ಭಿಕ್ಷೆ ಬೇಡಲಾರೆ ಎಂದು ಸ್ವಾಭಿಮಾನದ ಬದುಕಿಗಾಗಿ ಈ ಅಜ್ಜಿ ಮಾಡಿದ ಕೆಲಸ ನೋಡಿ ಹೇಗಿದೆ: ನಿಜವಾದ ಸ್ಪೂರ್ತಿ ಇವರು

ಜೀವನದಲ್ಲಿ ಸಮಸ್ಯೆಗಳು ಎದುರಾಯಿತು ಎಂದರೆ ಕೆಲವರು ಅಲ್ಲಿಗೆ ತಮ್ಮ ಜೀವನವೇ ಮುಗಿದು ಹೋಯಿತೆನ್ನುವ ಹಾಗೆ ತಮ್ಮ ಜೀವನದ ಮೇಲೆ ವಿರಕ್ತರಾಗಿಬಿಡುತ್ತಾರೆ. ಆಕಾಶವೇ ಕಳಚಿ ತಮ್ಮ ತಲೆಯ ಮೇಲೆ ಬಿತ್ತು ಎನ್ನುವ ಹಾಗೆ ಚಿಂತೆಯಲ್ಲೇ ಸಮಯ ಕಳೆಯುತ್ತಾ, ಜೀವನವನ್ನು ಇನ್ನಷ್ಟು ಮತ್ತಷ್ಟು ದುರ್ಬರ ಮಾಡಿಕೊಳ್ಳುತ್ತಾರೆ. ಆದರೆ ಇಂತಹವರ ನಡುವೆಯೇ ಕೆಲವರು ತಮ್ಮೆಲ್ಲಾ ಸವಾಲುಗಳನ್ನು ಎದುರಿಸಿ ಮುಂದೆ ಸಾಗುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಅಂತಹವರು ಕಾಣುವುದು ತೀರಾ ವಿರಳವೆಂದೇ ಹೇಳಬಹುದು. ಆದರೆ ಇಂತಹ ಜನರು ಜೀವನದಲ್ಲಿ ಎದುರಾಗುವು ಸಮಸ್ಯೆಗಳನ್ನು ನಗುತ್ತಲೇ […]

Continue Reading

4ನೇ ವಯಸ್ಸಿನಲ್ಲೇ ಎರಡು ಕೈ ಕಳ್ಕೊಂಡ, ಆದರೆ ಕಾಲಿನಿಂದಲೇ ತನ್ನ ಅದೃಷ್ಟ ಬದಲಿಸಿಕೊಂಡ: ಸ್ಪೂರ್ತಿಯ ಕಥೆ

ಜೀವನದಲ್ಲಿ ನಾವು ನಮ್ಮ ಸಮಸ್ಯೆಗಳು, ತೊಂದರೆಗಳು ಹಾಗೂ ಪರಿಸ್ಥಿತಿಗಳ ಜೊತೆಗೆ ಹೋರಾಟ ನಡೆಸುತ್ತೇವೆ ಆದರೆ ನಮ್ಮ ಅದೃಷ್ಟವನ್ನು ನಾವು ಬದಲಿಸುವುದು ಸಾಧ್ಯವಿಲ್ಲ. ಬಹಳಷ್ಟು ಜನರು ತಮ್ಮ ದುರದೃಷ್ಟವನ್ನು ನೆನೆದು ಗೋಗರೆಯುವುದುಂಟು. ತಮ್ಮ ದುರಾದೃಷ್ಟವನ್ನು ಶಪಿಸುತ್ತಾ ಕೂರುವ ಇಂತಹವರು ಜನರ ಸಹಾನುಭೂತಿಯ ವಸ್ತುವಾಗಿ ಬಿಡುತ್ತಾರೆ. ಆದರೆ ನಾವು ಇಂದು ನಮಗೆ ಹೇಳಲು ಹೊರಟಿರುವ ವ್ಯಕ್ತಿಯು ಇಂತಹವರಿಗಿಂತ ಭಿನ್ನವಾಗಿದ್ದು, ಅವರು ತಮ್ಮ ಶ್ರಮದಿಂದ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ. ತಂದೆ ತಾಯಿ ಪ್ರೀತಿಯನ್ನು ಪಡೆಯದೇ, ಎರಡೂ ಕೈಗಳು ಇಲ್ಲದೇ ಹೋದರೂ ಜಗತ್ತನ್ನು […]

Continue Reading

80 ನೇ ವಯಸ್ಸಿನಲ್ಲಿ ಕೇರಳದಿಂದ ಲಡಾಖ್ ಗೆ ಸೈಕಲ್ ನಲ್ಲಿ ಪ್ರವಾಸ: ಇವರ ಸಾಮರ್ಥ್ಯ ಕಂಡು ಜೈ ಹೋ ಎಂದ ನೆಟ್ಟಿಗರು

ಭಾರತದ ನೆರೆಯ ರಾಷ್ಟ್ರವಾದ ಆಫ್ಘಾನಿಸ್ತಾನ ದಲ್ಲಿ ತಾಲಿಬಾನಿಗಳ ಆಡಳಿತ ಬಂದ ಮೇಲೆ ಎಲ್ಲೆಡೆ ಒಂದು ಭೀ ತಿಯ ಹಾಗೂ ಆ ತಂಕದ ವಾತಾವರಣ ನೆಲೆಗೊಂಡಿದೆ. ಆದರೆ ಈ ಮಧ್ಯೆ ಕೇರಳದ 80 ವರ್ಷದ ವ್ಯಕ್ತಿಯೊಬ್ಬರು ಭಾರತದ ಶಕ್ತಿ ಏನೆಂಬುದನ್ನು ಪ್ರದರ್ಶಿಸುವತ್ತ ಅಡಿಯಿಟ್ಟಿದ್ದಾರೆ. ಕೇರಳದ ತ್ರಿಶೂರ್ ನ ನಿವಾಸಿಯಾಗಿರುವ ಜೊಸೆಟನ್ ಅವರು ಸುರಿಯುವ ಹಿಮದ ನಡುವೆಯೂ ಹಿಮಾಲಯದ ಉದ್ದಗಲಗಳನ್ನೇ ಅಳೆದರೇನೋ ಎನ್ನುವಂತೆ ತಮ್ಮ ಪಯಣವನ್ನು ನಡೆಸಿದ್ದು, ದೊಡ್ಡ ಸುದ್ದಿಯಾಗಿದ್ದಾರೆ. ಜೊಸೆಟನ್ ಅವರು ತಮ್ಮ ಪಯಣ ಕ್ಕೆ ಬಳಿಸಿದ ವಾಹನ […]

Continue Reading

ಕೈ ಇಲ್ಲವೆಂದು ಹೆತ್ತ ಮಗನನ್ನು ಭಿಕ್ಷುಕರಿಗೆ ಮಾರಿದ ತಂದೆ-ತಾಯಿ: ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆದು ಆದ ಚಿಕನ್ ಟಿಕ್ಕಾ ಕಿಂಗ್

ಧೈರ್ಯ ಮತ್ತು ವಿಶ್ವಾಸದಿಂದ ಕೆಲಸ ಮಾಡುವವರಿಗೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಸಹಾ ಅವರು ಅದನ್ನು ಎದುರಿಸಿ ಮುಂದೆ ಹೆಜ್ಜೆಗಳನ್ನು ಇಟ್ಟು ಸಾಗುತ್ತಾರೆ.‌ ಅವರು ತಮ್ಮ ಪ್ರತಿ ಕಷ್ಟಗಳ ನಡುವೆಯೂ ಸಹಾ ಗೆಲುವನ್ನು ಸಾಧಿಸುತ್ತಾರೆ. ಹಾಗೆ ಜೀವನದಲ್ಲಿ ಎದುರಾದ ಎಲ್ಲಾ ಕಠಿಣತೆಗಳನ್ನು ಎದುರಿಸಿ ತನ್ನ ಜೀವನದಲ್ಲಿ ಒಂದು ಅದ್ವಿತೀಯ ಸಾಧನೆಯನ್ನು ಮಾಡಿದವರು, ಅನೇಕರಿಗೆ ಇಂದು ಸ್ಪೂರ್ತಿಯಾಗಿರುವವರು ಎಂದರೆ ಅವರು ತೇಜಿಂದರ್ ಮೆಹ್ರಾ. ಹುಟ್ಟಿನಿಂದಲೇ ಒಂದು ಕೈಯಿಲ್ಲದೇ ಇರುವ ತೇಜಿಂದರ್ ಇಂದು ತಮ್ಮ ಜೀವನವನ್ನು ತನ್ನ ಸ್ವಂತ ಶ್ರಮದಿಂದ […]

Continue Reading

ಆಕೆ ಯಾವ ನಗರದ ಬೀದಿಗಳಲ್ಲಿ ಕಸ ಗುಡಿಸಿದ್ದಳೋ ಇಂದು ಅದೇ ನಗರದ ನಗರಪಾಲಿಕೆಯಲ್ಲಿ ಅಧಿಕಾರಿ: ಸಾಧನೆ ಅಂದ್ರೆ ಇದಲ್ಲವೇ

ಮನುಷ್ಯ ಶ್ರದ್ಧೆಯಿಂದ ಹಾಗೂ ಶ್ರಮದಿಂದ ಯಾವುದಾದರೂ ಒಂದು ಗುರಿಯನ್ನು ತಲುಪಬೇಕು ಎಂದು ಪ್ರಯತ್ನವನ್ನು ಪಟ್ಟರೆ ಖಂಡಿತ ಆತ ಅಥವಾ ಆಕೆ ತಮ್ಮ ಗುರಿಯನ್ನು ತಲುಪುತ್ತಾರೆ. ಅಂತಹವರಿಗೆ ಯಶಸ್ಸು ಖಂಡಿತವಾಗಿ ದೊರೆಯುತ್ತದೆ. ಯಶಸ್ಸಿನ ಇಂತಹ ಪಯಣದ ಕುರಿತಾಗಿ ಕೇಳಲು ಬಹಳ ಸುಲಭ ಎನಿಸುತ್ತದೆ. ಆದರೆ ಇದನ್ನು ಕೆಲವೇ ಶಬ್ಧಗಳಲ್ಲಿ ಹೇಳುವುದು ಮಾತ್ರ ಅಸಾಧ್ಯವಾಗುತ್ತದೆ. ಹೌದು, ನಗರಪಾಲಿಕೆಯಲ್ಲಿ ಸ್ವಚ್ಚತಾ ಕರ್ಮಚಾರಿಯಾಗಿದ್ದವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು, ಅದೇ ನಗರ ಪಾಲಿಕೆಯಲ್ಲಿ ಅಧಿಕಾರಿಯ ಪದವಿಯನ್ನು ಪಡೆದುಕೊಂಡರೆ ಹೇಗಿರುತ್ತದೆ?? ಈ ಮಾತು ಆಶ್ಚರ್ಯ ಉಂಟು […]

Continue Reading

ಬಡ ಕುಟುಂಬದ ಸಹೋದರರ ಸಾಧನೆ: ಅಣ್ಣನಿಗೆ 11, ತಮ್ಮನಿಗೆ 6 ಬಾರಿ ಒಲಿದ ಸರ್ಕಾರಿ ಉದ್ಯೋಗಗಳು:IAS ಈಗ ಅವರ ಗುರಿ

ಬಡ ಕುಟುಂಬಗಳಲ್ಲಿ ಇಂದಿಗೂ ಸಹ ಸರ್ಕಾರಿ ಕೆಲಸ ಪಡೆಯುವುದು ಎಂದರೆ ಅದೊಂದು ಅದ್ಭುತ ಸಾಧನೆ ಎಂದು ಹೇಳಲಾಗುತ್ತದೆ. ಯಾವುದಾದರೂ ಒಂದು ಬಡ ಕುಟುಂಬದ ವ್ಯಕ್ತಿಯೊಬ್ಬ ತನ್ನ ಪ್ರತಿಭೆ ಹಾಗೂ ಶ್ರಮದಿಂದ ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡರೆ, ಆತನ ಉದಾಹರಣೆಯನ್ನು ಅವರ ದೂರದೂರದ ಸಂಬಂಧಿಕರಲ್ಲೂ ನೀಡಲಾಗುತ್ತದೆ. ಗ್ರಾಮಗಳಲ್ಲಿ ಆದರೆ ಇಡೀ ಗ್ರಾಮ ಅವರನ್ನು ಮಾದರಿ ವ್ಯಕ್ತಿಯನ್ನಾಗಿ ನೋಡುತ್ತದೆ. ಅಲ್ಲದೇ ಅನೇಕ ಮನೆಗಳಲ್ಲಿ ಅಂತಹವರ ಉದಾಹರಣೆ ಹೇಳುತ್ತಾ ತಮ್ಮ ಮಕ್ಕಳಿಗೂ ಸಹ ಅವರಂತೆ ಆಗಲು ಹಿರಿಯರು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಬಡತನ […]

Continue Reading

ಮದುವೆ ಮಂಟಪದಿಂದ ಹೊರಟು ಕೌನ್ಸಿಲಿಂಗ್ ಗೆ ಹೋಗಿ ಉದ್ಯೋಗ ಪಡೆದು ಮರಳಿದ ವಧು

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ತನ್ನ ಮದುವೆಯ ದಿನ ಬಹಳ ವಿಶೇಷವಾಗಿರುತ್ತದೆ. ಅಂದು ವಧು ವರ ಇಬ್ಬರೂ ತಮ್ಮ‌ ಜೀವನ ಸಂಗಾತಿಯೊಡನೆ ಜೀವನ ಪೂರ್ತಿ ಜೊತೆಯಾಗಿರುವ ಆಣೆಯನ್ನು ಮಾಡುತ್ತಾರೆ. ಆದರೆ ಅದೇ ಮದುವೆಯ ದಿನವೇ ವರನನ್ನು ಬಿಟ್ಟು ಮದುವೆ ಮಂಟಪದಿಂದ ಹೋದ ವಧು ಮತ್ತೆ ಉದ್ಯೋಗದೊಂದಿಗೆ ವಾಪಸ್ಸು ಬಂದರೆ ಹೇಗಿರುತ್ತದೆ?? ವಿಚಿತ್ರ ಎನಿಸಬಹುದು ಆದರೆ ಇದು ವಾಸ್ತವ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ಮದುವೆಗಾಗಿ ಕೈಗೆ ಮೆಹಂದಿ ಹಾಕಿಕೊಂಡು, ಬೈತಲೆಯಲ್ಲಿ ಸಿಂಧೂರ ಧರಿಸಿದ್ದ ವಧು […]

Continue Reading

ಗ್ರಾಮಕ್ಕೆ ನೀರು ಹರಿಸಲು 18 ತಿಂಗಳಲ್ಲಿ 107 ಮೀ. ಬೆಟ್ಟವನ್ನು ಕಡಿದು ಸಾಧನೆ ಮೆರೆದ 100 ಜನ ಮಹಿಳೆಯರು

ಮನಸ್ಸಿದ್ದರೆ ಮಾರ್ಗ, ಶ್ರಮವನ್ನು ನಂಬಿದರೆ ಸಾಧನೆ ಸಾಧ್ಯ ಎನ್ನುವ ಮಾತುಗಳು ಸರ್ವಕಾಲಗಳಲ್ಲೂ ಒಪ್ಪಲೇಬೇಕಾದ ಸತ್ಯ. ಇಂತಹುದೇ ಒಂದು ವಿಚಾರವನ್ನು ನಾವಿಂದು ಹೇಳಲು ಹೊರಟಿದ್ದೇವೆ. ಮಧ್ಯಪ್ರದೇಶ ರಾಜ್ಯದ ಗ್ರಾಮವೊಂದರ ಮಹಿಳೆಯರು ತಮ್ಮ ಗ್ರಾಮದಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಮಾಡಿದ ಕೆಲಸ ಅಕ್ಷರಶಃ ಒಂದು ಮಹತ್ವದ ಸಾಧನೆಯಾಗಿದೆ. ಏಕೆಂದರೆ ಈ ಮಹಿಳೆಯರು 18 ತಿಂಗಳ ಕಾಲಾವಧಿಯಲ್ಲಿ 107 ಮೀಟರ್ ಬೆಟ್ಟವನ್ನು ಕಡಿದು, ತಮ್ಮ ಗ್ರಾಮಕ್ಕೆ ನೀರನ್ನು ಹರಿಸಿದ್ದಾರೆ. ಇಂತಹದೊಂದು ಸಾಧನೆಯನ್ನು ಮೆರೆದ ಮಹಿಳೆಯರ ಕುರಿತಾಗಿ ನಾವಿಂದು ಹೇಳಲು […]

Continue Reading

ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಲೇ, ಕೆಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಸಾಧಕ

ನಮ್ಮ ದೇಶದಲ್ಲಿ ಬಡತನ ಯಾವ ಮಟ್ಟಕ್ಕೆ ಬೇರು ಬಿಟ್ಟಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಇಂತಹ ಬಡತನದ ಕಾರಣದಿಂದಾಗಿಯೇ ಭಾವೀ ಐಎಎಸ್ ಅಧಿಕಾರಿಯೊಬ್ಬರು ಸಂಕಷ್ಟದ ಕಾರಣದಿಂದ ರೈಲ್ವೆ ಪ್ಲಾಟ್ ಫಾರಂ ನಲ್ಲಿ ಕೆಲಸ ಮಾಡುತ್ತಲೇ, ಬಿಡುವಿನ ವೇಳೆಯಲ್ಲಿ ಅಲ್ಲಿಯೇ ಕುಳಿತು ಓದುವ ಮೂಲಕ ತನ್ನ ಶಿಕ್ಷಣವನ್ನು ಪೂರ್ತಿ ಮಾಡಬೇಕಾಯಿತು. ಅಲ್ಲದೇ ಆತನ ಶ್ರಮಕ್ಕೆ ಇಂದು ಫಲ ಕೂಡಾ ಆತನಿಗೆ ದಕ್ಕಿದೆ. ಯಾವುದೇ ನೋಟ್ಸ್, ಬುಕ್ಸ್ ಆಗಲೀ, ಕೋಚಿಂಗ್ ಆಗಲೀ ಇಲ್ಲದೇ ಅದ್ಯಯನ ಮಾಡಿದ ಆತನ ಬಳಿ […]

Continue Reading