SeethaRama Serial: ಭಾರ್ಗವಿ ಕನಸಿಗೆ ಕೊಳ್ಳಿಯಿಟ್ಟ ಲಾಯರ್; ಸೀತಾ ರಾಮನ ಜೀವನಕ್ಕೇ ಮಾರಕ ಆಗ್ತಾಳಾ ಭಾರ್ಗವಿ?

Written by Soma Shekar

Published on:

---Join Our Channel---

SeethaRama Serial : ಸೀತಾರಾಮ ಸೀರಿಯಲ್ ನಲ್ಲಿ (SeethaRama Serial) ಸೀತಾ ಮತ್ತು ರಾಮನ ಮದುವೆಯ ಮಾತುಕತೆ ವಿಚಾರ ಮುಂದುವರೆಯುತ್ತಿದೆ. ಶೀಘ್ರದಲ್ಲೇ ಅವರಿಬ್ಬರನ್ನು ಪತಿ-ಪತ್ನಿಯಾಗಿ ನೋಡಬೇಕು ಎನ್ನುವ ಆಸೆಯಿಂದ ಹಿರಿಯರಾದ ಸೂರ್ಯಪ್ರಕಾಶ್ (Suryaprakash) ಅವರು ಕಾಯ್ತಿದ್ದಾರೆ. ಅವರು ಮದುವೆಗೆ ಒಪ್ಪಿಗೆಯನ್ನು ನೀಡಿದ್ದಾಗಿದೆ. ಆದರೆ ಸೀತಾ ಕಡೆಯಿಂದ ಮಾತ್ರ ಇನ್ನು ಯಾವುದೇ ಸ್ಪಷ್ಟವಾದ ಪ್ರತಿಕ್ರಿಯೆ ಅಥವಾ ಉತ್ತರ ಸಿಕ್ಕಿಲ್ಲ. ಮತ್ತೊಂದು ಕಡೆ ಭಾರ್ಗವಿ ತನಗೆ ಇದೆಲ್ಲದರಿಂದಲೂ ಖುಷಿಯಾಗ್ತಿದೆ ಅನ್ನೋ ರೀತಿಯಲ್ಲಿ ನಟನೆಯನ್ನು ಮಾಡ್ತಿದ್ದಾಳೆ.

ಮತ್ತೊಂದು ಕಡೆ ಭಾರ್ಗವಿಯ (Bhargavi) ಎಲ್ಲಾ ಕುತಂತ್ರಗಳಿಂದ ಎಲ್ಲರ ಮುಂದೆ ಬಯಲು ಮಾಡ್ಲೇಬೇಕು ಅನ್ನು ನಿರ್ಧಾರವನ್ನು ಮಾಡಿದ್ದಾನೆ ಸತ್ಯಜಿತ್. ಭಾರ್ಗವಿಯು ಮಾವನ ಹತ್ರ ಒಳ್ಳೆಯ ಹೆಸರನ್ನು ಪಡೆಯೋಕೆ, ರಾಮನ ತಾಯಿ ವಾಣಿಯ ಬಗ್ಗೆ ಮಾತನಾಡ್ತಾ, ವಾಣಿ ಅಕ್ಕ ಇದ್ದಿದ್ರೆ ಈಗ ಮನೆಯಲ್ಲಿ ಖುಷಿ ಮತ್ತು ಸಂಭ್ರಮ ಇನ್ನಷ್ಟು ಹೆಚ್ಚಾಗಿರ್ತಿತ್ತು ಅನ್ನೋ ಮಾತನ್ನು ಹೇಳುತ್ತಾಳೆ. ವಿಧಿ ಅವರನ್ನು ಯಾಕೆ ಇಷ್ಟು ಬೇಗ ಕರೆಸಿಕೊಂಡು ಬಿಡ್ತು ಅಂತ ಸೂರ್ಯ ಪ್ರಕಾಶ್ ನೋವನ್ನು ವ್ಯಕ್ತಪಡಿಸಿದ್ದಾರೆ.

ಆಗ ಭಾರ್ಗವಿ ಅಕ್ಕನ ಜಾಗಕ್ಕೆ ಅಕ್ಕನ ತರ ಇರೋ ಸೊಸೆ ಬರ್ತಿದ್ದಾಳೆ, ರಾಮನ ಖುಷಿಯಲ್ಲಿ ನಾವೆಲ್ಲ ನಮ್ಮ ದುಃಖವನ್ನು ಮರೆತುಬಿಡಬೇಕು ಅಂತ ಹೇಳ್ತಾಳೆ. ಎಲ್ಲವುಗಳ ಮಧ್ಯೆ ರಾಮ್ ಮತ್ತು ಲಾಯರ್ ಮಾತನಾಡಿದಂತಹ ವಿಷಯ ಬಹಿರಂಗವಾಗಿದೆ. ಲಾಯರ್ ಅವರು ರಾಮ್ ನ ತಾಯಿ ತಮ್ಮ ಹೆಸರಿನಲ್ಲಿರುವ ಸಂಪೂರ್ಣ ಆಸ್ತಿ ತಮ್ಮ ಮಗ ರಾಮ್ ಗೆ ಮಾತ್ರಾನೇ ಸೇರಬೇಕು, ಬೇಕಾದರೆ ರಾಮ ತನ್ನ ಹೆಂಡತಿ ಮಕ್ಕಳಿಗೆ ಆಸ್ತಿಯನ್ನು ನೀಡಬಹುದು, ಆ ಮನೇಲಿ ಇರೋ ಬೇರೆ ಯಾರಿಗೂ ಸೇರಬಾರದು ಅಂತ ವಿಲ್ ನಲ್ಲಿ ಇದೆ ಅನ್ನೋ ಮಾತನ್ನು ಹೇಳಿದ್ದಾರೆ.

ಅಲ್ಲದೇ ಅವರಿಗೆ ಮನೆಯಲ್ಲೇ ಯಾರೋ ಶತೃ ಇದ್ದಾರೆ ಅನಿಸಿತ್ತು ಅನ್ನೋ ವಿಚಾರವನ್ನು ಹೇಳಿದ್ದಾರೆ. ಆಸ್ತಿಯ ವಿಚಾರದಲ್ಲಿ ಲಾಯರ್ ಹೇಳಿದ ಮಾತು ಈಗ ಭಾರ್ಗವಿಗೆ ಶಾಕ್ ನೀಡಿದೆ. ಯಾವ ಆಸ್ತಿ ಗೋಸ್ಕರ ಇಷ್ಟೊಂದೆಲ್ಲಾ ಕುತಂತ್ರಗಳನ್ನು ಮಾಡ್ತಿದ್ಲೋ, ಆ ಆಸ್ತಿ ರಾಮ್ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಮಾತ್ರ ಕೊಡಬಹುದು ಅನ್ನೋ ವಿಷಯ ತಿಳಿದು ಇನ್ನಷ್ಟು ಸಿಟ್ಟಾಗಿದ್ದಾಳೆ. ಹಾಗಾದ್ರೆ ಭಾರ್ಗವಿ ಮುಂದಿನ ಪ್ಲಾನ್ ಏನು? ಯಾವ ಹೊಸ ಕುತಂತ್ರವನ್ನು ಮಾಡ್ತಾಳೆ ಅನ್ನೋದು ಈಗ ಪ್ರಶ್ನೆಯಾಗಿದೆ.

Leave a Comment