Free Two Wheeler: ದೇವರು ಎಲ್ಲರಿಗೂ ಎಲ್ಲವನ್ನೂ ನೀಡುವುದಿಲ್ಲ. ಕೆಲವರು ತಮ್ಮ ಹುಟ್ಟಿನಿಂದಲೇ ದೈಹಿಕವಾಗಿ ಅಂಗವೈಕಲ್ಯತೆ ಹೊಂದಿರುತ್ತಾರೆ. ಇನ್ನು ಕೆಲವರು ಅಪಘಾತಗಳ ಕಾರಣದಿಂದ ಅಂಗವಿಕಲರಾಗುತ್ತಾರೆ. ಆದರೂ ಸಹ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇಂತವರು ತಮ್ಮ ಬದುಕನ್ನು ನಡೆಸಲು ಪ್ರಯತ್ನಿಸುತ್ತಾರೆ. ಯಾರೊಬ್ಬರ ಮೇಲೆ ಅವಲಂಬಿತರಾಗದೆ, ಕಷ್ಟ ಪಟ್ಟು ದುಡಿಯಲು ಪ್ರಯತ್ನಿಸುತ್ತಾರೆ. ಅನೇಕರು ತಮ್ಮ ಆದ ಸಣ್ಣ ಪುಟ್ಟ ಸ್ವಂತ ಉದ್ಯಮಗಳನ್ನು ಆರಂಭಿಸಿ, ತಮ್ಮ ಜೀವನ ನಡೆಸುತ್ತಿದ್ದಾರೆ.
ಇನ್ನು ಇದೀಗ ಇಂತವರಿಗಾಗಿ ಸರ್ಕಾರ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದೊಂದಾಗಿ ಜನರಿಗಾಗಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತಿದೆ. ಇದೀಗ ದೈಹಿಕ ಅಂಗವೈಕಲ್ಯತೆ ಹೊಂದಿರುವವರಿಗೆ ವಿಶೇಷವಾದ ಯೋಜನೆಯನ್ನು ಇದೀಗ ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಹೌದು, ರಾಜ್ಯ ಸರ್ಕಾರವು ದೈಹಿಕ ಅಂಗವೈಕಲ್ಯತೆ ಹೊಂದಿರುವ ಜನರಿಗಾಗಿ ಇದೀಗ ಉಚಿತವಾಗಿ ದ್ವಿಚಕ್ರ ವಾಹನಗಳನ್ನು ವಿತರಿಸಲು ಮುಂದಾಗಿದೆ. ಇನ್ನು ಈ ಯೋಜನೆಗಾಗಿ ಈ ಬಾರಿಯ ಬಜೆಟ್ ನಲ್ಲಿ ಸುಮಾರು 36 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ದೈಹಿಕ ಅಂಗವೈಕಲ್ಯ ಹೊಂದಿರುವವರು ಯಾರ ಸಹಾಯವೂ ಇಲ್ಲದೆ ತಮ್ಮ ಸ್ವಂತ ದುಡಿಮೆ ಮಾಡಲು ಬಯಸುತ್ತಾರೆ. ಇನ್ನು ಅಂತವರ ನೆರವಿಗಾಗಿ, ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಚಲಿಸಲು ಇದೀಗ ರಾಜ್ಯ ಸರ್ಕಾರದಿಂದ ಉಚಿತವಾಗಿ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ.
ಇನ್ನು ಸಿ ಎಂ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ಈ ವಿಶೇಷವಾದ ಯೋಜನೆಯ ಕುರಿತು ಸಹ ಚರ್ಚೆಗಳನ್ನು ನಡೆಸಿದ್ದು, ಸುಮಾರು 4000 ಉಚಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದಾಗಿ ತಿಳಿದು ಬಂದಿದೆ. ಇನ್ನು ಸರ್ಕಾರದ ಈ ವಿಶೇಷ ಯೋಜನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..