ಡಿಕೆ ಶಿವಕುಮಾರ್, ಸಿಹಿ ಕಹಿ ಚಂದ್ರು ಆತ್ಮೀಯತೆ: ಅಚ್ಚರಿ ಮೂಡಿಸಿದ ಇವರ ಸ್ನೇಹ ಮೂಡಿದ್ದು ಹೇಗೆ?

0 2

Weekend With Ramesh: ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ನ ಸೀಸನ್ ಐದರ ಈ ವಾರಾಂತ್ಯ ಬಹಳ ವಿಶೇಷವಾಗಿದೆ. ಕಾಂಗ್ರೆಸ್‌ನ ಟ್ರಬಲ್ ಶೂಟರ್ ಖ್ಯಾತಿಯ ಡಿಕೆ ಶಿವಕುಮಾರ್ (D K Shiva Kumar) ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಡಿ ಕೆ ಶಿವಕುಮಾರ್ ಯಾವಾಗ ಈ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ಕಾಯ್ತಿದ್ದ ಅಸಂಖ್ಯಾತ ಅಭಿಮಾನಿಗಳ ನಿರೀಕ್ಷೆ ಈಗ ನಿಜವಾಗಿದೆ. ಡಿಕೆ ಶಿವಕುಮಾರ್ ಅವರ ಜೀವನ ಮತ್ತು ಅವರ ಹಿನ್ನೆಲೆಯನ್ನು ತಿಳಿದುಕೊಳ್ಳೋಕೆ ಬಹಳಷ್ಟು ಜನರಿಗೆ ಸಾಕಷ್ಟು ಕುತೂಹಲ ಇದೆ.

ಈಗ ಎಲ್ಲರ ನಿರೀಕ್ಷೆಗಳಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾಧಕರ ಕುರ್ಚಿಯಲ್ಲಿ ಕೂರಲು ಬಂದಿದ್ದಾರೆ. ಈ ವಾರಾಂತ್ಯದ ಎರಡು ಸಂಚಿಕೆಗಳಲ್ಲಿ ಉಪಮುಖ್ಯಮಂತ್ರಿಯವರ ಜೀವನ ಮತ್ತು ಸಾಧನೆಯ ಕಥೆಯನ್ನು ಪ್ರೇಕ್ಷಕರ ಮುಂದೆ ಇರಿಸಲಾಗ್ತಿದೆ. ಕಾರ್ಯಕ್ರಮದ ಪ್ರೊಮೋ ಹೊರಬಂದಿದ್ದು ಭರ್ಜರಿ ವೈರಲ್ ಆಗಿದೆ. ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳು ಹರಿದು ಬರ್ತಿದೆ. ಇದನ್ನೂ ಓದಿ : ಪ್ರೇಕ್ಷಕರಿಗೆ ಮತ್ತೆ ಮತ್ತೆ ನಿರಾಸೆ: ಸೀತಾ ರಾಮ ಸೀರಿಯಲ್ ತಡ ಆಗ್ತಿರೋದಾದ್ರು ಯಾಕೆ?

ಡಿಕೆ ಶಿವಕುಮಾರ್ ಅವರ ಎಪಿಸೋಡ್ ನಲ್ಲಿ ಆದರೆ ಆಪ್ತರು, ಆತ್ಮೀಯರು ಮತ್ತು ಸ್ನೇಹಿತರು ವೇದಿಕೆಯ ಮೇಲೆ ಬಂದಿರುವ ದೃಶ್ಯಗಳನ್ನು ಪ್ರೊಮೋದಲ್ಲಿ ನೋಡಬಹುದಾಗಿದೆ. ಬಂದವರು ಡಿಕೆ ಶಿವಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಸಿಹಿಕಹಿ ಚಂದ್ರು ಅವರು ಕೂಡಾ ಡಿಕೆ ರಮೇಶ್ ಅವರ ಕುರಿತಾಗಿ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.

ಇದನ್ನು ನೋಡಿದ ಮೇಲೆ ಪ್ರೇಕ್ಷಕರಿಗೆ ದಾವಣಗೆರೆ ಮೂಲದ ಸಿಹಿ ಕಹಿ ಚಂದ್ರು (Sihi Kahi Chandru) ಅವರಿಗೂ ಮತ್ತು ಕನಕಪುರ ಮೂಲದ ಡಿಕೆ ಶಿವಕುಮಾರ್ ಅವರಿಗೂ ಹೇಗೆ ಪರಿಚಯ, ಹೇಗೆ ಇಷ್ಟೊಂದು ಆತ್ಮೀಯತೆ ಎನ್ನುವ ಪ್ರಶ್ನೆಯು ಕಾಡಿದೆ. ಸಿಹಿ ಕಹಿ ಚಂದ್ರು ಮತ್ತು ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಶಿಕ್ಷಣವನ್ನು ಮುಗಿಸಿದ್ದರು. ಅವರಿಬ್ಬರೂ ಸಹಪಾಠಿಗಳಾಗಿದ್ದರು ಎಂದು ಹೇಳಲಾಗುತ್ತಿದೆ.

ಆದ್ದರಿಂದಲೇ ಸಿಹಿ ಕಹಿ ಚಂದ್ರು (Sihi Kahi Chandru) ಅವರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ ಅಂತ ಹೇಳಲಾಗಿದ್ದು, ಇವರಿಬ್ಬರೂ ಒಟ್ಟಿಗೆ ಎಲ್ಲಿ , ಯಾವ ಕಾಲೇಜಿನಲ್ಲಿ ಓದಿದ್ರು ಮತ್ತು ಇವರ ನಡುವೆ ಸ್ನೇಹ ಮೂಡಿದ್ದು ಹೇಗೆ, ಆತ್ಮೀಯತೆ ಉಂಟಾಗಿದ್ದು ಹೇಗೆ ಎನ್ನುವುದಕ್ಕೆ ಉತ್ತರವನ್ನು ಪಡೆಯುವುದಕ್ಕೆ ಪ್ರೇಕ್ಷಕರು ವಾರಾಂತ್ಯದ ಎಪಿಸೋಡ್ ಗಳಿಗಾಗಿ ಕಾಯಲೇಬೇಕಾಗಿದೆ.

Leave A Reply

Your email address will not be published.