SIIMA 2023 ಸೈಮಾದಲ್ಲಿ ಕನ್ನಡ ಕಂಪು, Jr.NTR ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತುಕತೆ: ವೈರಲ್ ವೀಡಿಯೋ

0 626

SIIMA 2023 : ಇತ್ತೀಚಿಗಷ್ಟೇ ನಡೆದ ಸೈಮಾ 2023 ಪ್ರಶಸ್ತಿ ಪ್ರಧಾನ ಸಮಾರಂಭದ ಅಪ್ಡೇಟ್ ಗಳು, ಫೋಟೋಗಳು ಮತ್ತು ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇದೇ ವೇಳೆ ನಟ ರಿಷಬ್ ಶೆಟ್ಟಿ (Rishab Shetty) ಮತ್ತು ಜೂ. ಎನ್ಟಿಆರ್ (Jr NTR) ಅವರು ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿದ ಸಂದರ್ಭದ ವೀಡಿಯೋ ಈಗ ಭರ್ಜರಿ ವೈರಲ್ ಆಗುತ್ತಿದೆ.

ಇಬ್ಬರೂ ನಟರು ಕನ್ನಡದಲ್ಲಿ ಮಾತನಾಡಿದ ಸುಂದರ ಕ್ಷಣಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳ ವೇದಿಕೆಯಾಗಿರುವ ಎಕ್ಸ್ ನಲ್ಲಿ (X) ವೈರಲ್ ಆಗಿ, ಸಾಕಷ್ಟು ಮೆಚ್ಚುಗೆ ಗಳು ಹರಿದು ಬರುತ್ತಿವೆ. ಸೈಮಾ 2023 ರ ವೇದಿಕೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಮತ್ತು ಜೂ. ಎನ್ ಟಿ ಆರ್ ಕನ್ನಡದಲ್ಲಿಯೇ ಅಭಿನಂದನೆ ವ್ಯಕ್ತಪಡಿಸಿದ್ದು ನೆಟ್ಟಿಗರ, ಕನ್ನಡಿಗರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ಜೂ. ಎನ್ ಟಿ ಆರ್ ಮಾತನಾಡುತ್ತಾ ರಿಷಬ್ ಶೆಟ್ಟಿ ಅವರು ಮಾತನಾಡಿದ ನಂತರ ನಾನು ಕನ್ನಡ ಮಾತಾಡೋದು ಅಷ್ಟು ಚೆನ್ನಾಗಿರಲ್ಲ ಎಂದಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅವರು ನಿಮ್ಮ ತಾಯಿ ಮತ್ತು ನಮ್ಮೂರು ಎಲ್ಲಾ ಒಂದೇ ಆಗಿರೋದ್ರಿಂದ ನೀವೊಂತರ ನಮ್ಮ ಕುಂದಾಪುರದವ್ರು ಎಂದು ಹೇಳಿದ್ದಾರೆ.

Leave A Reply

Your email address will not be published.