Sonu Srinivas Gowda : ಸೋಶಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳು ಸದ್ದು ಮಾಡೋದು ಸಾಮಾನ್ಯ ವಿಷಯ, ಆದ್ರೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿ ಸೆಲೆಬ್ರಿಟಿಗಳಾಗ್ತಿದ್ದಾರೆ, ಆಗಿದ್ದಾರೆ. ಅಂತಹವರಲ್ಲಿ ಸದ್ಯಕ್ಕಂತೂ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವವರು ಯಾರು ಅಂದ್ರೆ ಸೋನು ಶ್ರೀನಿವಾಸ್ ಗೌಡ (Sonu Srinivas Gowda)
ಇತ್ತೀಚಿಗೆ ತನ್ನ ಮಾಲ್ಡೀವ್ಸ್ ಫೋಟೋ ಮತ್ತು ವೀಡಿಯೋಗಳಿಂದ ಸುದ್ದಿಯಾಗಿ, ಭರ್ಜರಿ ಟ್ರೋಲ್ ಆಗಿ, ಒಂದಷ್ಟು ಟೀಕೆಗಳಿಗೆ ಗುರಿಯಾಗಿದ್ದ ಸೋನು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ಸೋಶಿಯಲ್ ಮೀಡಿಯಾದಲ್ಲಿ ನಾನು ನಂದಿನಿ ಹಾಡು ಟ್ರೆಂಡ್ ಆಗಿದ್ದು, ಸೆಲೆಬ್ರಿಟಿಗಳು ಸಹಾ ಇದಕ್ಕೆ ಹೆಜ್ಜೆ ಹಾಕಿ ರೀಲ್ಸ್ ವೀಡಿಯೋ ಮಾಡ್ತಿದ್ದಾರೆ.
ಈಗ ಸೋನು ತಾನೂ ಕೂಡಾ ಇದೇ ಹಾಡಿಗೆ ತಮ್ಮದೇ ಸ್ಟೈಲ್ ನಲ್ಲಿ ರೀಲ್ಸ್ ವೀಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸೋನು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತೊಟ್ಟಿದ್ದ ಸಾಂಪ್ರದಾಯಿಕ ಉಡುಗೆಯಲ್ಲೇ ನಾನು ನಂದಿನಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಗಳನ್ನು ಹಾಕಿ ಎಂಜಾಯ್ ಮಾಡಿದ್ದಾರೆ.
ಸೋನು ಗೌಡ ಶೇರ್ ಮಾಡಿದ ರೀಲ್ಸ್ ವೀಡಿಯೋಗೆ ನೋಡಿ ಅವರ ಅಭಿಮಾನಿಗಳಂತೂ ಖುಷಿಯಿಂದ ಮೆಚ್ಚುಗೆಗಳನ್ನು ನೀಡಿ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ.
ಇದೇ ವೇಳೆ ಕಾಮೆಂಟ್ ಗಳಲ್ಲಿ ಟೀಕೆ ಮಾಡಿದವರು ಇಲ್ಲ ಅಂತ ಹೇಳೋಕಾಗಲ್ಲ. ಕೆಲವರು ಕಾಮೆಂಟ್ ಗಳಲ್ಲಿ ಸೋನು ಅವರನ್ನ ಟೀಕೆ ಕೂಡಾ ಮಾಡಿದ್ದಾರೆ.
ಕೆಲವರು ಕಾಮೆಂಟ್ ಗಳಲ್ಲಿ ಇದೊಂದು ಬಾಕಿ ಇತ್ತು, ಡ್ಯಾನ್ಸ್ ಕ್ಲಾಸ್ ಗೆ ಸೇರ್ಕೋ ಅಂತ , ಏನು ಫುಲ್ ಚೇಂಜ್ ಆಗಿದ್ದೀರಿ ಅಂತ ತರಹೇವಾರಿ ಪ್ರತಿಕ್ರಿಯೆಗಳನ್ನ ನೀಡಿದ್ದಾರೆ.