Shah Rukh Khan: ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಎರಡು ತಿಂಗಳ ಹಿಂದೆ ಹೀಟ್ ಸ್ಟ್ರೋಕ್ ಸಮಸ್ಯೆಯನ್ನು ಎದುರಿಸಿದ್ದರು. ಐಪಿಎಲ್ 2024 ರ (IPL 2024) ವೇಳೆಯಲ್ಲಿ ನಟನಿಗೆ ಹೀಟ್ ಸ್ಟ್ತೋಕ್ ಆಗಿ ಅದರಿಂದ ಡಿ-ಹೈಡ್ರೇಷನ್ ಸಮಸ್ಯೆ ಎದುರಿಸಿದ್ದ ನಟ ಆಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಐಪಿಎಲ್ ವೇಳೆಯಲ್ಲಿ ಪತ್ನಿ ಗೌರಿ ಖಾನಗ ಅವರು ಪತಿಯ ಬಗ್ಗೆ ಹೆಚ್ಚು ಗಮನ ನೀಡಿದ್ದರು.
ಇದಾದ ನಂತರ ಜುಲೈ 29 ರಂದು ಶಾರೂಖ್ ಅವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆದಿದೆ. ಆದರೆ ನಟನ ಕಣ್ಣಿನ ಸರ್ಜರಿ ಸಕ್ಸಸ್ ಆಗಿಲ್ಲ ಎನ್ನುವ ಕಾರಣಕ್ಕೆ ಇದೀಗ ನಟ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೊರಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಮಾದ್ಯಮವೊಂದರ ವರದಿಯ ಪ್ರಕಾರ ನಟ ಇಂದು ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಶಾರೂಖ್ ಅವರ ಕಣ್ಣನಲ್ಲಿ ಪೊರೆಯಿದ್ದ ಕಾರಣಕ್ಕೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ನಟ ಒಳಗಾಗಿದ್ದರು ಎನ್ನಲಾಗಿದೆ. ಎರಡೂ ಕಣ್ಣಿನಲ್ಲಿ ಸಮಸ್ಯೆ ಇತ್ತು ಎನ್ನಲಾಗಿದ್ದು, ಒಂದು ಕಣ್ಣಿಗೆ ಮುಂಬೈನಲ್ಲಿ ಚಿಕಿತ್ಸೆ ನಡೆದಿದ್ದು, ಈಗ ಮತ್ತೊಂದು ಕಣ್ಣಿನ ಚಿಕಿತ್ಸೆಗಾಗಿ ಅಮೇರಿಕಾದ ಕಡೆಗೆ ಹೊರಡಲು ಸಜ್ಜಾಗಿದ್ದಾರೆ ನಟ.
ಮುಂಬೈನಲ್ಲಿ ನಡೆದ ಶಸ್ತ್ರ ಚಿಕಿತ್ಸೆ ಸಫಲವಾಗಲಿಲ್ಲ ಎನ್ನಲಾಗಿದೆ. ಈಗ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ನಟ ಅಲ್ಲಿಂದ ಸ್ವಿಟ್ಜರ್ಲೆಂಡ್ ಗೆ ತೆರಳಿಲಿದ್ದಾರೆ ಎನ್ನಲಾಗಿದೆ. ನಟ ಸಿಟ್ಜರ್ಲೆಂಡ್ ಗೆ ನಟ ಸಿನಿಮಾ ವಿಚಾರಕ್ಕೆ ಹೋಗುತ್ತಿದ್ದಾರೋ ಅಥವಾ ಪ್ರವಾಸಕ್ಕಾಗಿ ಹೋಗುತ್ತಾರೋ ಈ ವಿಚಾರ ಇನ್ನೂ ತಿಳಿದು ಬಂದಿಲ್ಲ.
Jaya Bachchan: ತನ್ನ ಹೆಸರಿನ ಜೊತೆ ಪತಿಯ ಹೆಸರು ಸೇರಿಸಿದ್ದಕ್ಕೆ ರಾಜ್ಯಸಭೆಯಲ್ಲಿ ರೊಚ್ಚಿಗೆದ್ದ ಜಯಾ ಬಚ್ಚನ್