ಗೆ ಇನ್ನು ಕೇವಲ ಒಂಬತ್ತು ದಿನಗಳು ಮಾತ್ರ ಉಳಿದಿದೆ. ಈಗ ಎಲ್ಲರ ಕುತೂಹಲವೂ ಫಿನಾಲೆ ವಾರದಲ್ಲಿ ಮನೆಯಲ್ಲಿ ಉಳಿಯುವ ಟಾಪ್ 5 ಸ್ಪರ್ಧಿಗಳು ಯಾರಾಗಲಿದ್ದಾರೆ ಎನ್ನುವುದು ಹಾಗೂ ಈ ಬಾರಿ […]

Continue Reading

ಬಿಗ್ ಬಾಸ್ ಮನೆಯಿಂದ ಔಟ್ ಆದ ಚಕ್ರವರ್ತಿ ಚಂದ್ರಚೂಡ್ ಗೆ ಸಿಕ್ಕಿತು ಆಕರ್ಷಕ ಸಂಭಾವನೆ

ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರು ಏಪ್ರಿಲ್ 1ರಂದು ಬಿಗ್ ಬಾಸ್ ಮನೆಯನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶಿಸಿದ್ದರು. ಆದರೂ ಮನೆಯಲ್ಲಿದ್ದಷ್ಟು ಕಾಲವೂ ಒಂದಲ್ಲ ಒಂದು ವಿಚಾರಕ್ಕೆ ಜಗಳ, ವಿ ವಾ ದ, ಕೋಪ ಹಾಗೂ ಮನಸ್ತಾಪ ಗಳಿಂದಲೇ ಹೆಚ್ಚು ಸದ್ದು ಮಾಡಿದರು. ಅವರು ಆಡಿದ ಮಾತುಗಳಿಂದ ಮನೆಯ ಸದಸ್ಯರು ಬೇಸರ ಪಟ್ಟುಕೊಂಡರು. ಕೆಲವರಿಗೆ ಚಂದ್ರಚೂಡ್ […]

Continue Reading