ಸದ್ದಿಲ್ಲದೇ ಸಿಂಪಲ್ಲಾಗಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಅಡಿಯಿಟ್ಟ ನಟಿ ಶುಭಾ ಪೂಂಜಾ

ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ತಮ್ಮ ಬಹು ದಿನಗಳ ಗೆಳೆಯ ಸುಮಂತ್ ಅವರೊಡನೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಅಡಿಯಿಡಿರಿಸಿದ್ದಾರೆ. ಶುಭಾ ಪೂಂಜಾ ಅವರು ಸುಮಂತ್ ಅವರೊಡನೆ ಮಂಗಳೂರಿನಲ್ಲಿ ಸಿಂಪಲ್ ಆಗಿ ಸಪ್ತಪದಿಯನ್ನು ತುಳಿದಿದ್ದಾರೆ. ಮಂಗಳೂರಿನ ಮಜಲಬೆಟ್ಟು ಬೀಡುವಿನಲ್ಲಿ ಸುಮಂತ್ ಹಾಗೂ ಶುಭಾ ಅವರು ಸರಳವಾಗಿ ವಿವಾಹ ಮಾಡಿಕೊಂಡು ಹೊಸ ಜೀವನಕ್ಕೆ ಶುಭಾರಂಭವನ್ನು ಮಾಡಿದ್ದಾರೆ. ಮದುವೆಗೆ ಕೇವಲ ಅವರ ಕುಟುಂಬದವರು ಮತ್ತು ಆಪ್ತರು ಮಾತ್ರವೇ ಹಾಜರಿದ್ದರು ಎನ್ನಲಾಗಿದೆ. ಶುಭಾ ಪೂಂಜಾ ತಮ್ಮ ವಿವಾಹದ ಶುಭ ಕ್ಷಣಗಳ ಕುರಿತಾದ ಖುಷಿಯನ್ನು […]

Continue Reading

ಹಿರಿಯರ ತಪಸ್ಸು, ಸತ್ಕಾರ್ಯ, ಸತ್ಕರ್ಮಗಳು ಮುಂದಿನ ಪೀಳಿಗೆಯನ್ನು ಕಾಯುತ್ತೆ: ಶಂಕರ್ ಅಶ್ವಥ್

ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್ ಅಶ್ವಥ್ ಅವರು ಸಿನಿಮಾಗಳ ಜೊತೆಗೆ ತಮ್ಮದೇ ಆದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡವರು. ಸಿನಿಮಾದಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಕೈಚೆಲ್ಲಿ ಕೂರುವವರ ಮಧ್ಯೆ ಶಂಕರ ಅಶ್ವಥ್ ಅವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಬಹಳಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಾ ಕೂರುವ ಬದಲಾಗಿ ಶ್ರಮವಹಿಸಿ ಕಾಯಕವನ್ನು ಮಾಡುವ ಕಡೆಗೆ ಮೊದಲ ಆದ್ಯತೆಯನ್ನು ನೀಡುವ ವ್ಯಕ್ತಿ ಅವರಾಗಿದ್ದಾರೆ. ಅವರ ಈ ಸರಳ, ಸ್ವಾಭಿಮಾನದ ಬದುಕನ್ನು ಕಂಡೇ ಜನರು ಅವರನ್ನು ಅಭಿಮಾನಿಸುತ್ತಾರೆ. ಶಂಕರ ಅಶ್ವಥ್ […]

Continue Reading

ಬಿಗ್ ಬಾಸ್ ಮನೆಗೆ ಅರವಿಂದ್ ಗಾಗಿ ಬಂದ್ರು ಒಬ್ಬ ವಿಶೇಷ ಅತಿಥಿ: ನೋಡಿ ಭಾವುಕರಾದ ಅರವಿಂದ್

ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆ ವಾರ ಆರಂಭವಾಗಿದೆ. ಇನ್ನು ಈ ವಾರಾಂತ್ಯದ ಎಪಿಸೋಡ್ ಗಳಲ್ಲಿ ಶುಭಾ ಪೂಂಜಾ ಹಾಗೂ ಶಮಂತ್ ಹೊರಗಡೆ ಬಂದ ನಂತರ ಮನೆಯಲ್ಲಿ ಈಗ ಆರು ಜನ ಅಂದರೆ ಪ್ರಶಾಂತ್ ಸಂಬರ್ಗಿ, ಅರವಿಂದ್ ಕೆಪಿ, ಮಂಜು ಪಾವಗಡ, ದಿವ್ಯ ಸುರೇಶ್, ದಿವ್ಯ ಉರುಡುಗ ಮತ್ತು ವೈಷ್ಣವಿ ಗೌಡ ಮನೆಯಲ್ಲಿ ಉಳಿದಿದ್ದಾರೆ. ಈ ಆರು ಜನರಲ್ಲಿ ಒಬ್ಬರು ಮನೆಯಿಂದ ಹೊರಗೆ ಬರುವುದು ಕೂಡಾ ಖಚಿತ,‌ ಅದು ಕೂಡಾ ನಾಳೆ ಮನೆಯಿಂದ ಒಬ್ಬರು ಹೊರಗೆ ಬರಲಿದ್ದಾರೆ […]

Continue Reading