Big Boss: ತನ್ನ ವಿಶೇಷ ಅಧಿಕಾರ ಬಳಸಿದ ಕಿಚ್ಚ ಸುದೀಪ್; ಬಿಗ್ ಬಾಸ್ ಇತಿಹಾಸದಲ್ಲಿ ಇಂತದ್ದು ನಡೆದಿಲ್ಲ

Written by Soma Shekar

Published on:

---Join Our Channel---

Big Boss Kannada 10: ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಈ ಸಲ ಅಂದ್ರೆ ಎಂಟನೇ ವಾರದ ನಾಮಿನೇಷನ್ ನಲ್ಲಿ ಒಂದು ಅಚ್ಚರಿ ನಡೆದಿದೆ. ಇದೇ ಮೊದಲ ಬಾರಿಗೆ ಅಂದ್ರೆ ಕಳೆದ ಒಂಬತ್ತು ಸೀಸನ್ ಗಳಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಬಳಸದೇ ಇರುವ ತಮ್ಮ ವಿಶೇಷ ಅಧಿಕಾರವನ್ನು ಬಳಸಿದ್ದಾರೆ ಎನ್ನುವ ಸುದ್ದಿಯೊಂದು ಈಗ ಹರಿದಾಡಿದ್ದು, ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: Big Boss: ವೈಲ್ಡ್ ಕಾರ್ಡ್ ಅವಿನಾಶ್ ನ ಕಾಮಿಡಿ ಪಂಚ್ ಗಳು ಹಾಕಿ ರುಬ್ಬಿದ ವಿನಯ್ ಮತ್ತು ತುಕಾಲಿ

ಸುದೀಪ್ ಅವರು ಈ ಅಧಿಕಾರವನ್ನ ಬಳಸಿರೋದು ಕನ್ನಡದ ಮೇಲಿನ ತಮ್ಮ ಪ್ರೀತಿಯಿಂದ ಎನ್ನುವುದು ವಿಶೇಷವಾಗಿದೆ. ಈಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಈ ವಾರ ಎಂದಿನಂತೆ ಎಲಿಮಿನೇಟ್ ನಡೆದಿಲ್ಲ ಎನ್ನಲಾಗಿದೆ. ಈ ವಾರ ಬಾಟಮ್ ಟು ನಲ್ಲಿ ಮೈಕಲ್ ಮತ್ತು ಸ್ನೇಹಿತ್ ಇದ್ದರು ಎನ್ನಲಾಗಿದೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಬಹುತೇಕ ಎಲ್ಲರೂ ಸ್ನೇಹಿತ್ ಹೊರಗೆ ಬರ್ತಾರೆ ಅಂತ ಹೇಳ್ತಿದ್ರು.

ಆದ್ರೆ ಸ್ನೇಹಿತ್ (Snehith) ಎಲಿಮಿನೇಷನ್ ನಿಂದ ಪಾರಾದ ಹಿನ್ನೆಲೆಯಲ್ಲಿ ಮೈಕಲ್ ಮನೆಯಿಂದ ಹೊರಗೆ ಬರೋದು ಖಚಿತವಾಗಿತ್ತು. ಆದರ ಈಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸುವ ಮೂಲಕ ಮೈಕಲ್ ನ ಎಲಿಮಿನೇಷನ್ ನಿಂದ ಉಳಿಸಿದ್ದಾರೆ ಎನ್ನಲಾಗುತ್ತಿದೆ.

ಸುದೀಪ್ ಅವರು ಇಂತದೊಂದು ನಿರ್ಣಯ ವನ್ನು ಮಾಡಲು ಮುಖ್ಯವಾದ ಕಾರಣವೇ ಮೈಕಲ್ (Michael Ajay) ಅವರ ಕನ್ನಡದ ಮೇಲಿನ ಪ್ರೀತಿ ಎನ್ನಲಾಗುತ್ತಿದೆ. ಮೈಕಲ್ ಕನ್ನಡ ಮಾತನಾಡುವುದು, ಕನ್ನಡ ಕಲಿಯುತ್ತಿರವ ಪರಿಯನ್ನು ನೋಡಿ ಸುದೀಪ್ ಅವರು ಮೈಕಲ್ ನ ಸೇವ್ ಮಾಡಿದ್ದಾರೆ ಎನ್ನಲಾಗಿದೆ.

Leave a Comment