SSLC ಜಸ್ಟ್ ಪಾಸ್: ಸಂತೋಷದಿಂದ ಕುಣಿದು, ಕುಪ್ಪಳಿಸಿ ಅನೇಕರ ಮೆಚ್ಚುಗೆ ಪಡೆದ ಬಾಲಕ

Entertainment Featured-Articles News Viral Video

ನಿನ್ನೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಸಾಮಾನ್ಯವಾಗಿಯೇ ಪರೀಕ್ಷೆ ಫಲಿತಾಂಶ ಬಂದ ಮೇಲೆ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದವರು ತಮ್ಮ ಖುಷಿಯನ್ನು ಎಲ್ಲಾ ಕಡೆ ಸಂತೋಷದಿಂದ ಹಂಚಿಕೊಳ್ಳುತ್ತಾರೆ. ಕೆಲವರಂತೂ ಬಂದಿರುವ ಅಂಕ ಕಡಿಮೆಯಾಗಿದೆ ಎಂದು ಗೋಳಾಡುತ್ತಾರೆ, ಅತ್ತು, ಕರೆದು ರಂಪಾಟ ಮಾಡುತ್ತಾರೆ. ಬೇಸರದಿಂದ ಮುಖ ಚಿಕ್ಕದು ಮಾಡಿಕೊಳ್ಳುತ್ತಾರೆ. ಮರು ಮೌಲ್ಯ ಮಾಪನಕ್ಕೆ ಮುಂದಾಗುತ್ತಾರೆ. ಇವೆಲ್ಲಾ ಪ್ರತಿ ವರ್ಷ ಸಹಾ ನಡೆಯುವ ಸಾಮಾನ್ಯವಾದ ಘಟನೆಗಳು ಎನ್ನುವುದು ನಮಗೆ ತಿಳಿದೇ ಇದೆ.

ಆದರೆ ಈ ಬಾರಿ ಇವೆಲ್ಲವುಗಳಿಗಿಂತ ಭಿನ್ನವಾಗಿ ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷೆ ಫಲಿತಾಂಶ ಬಂದ ಮೇಲೆ ಮಾಡಿದ ಕೆಲಸ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗಿದೆ‌. ಆ ಹುಡುಗನಿಗೆ ನೆಟ್ಟಿಗರಿಂದ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ. ಹೌದು, ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ನಿವಾಸಿಯಾಗಿರುವ ಶಿವರಾಜ್ ಎನ್ನುವ ಹುಡುಗ ಎಸ್ ಎಸ್ ಎಲ್ ಸಿ ಯಲ್ಲಿ ಜಸ್ಟ್ ಪಾಸ್ ಆಗಿದ್ದಾನೆ. ಆತನಿಗೆ ತಾನು ಪಾಸ್ ಆಗಿರುವುದು ಸಿಕ್ಕಾಪಟ್ಟೆ ಖುಷಿಯನ್ನು ನೀಡಿದೆ.

ಶಿವರಾಜ್ ತಾನು ಎಸ್ ಎಸ್ ಎಲ್ ಸಿ ಪಾಸಾದ ಖುಷಿಯಲ್ಲಿ ಅದನ್ನು ಮಳೆಯಲ್ಲಿ ಕುಣಿಯುತ್ತಾ, ಹಾಡುತ್ತಾ ಎಂಜಾಯ್ ಮಾಡಿದ್ದಾನೆ. ಶಿವರಾಜ್ ಗೆ ಅವರ ಪೋಷಕರು ನೀನು ಎಸ್ ಎಸ್ ಎಲ್ ಸಿ ಪಾಸಾಗಲ್ಲ ಎಂದಿದ್ದರಂತೆ. ಆದರೆ ಫಲಿತಾಂಶ ಪ್ರಕಟವಾದಾಗಾ ಶಿವರಾಜ್ ಪಾಸಾಗಿರುವುದನ್ನು ಕಂಡು ಆತನಿಗೆ ಆಗಿರುವ ಖುಷಿ ಅಷ್ಟಿಷ್ಟಲ್ಲ. ಅದೇ ಖುಷಿಯಲ್ಲಿ ಆತ ಮಳೆಯಲ್ಲಿ ಹಾಡಿ, ಕುಣಿದು ತಾನು ಎಸ್ ಎಸ್ ಎಲ್ ಸಿ ಪಾಸಾಗಿದ್ದನ್ನು ಹೇಳುತ್ತಾ ಸಂಭ್ರಮಿಸಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ವೀಡಿಯೋ ಸಹಾ ವೈರಲ್ ಆಗಿದೆ. ನೆಟ್ಟಿಗರು ಇದನ್ನು ನೋಡಿ ಹುಡುಗನ ಖುಷಿಯನ್ನು ತಮ್ಮ ಖುಷಿ ಎನ್ನುವಂತೆ ಸಂತೋಷ ಪಟ್ಟಿದ್ದಾರೆ. ಶಿವರಾಜ್ ನ ಭವಿಷ್ಯ ಉಜ್ವಲವಾಗಿರಲಿ ಎಂದು ಅನೇಕರು ಶುಭ ಹಾರೈಸಿದ್ದಾರೆ. ಹೆಚ್ಚು ಅಂಕ ಬಂದಿಲ್ಲ ಎನ್ನುವ ಒಂದೇ ಕಾರಣಕ್ಕೆ ಕೊರಗುತ್ತಾ ಕೂರುವವರ ಮುಂದೆ ಶಿವರಾಜ್ ಮಾದರಿಯಾಗಿದ್ದಾನೆ ಎಂದರೆ ಖಂಡಿತ ತಪ್ಪಾಗದು. ಆತನ ಮುಖದಲ್ಲಿ ಕಾಣುವ ಖುಷಿ ಎಂತಹವರಿಗೂ ಹೊಸ ಹುಮ್ಮಸ್ಸನ್ನು ನೀಡುವ ಹಾಗಿದೆ.

Leave a Reply

Your email address will not be published. Required fields are marked *