SSLC ಪಾಸ್: ತನಗೆ ತಾನೇ ಫ್ಲೆಕ್ಸಿ ಹಾಕಿಸಿಕೊಂಡ ಈ ವಿದ್ಯಾರ್ಥಿಯ ಸಾಧನೆ ಹಿಂದೆ ಇದೆ ನೋವಿನ ಕಥೆ

Written by Soma Shekar

Published on:

---Join Our Channel---

ಎಸ್ ಎಸ್ ಎಲ್ ಸಿ, ಪಿಯುಸಿ ಅಥವಾ ಇನ್ನಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ‌ ಅಂಕಗಳನ್ನು ಪಡೆದು ತಮ್ಮ ಶಾಲೆಗೆ, ಪೋಷಕರಿಗೆ ಹಾಗೂ ಊರಿಗೆ ಕೀರ್ತಿಯನ್ನು ತರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿಯೇ ಜನರು ಶುಭಾಶಯವನ್ನು ಕೋರುತ್ತಾರೆ. ಕೆಲವು ಕಡೆಗಳಲ್ಲಿ ಅವರು ಇನ್ನಷ್ಟು ಜನರಿಗೆ ಸ್ಪೂರ್ತಿ ಅಥವಾ ಮಾದರಿಯಾಗಲಿ ಎನ್ನುವ ಕಾರಣಕ್ಕೆ ಫ್ಲೆಕ್ಸ್ , ಬ್ಯಾನರ್ ಗಳು ಅಥವಾ ಪೋಸ್ಟರ್ ಗಳನ್ನು ಹಾಕಿ ಎಲ್ಲರೂ ನೋಡುವ ಹಾಗೆ ಹಾಕಿ ಅಭಿನಂದನೆಗಳನ್ನು ಸಲ್ಲಿಸುವುದು ಸಹಾ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಕೇರಳದಲ್ಲಿ ಇದಕ್ಕೆ ಭಿನ್ನವಾಗಿ ಘಟನೆಯೊಂದು ನಡೆದಿದೆ.

ಕೇರಳ ರಾಜ್ಯದ ಕೊಡುಮೊನ್ ಅಂಗಡಿಕಲ್ ಎನ್ನುವಲ್ಲಿ ರಸ್ತೆಯೊಂದರಲ್ಲಿ ಬಹಳ ಆಸಕ್ತಿಕರವಾದ ಫ್ಲೆಕ್ಸ್ ಬೋರ್ಡ್ ಒಂದು ಜನರ ಗಮನವನ್ನು ಸೆಳೆದಿದೆ. ಇದರಲ್ಲಿ ಫೋಟೋ ಕೆಳಗೆ, ಇತಿಹಾಸವು ಕೆಲವು ಜನರಿಗೆ ದಾರಿಯನ್ನು ಮಾಡಿಕೊಡುವುದು ಎನ್ನುವ ಸಾಲನ್ನು ಬರೆಯಲಾಗಿದೆ. ಹಾಗಾದರೆ ಏನು ಈ ಫ್ಲೆಕ್ಸ್ ಬೋರ್ಡ್ ನ ವಿಶೇಷ ಎಂದರೆ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ತನಗೆ ತಾನೇ ಅಭಿನಂದನೆಯನ್ನು ಸಲ್ಲಿಸಿಕೊಂಡು ಹಾಕಿಕೊಂಡ ಫ್ಲೆಕ್ಸ್ ಬೋರ್ಡ್ ಇದಾಗಿದೆ ಎಂದರೆ ಅಚ್ಚರಿಯಾಗಬಹುದು.

ಕುಂಜುಕ್ಕು ಅಕಾ ಜಿಷ್ಣು ಎನ್ನುವ ಹೆಸರಿನ ವಿದ್ಯಾರ್ಥಿಯೊಬ್ಬ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದು, ಪಾಸಾಗಿದ್ದರ ಖುಷಿಯನ್ನು ಈ ರೀತಿ ಹಂಚಿಕೊಂಡಿದ್ದಾನೆ. ತಾನು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಖುಷಿಗಾಗಿ ತನ್ನ ಹೆಸರಿನಲ್ಲಿ ತಾನೇ ಬ್ಯಾನರ್ ಹಾಕಿಸಿಕೊಂಡು ಎಲ್ಲರೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದು, ಈ ಮೂಲಕ ಸುದ್ದಿಯಾಗಿದ್ದಾನೆ. 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಭಾಗವಹಿಸದ್ದಕ್ಕೆ ಕುಂಜಕ್ಕು ಅಕಾ ಅವರಿಗೆ ಅಂದರೆ ನನಗೆ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇನ್ನು ಕುಂಜಕ್ಕು ಅಕಾ ಜಿಷ್ಣು ತನ್ನನ್ನು ಎಸ್ ಎಸ್ ಎಲ್ ಸಿ ಪಾಸಾಗುವುದಿಲ್ಲ ಎಂದು ಅಪಹಾಸ್ಯ ಮಾಡಿದವರಿಗೆ ಉತ್ತರ ನೀಡಲು ಈ ಫ್ಲೆಕ್ಸ್ ಹಾಕಿಸಿದ್ದಾನೆ. ಜಿಷ್ಣು ಓಮನಕುಟ್ಟನ್ ಮತ್ತು ದೀಪಾ ದಂಪತಿಯ ಮಗನಾಗಿದ್ದು, ಅವರದ್ದು ಬಡ ಕುಟುಂಬ. ಜಿಷ್ಣು ಅವರ ತಂದೆ ತಾಯಿ ದಿನಗೂಲಿ ಕಾರ್ಮಿಕರು. ಅವಿಭಕ್ತ ಕುಟುಂಬ ಅವರದ್ದಾಗಿದ್ದು ಜಿಷ್ಣು ಮತ್ತು ಆತನ ಸಹೋದರಿ ವಿಷ್ಣು ಪ್ರಿಯ ಬಹಳ ಕಷ್ಟಪಟ್ಟು ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಅವರ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿ ಕೇವಲ ಒಂದು ವಾರವಾಗಿದೆ.

ಹೀಗೆ ಕಷ್ಟಪಟ್ಟು ಸಹೋದರಿಯ ಜೊತೆ ಪ್ರತಿದಿನ 14 ಕಿಮೀ ಪ್ರಯಾಣಿಸಿ ಶಾಲೆ ತಲುಪುತ್ತಿದ್ದ ಜಿಷ್ಣುವನ್ನು ಕೆಲವರು ಗೇಲಿ ಮಾಡಿದ್ದರಂತೆ. ಎಸ್ ಎಸ್ ಎಲ್ ಸಿ ಪಾಸಾಗುವುದಿಲ್ಲ ಎಂದು ಅಪಹಾಸ್ಯ ಮಾಡಿದ್ದರಂತೆ. ಈಗ ಅವರಿಗೆ ತಾನು ಮಾಡಿರುವ ಸಾಧನೆಯನ್ನು ಫ್ಲೆಕ್ಸ್ ಮೂಲಕ ಜಿಷ್ಣು ತೋರಿಸಿದ್ದಾನೆ. ಜಿಷ್ಣು ಬಳಿ ಫ್ಲೆಕ್ಸ್ ಹಾಕಿಸುವಷ್ಟು ಹಣ ಇರಲಿಲ್ಲ, ಆದರೆ ನವಜ್ಯೋತಿ ಕ್ರೀಡಾ ಮತ್ತು ಕಲಾ ಸಮಿತಿ ಜಿಷ್ಣುಗೆ ನೆರವನ್ನು ನೀಡಿ ಇಂತಹುದೊಂದು ಫ್ಲೆಕ್ಸ್ ಹಾಕಿಸಿದೆ ಎನ್ನಲಾಗಿದೆ.

Leave a Comment