SeethaRaama Serial: ಸಿಹಿ ರಾಮ್ ನ ಸ್ವಂತ ಮಗಳು? ಸೀತಾರಾಮ ಸೀರಿಯಲ್ ನಲ್ಲಿ ಬರ್ತಿದ್ಯಾ ದೊಡ್ಡ ಟ್ವಿಸ್ಟ್?

Written by Soma Shekar

Published on:

---Join Our Channel---

SeethaRaama Serial : ಕನ್ನಡ ಕಿರುತೆರೆಯಲ್ಲಿ ಇತ್ತೀಚಿಗೆ ಪ್ರಸಾರ ಆರಂಭ ಮಾಡಿ ಅದಾಗಲೇ ಟಾಪ್ 2 ಸ್ಥಾನವನ್ನು ಪಡೆದಿರುವ ಸೀತಾ ರಾಮ (SeethaRama Serial) ಸೀರಿಯಲ್ ಜನ ಮೆಚ್ಚಿದ ಸೀರಿಯಲ್ ಆಗಿ ಯಶಸ್ಸಿನ ಕಡೆಗೆ ನಾಗಾಲೋಟವನ್ನು ಮಾಡುತ್ತಿದೆ. ಹೊಸ ಕಥೆ, ಸಿಹಿ ಪಾತ್ರ ಪ್ರೇಕ್ಷಕರ ವಿಶೇಷ ಮೆಚ್ಚುಗೆಯನ್ನು ಗಳಿಸುವಾಗಲೇ ಈ ಸೀರಿಯಲ್ ಕಥೆ ಏನಿರಬಹುದು ಎನ್ನುವುದನ್ನು ಸಹಾ ಕೆಲವರು ಊಹೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಸೀರಿಯಲ್ ನಲ್ಲಿ ನಾಯಕ ರಾಮ್ (Ram) ತನ್ನ ಪ್ರೀತಿಯಿಂದ ದೂರಾಗಿದ್ದಾನೆ, ಆತನ ಜೀವನದಲ್ಲಿ ಇದ್ದ ಹೆಣ್ಣು ಯಾರು? ಇನ್ನೊಂದೆಡೆ ನಾಯಕಿ ಸೀತಾಗೆ ಸಿಹಿ (Sihi) ಸ್ವಂತ ಮಗಳೇ ಅಲ್ಲ, ಸೀತಾಗೆ ಇನ್ನೂ ಮದುವೆಯೇ ಆಗಿಲ್ಲ ಎನ್ನುವ ಅನುಮಾನ ಕೂಡಾ ಹಲವರಿಗೆ ಮೂಡಿದೆ. ಇದೆಲ್ಲದರ ನಡುವೆ ಮತ್ತೊಂದು ಹೊಸ ವಿಷಯ ಕೂಡಾ ಚರ್ಚೆಯಾಗುತ್ತಿದೆ.

ಹೌದು ನಾಯಕ ರಾಮ್ ಸಿಹಿಯ ಕಡೆಗೆ ಏಕೆ ಅಷ್ಟೊಂದು ಅಕ್ಕರೆ, ಪ್ರೀತಿ ಮತ್ತು ವಾತ್ಸಲ್ಯ ಹೊಂದಿದ್ದಾನೆ ಎನ್ನುವುದು, ಇಷ್ಟು ಕಡಿಮೆ ಅವಧಿಯಲ್ಲಿ ಸಿಹಿಯನ್ನು ಅಷ್ಟೊಂದು ಹಚ್ಚಿಕೊಂಡಿದ್ದಾನೆ ಎನ್ನುವುದು ಸಹಾ ಒಂದಷ್ಟು ಹೊಸ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗ ಒಂದಷ್ಟು ಜನರ ಅನಿಸಿಕೆ ಏನೆಂದರೆ ಸಿಹಿ ಸೀತಾಳ ಗೆಳತಿಯ ಮಗಳಾಗಿರಬೇಕು, ಆ ಮಗುವಿನ ತಾಯಿಯೇ ರಾಮ್ ನ ಜೀವನದಿಂದ ದೂರಾದ ಅವನ ಪ್ರೀತಿಯಿರಬೇಕು, ಸಿಹಿ ರಾಮ್ ನ ಮಗಳೇ ಇರಬೇಕು ಅದಕ್ಕೆ ಅಪ್ಪನಿಗೆ ಮಗಳ ಕಡೆಗೆ ಇಂತಹ ಸೆಳೆತ ಮೂಡಿದೆ ಎನ್ನುವುದಾಗಿದೆ.

ಆದ್ರೆ ಈ ಊಹೆ ಎಷ್ಟು ಸರಿ ಅನ್ನೋದನ್ನಂತೂ ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ. ಕಥೆಯಲ್ಲಿ ಯಾವ ಹೊಸ ಟ್ವಿಸ್ಟ್ ಬರುತ್ತದೆಯೋ ಯಾರಿಗೆ ಗೊತ್ತು. ಜನರ ಊಹೆಗಳು ನಿಜವಾದ ಉದಾಹರಣೆಗಳು ಇದೆ. ಒಟ್ಟಾರೆ ಮನರಂಜನೆಯ ವಿಚಾರದಲ್ಲಿ ಮಾತ್ರ ಸೀತಾ ರಾಮ ಭರ್ಜರಿ ಯಶಸ್ಸನ್ನು ಪಡೆದುಕೊಂಡಿದೆ.

Leave a Comment