SSLC ವಿದ್ಯಾರ್ಥಿಯ ಉತ್ತರ ಪತ್ರಿಕೆಯಲ್ಲಿ ಪುಷ್ಪ ಸಿನಿಮಾ ಕ್ರೇಜ್: ವಿದ್ಯಾರ್ಥಿಯ ಉತ್ತರ ಕಂಡು ಟೀಚರ್ ಶಾಕ್ !!

Entertainment Featured-Articles News

ಟಾಲಿವುಡ್ ನ ಸ್ಟಾರ್ ನಟ ಅರ್ಜುನ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸುಪರ್ ಹಿಟ್ ಸಾಲಿಗೆ ಸೇರಿದೆ ಹಾಗೂ ಈ ಸಿನಿಮಾ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇನ್ನು ವಿಶೇಷ ಏನೆಂದರೆ ಈ ಸಿನಿಮಾದಲ್ಲಿನ ಡೈಲಾಗುಗಳು ಹಾಗೂ ಸಿಗ್ನೇಚರ್ ಸ್ಟೆಪ್ ಸಖತ್ ಸದ್ದನ್ನು ಮಾಡಿದೆ. ಆಗಾಗ ಸಿನಿಮಾದ ಡೈಲಾಗ್ ಹಾಗೂ ಅಲ್ಲು ಅರ್ಜುನ್ ಅವರ ಸಿಗ್ನೇಚರ್ ಸ್ಟೆಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಡೈಲಾಗುಗಳು ಇರುವ ವಿಡಿಯೋ ಹಾಗೂ ಡಾನ್ಸ್ ನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಪುಷ್ಪ ಸಿನಿಮಾದ ಸಿಗ್ನೇಚರ್ ಸ್ಟೆಪ್ ಗೆ ಈಗಾಗಲೇ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಹೆಜ್ಜೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡ ವಿಡಿಯೋಗಳು ವೈರಲ್ ಆಗುವ ಮೂಲಕ ಸಿನಿಮಾ ಎಷ್ಟು ಕ್ರೇಜ್ ಸೃಷ್ಟಿ ಮಾಡಿದೆ ಎನ್ನುವುದನ್ನು ಸಾಬೀತು ಮಾಡಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ನಡೆದಂತಹ 10ನೇ ತರಗತಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನು ಉತ್ತರ ಪತ್ರಿಕೆಯಲ್ಲಿ ಪುಷ್ಪಾ ಸಿನಿಮಾದ ಡೈಲಾಗ್ ಅನ್ನು ತನ್ನದೇ ಶೈಲಿಯಲ್ಲಿ ಬರೆದಿದ್ದು, ಈ ವಿಷಯ ಸುದ್ದಿಯಾಗಿದೆ.

ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯು ಪುಷ್ಪ, ಪುಷ್ಪರಾಜ್, ಅಪುನ್ ಲಿಖೇಗಾ ನಹೀ ಸಾಲಾ, ಎಂದು ತನ್ನದೇ ಆದ ಶೈಲಿಯಲ್ಲಿ ಡೈಲಾಗ್ ಬರೆದಿಟ್ಟಿದ್ದಾನೆ. ಇದರ ಅರ್ಥ ನಾನು ಬರೆಯುವುದಿಲ್ಲ ಎನ್ನುವುದಾಗಿದೆ. ವಿದ್ಯಾರ್ಥಿಯ ಈ ಉತ್ತರ ಪತ್ರಿಕೆಯ ಫೋಟೋವನ್ನು ಶಿಕ್ಷಕರೊಬ್ಬರು ತೆಗೆದುಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ವೈವಿಧ್ಯಮಯವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave a Reply

Your email address will not be published.