Sonu Srinivas Gowda: ಹಬ್ಬಕ್ಕಾಗಿ ಅಪ್ಸರೆಯಂತೆ ಸಿದ್ಧವಾದ ಸೋನು: ಯಾವಾಗ್ಲೂ ಹೀಗೇ ಇರೋಕೆ ಏನ್ ಕಷ್ಟ ಅಂದ ನೆಟ್ಟಿಗರು!

0 8,274

Sonu Srinivas Gowda : ನಿನ್ನೆ ಗೌರಿ, ಗಣೇಶ ಹಬ್ಬವನ್ನು ಎಲ್ಲರೂ ಬಹಳ ಸಂಭ್ರಮ, ಸಡಗರ ಮತ್ತು ಸಂತೋಷದಿಂದ ಆಚರಣೆ ಮಾಡಿದ್ದು, ಭಕ್ತಿಯಿಂದ ಗಣಪನನ್ನು ಸ್ವಾಗತಿಸಿದ್ದು, ದೇಶದ ವಿವಿಧೆಡೆ ಗಣೇಶ ಮೂರ್ತಿ ಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಹೌದು, ಯಾವಾಗಲೂ ಹಾಟ್ ಮತ್ತು ಬೋಲ್ಡ್ ಲುಕ್ ನಲ್ಲೇ ಮಿಂಚುತ್ತಿದ್ದ ಸೋನು ಈಗ ಪಕ್ಕಾ ಟ್ರೆಡಿಷನಲ್ ಲುಕ್ ನಲ್ಲಿ ಮಿಂಚಿದ್ದಾರೆ.

ಸಾಂಪ್ರದಾಯಿಕವಾದ ಉಡುಗೆಯಾದ ಲಂಗ ದಾವಣಿ ತೊಟ್ಟು, ಮೈ ತುಂಬಾ ಆಭರಣಗಳನ್ನು ತೊಟ್ಟಿದ್ದಾರೆ ಸೋನು.

ಸೊಂಟದಲ್ಲಿ ಗಣಪನ ಮೂರ್ತಿಯನ್ನು ಎತ್ತಿಕೊಂಡು ವಯ್ಯಾರದಿಂದ ನಡೆದು ಬಂದ ಸೋನು ಅಭಿಮಾನಿಗಳ ಮನಸ್ಸಿಗೆ ಮುದ ನೀಡಿದ್ದಾರೆ.

ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಆರಾಧನೆ ಮಾಡಿದ ಸೋನು ಫೋಟೋ, ವೀಡಿಯೋ ಭರ್ಜರಿ ವೈರಲ್ ಆಗಿದೆ.

ಸೋನು ವಿವಿಧ ಭಂಗಿಗಳಲ್ಲಿ ಕ್ಯಾಮೆರಾ ಗೆ ಬಹಳ ಅಂದವಾಗಿ ಪೋಸ್ ನೀಡಿದ್ದು, ಇದು ನಿಜವಾಗಲೂ ಅದೇ ಬಿಂದಾಸ್ ಸೋನು ಶ್ರೀನಿವಾಸ್ ಗೌಡನೇನಾ? ಎನ್ನುವಂತೆ ಕಂಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರು ಶೇರ್ ಮಾಡಿಕೊಂಡ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳನ್ನು ನೀಡುತ್ತಾ ಸಾಗಿದ್ದಾರೆ.

ವೀಡಿಯೋ ಗೆ ಕಾಮೆಂಟ್ ಮಾಡಿದವರು ಸೂಪರ್ ನೀವು ಹೀಗೆ ಇದ್ರೆ ಚೆನ್ನ ಎಂದು ಮೆಚ್ಚುಗೆಯನ್ನು ನೀಡಿದ್ದಾರೆ.

ನೆಟ್ಟಿಗರೊಬ್ಬರು ಗಣೇಶನನ್ನು ನೋಡಿ ಮೆಚ್ಚುಗೆ ನೀಡಿದ್ದೇನೆ, ನಿನ್ನನ್ನ ನೋಡಿ ಅಲ್ಲ ಎಂದು ಸೋನು ಗೆ ಟಾಂಗ್ ನೀಡಿ ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.