siddaramaiah bio pic: ಸಿನಿಮಾ ರಂಗದಲ್ಲಿ ಬಯೋಪಿಕ್ ಗಳು ಹೊಸದೇನಲ್ಲ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಯನ್ನು ಮೆರೆದಿರುವ ಸಾಧಕರು, ಅವರು ಜೀವನದಲ್ಲಿ ಎದುರಿಸಿದ ಕಷ್ಟಗಳು, ದಾಟಿ ಬಂದ ಸಂಕಷ್ಟಗಳು ಹಾಗೂ ಯಶಸ್ಸನ್ನು ಪಡೆಯಲು ಅವರು ಪಟ್ಟ ಶ್ರಮವನ್ನು ಸಿನಿಮಾಗಳ ಮೂಲಕ ಜನರ ಮುಂದೆ ತಂದಿರಿಸುವ ಪ್ರಯತ್ನವನ್ನು ಈ ಬಯೋಪಿಕ್ ಸಿನಿಮಾಗಳ ಮೂಲಕ ಮಾಡಲಾಗುತ್ತಿದೆ. ವಿಶೇಷ ಏನೆಂದರೆ ಸಿನಿಮಾ ಪ್ರಿಯರು ಸಹಾ ಬಯೋಪಿಕ್ ಗಳಿಗೆ ವಿಶೇಷ ಮನ್ನಣೆ ನೀಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಬಯೋಪಿಕ್ ಗಳಿಗೆ ವಿಶೇಷವಾದಂತಹ ಒಂದು ಸ್ಥಾನ ಮಾನವಿದೆ.
ಯಾವುದೇ ಸಾಧಕರ ಜೀವನ ಮತ್ತು ಸಾಧನೆಯನ್ನು ಸಿನಿಮಾ ಆಗಿ ಮೂಡಿಸುವಾಗ ಮೂಲ ಪಾತ್ರಕ್ಕೆ ತೆರೆಯ ಮೇಲೆ ಜೀವ ತುಂಬುವ ಕಲಾವಿದರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಏಕೆಂದರೆ ಇಲ್ಲಿ ನಟ, ನಟಿಯರು ಯಾವುದೋ ಒಂದು ಕಲ್ಪನೆಯ ಪಾತ್ರಕ್ಕೆ ಜೀವ ತುಂಬಲು ಹೋಗುವುದಿಲ್ಲ. ಬದಲಾಗಿ ಮತ್ತೊಬ್ಬರ ಜೀವನವನ್ನು ತಾವು ಬದುಕುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣದಿಂದಲೇ ಬಯೋಪಿಕ್ ಗೆ ನಟ, ನಟಿಯರನ್ನು ಅಯ್ಕೆ ಮಾಡುವಾಗ ಸಾಕಷ್ಟು ಎಚ್ಚರಿಕೆಯಿಂದ ಆ ಕೆಲಸವನ್ನು ಮಾಡಲಾಗುವುದು. ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಗೆ ಬರಲು ಪ್ರಭುದೇವ ಪಡೆದ ಸಂಭಾವನೆ ಇಷ್ಟೊಂದಾ? ಶಾಕಿಂಗ್ ಮೊತ್ತ ಪಡೆದ ನಟ!
ಈಗ ಕನ್ನಡದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರಾಜಕೀಯ ಧುರೀಣರೂ ಆಗಿರುವ ಸಿದ್ಧ ರಾಮಯ್ಯ (Siddharamaiah) ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದ್ದು, ಸಿನಿಮಾದ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದ್ದು, ಈ ವಿಷಯವನ್ನು ಕೇಳಿ ಸಿದ್ಧ ರಾಮಯ್ಯನವರ ಅಭಿಮಾನಿಗಳು ಮತ್ತು ಅವರ ಅನುಯಾಯಿಗಳು ಬಹಳ ಖುಷಿಯಾಗಿದ್ದಾರೆ. ಸಿದ್ಧ ರಾಮಯ್ಯನವರ ಪಾತ್ರಕ್ಕೆ ದಕ್ಷಿಣದ ಸ್ಟಾರ್ ನಟ ಬಣ್ಣ ಹಚ್ಚಲಿರುವುದು ಮತ್ತೊಂದು ವಿಶೇಷವಾಗಿದೆ.
ಹೌದು, ಮಾದ್ಯಮವೊಂದರ ಸುದ್ದಿಯ ಪ್ರಕಾರ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಈ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi )ಅವರು ಸಿದ್ಧರಾಮಯ್ಯ ಅವರ ಪಾತ್ರವನ್ನು ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ವೈವಿದ್ಯಮಯ ಪಾತ್ರಗಳಿಗೆ ಹೆಸರಾಗಿರುವ ಅವರು ಈಗ ಸಿದ್ಧ ರಾಮಯ್ಯ ಅವರ ಪಾತ್ರ ಮಾಡಲಿದ್ದಾರೆ ಎನ್ನುವುದು ಎಲ್ಲರ ಗಮನವನ್ನು ಸೆಳೆದಿದೆ. ಅಭಿಮಾನಿಗಳು ಖುಷಿಯಿಂದ ಶುಭ ಹಾರೈಸುತ್ತಿದ್ದಾರೆ.