SBI ಆರಂಭಿಸಿದ ವಿಶೇಷ ಸೇವೆ: Yono app ನಿಂದ ಕೂತಲ್ಲೇ ತೆರೆಯಿರಿ ಉಳಿತಾಯ ಖಾತೆ! ಸ್ಟೆಪ್ ಬೈ ಸ್ಟೆಪ್ ಪ್ರೊಸೆಸ್ ನಿಮಗಾಗಿ
SBI saving account via Yono App : ದೇಶದ ಅತ್ಯಂತ ಹಳೆಯದಾದ ಮತ್ತು ಅದೇ ವೇಳೆ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸಹಾ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ NRI ಗ್ರಾಹಕರಿಗಾಗಿ ಹೊಸ ಉಡುಗೊರೆಯೊಂದನ್ನು ನೀಡಿ ಸುದ್ದಿಯಾಗಿದೆ. ಹೌದು, ಬ್ಯಾಂಕ್ ಈಗ ಒಂದು ಹೊಸ ಡಿಜಿಟಲ್ ಸೇವೆಯನ್ನು ಪ್ರಾರಂಭಿಸಿದೆ.
ಈ ಮೂಲಕ ಅನಿವಾಸಿ ಭಾರತೀಯರು (NRI) ಇನ್ನು ಮುಂದೆ ಕೇವಲ ಕೆಲವೇ ಕೆಲವು ನಿಮಿಷಗಳಲ್ಲಿ ತಮ್ಮ ತಮ್ಮ ಮನೆಯಿಂದಲೇ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ. ಎಸ್ ಬಿ ಐ (SBI) ಎನ್ ಆರ್ ಐಗಳಿಗೆ ಯೋನೋ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಬಳಸಿ ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ತೆರೆಯಲು ಅವಕಾಶವನ್ನು ನೀಡುತ್ತಿದೆ.
ಈ ಸೇವೆಯ ಲಾಭವನ್ನು ಯಾರಿಗೆ?
ಅನಿವಾಸಿ ಭಾರತೀಯರು (NRI’S), ಅನಿವಾಸಿ ಸಾಮಾನ್ಯರು (NROಎ) ಮತ್ತು ಅನಿವಾಸಿ ಹೊರಗಿನವರಿಗೆ (NRE) ಗಳಿಗೆ ಡಿಜಿಟಲ್ ಖಾತೆಗಳನ್ನು ತೆರೆಯುವುದಕ್ಕೆ ಬ್ಯಾಂಕ್ ಅನುಮತಿಯನ್ನು ನೀಡಿದೆ. ಇಂತಹುದೊಂದು ಸೌಲಭ್ಯಕ್ಕಾಗಿ ಎನ್ ಆರ್ ಐ ಗ್ರಾಹಕರು ಬಹಳ ದಿನಗಳಿಂದ ಬೇಡಿಕೆಯನ್ನು ಇಟ್ಟಿದ್ದರು ಎನ್ನಲಾಗಿದೆ.
ಈಗ ಹೊಸ ಸೌಲಭ್ಯದ ಅಡಿಯಲ್ಲಿ ಇನ್ನು ಮುಂದೆ ಅವರು ತಮ್ಮ ಉಳಿತಾಯ ಮತ್ತು ಚಾಲ್ತಿ ಖಾತೆಯನ್ನು ಬ್ಯಾಂಕಿನ YONO ಅಪ್ಲಿಕೇಶನ್ ಅನ್ನು ಬಳಸುವ ಮೂಲಕ ತೆರೆಯಬಹುದಾದ ಅವಕಾಶವನ್ನು ಪಡೆದುಕೊಂಡಿದ್ದಾರೆ.
SBI ನ YONO ಆ್ಯಪ್ ಬಳಸಿ ಖಾತೆಯನ್ನು ತೆರೆಯುವುದು ಹೇಗೆ ?
- ಮೊದಲಿಗೆ, ನೀವು ನಿಮ್ಮ ಸ್ಮಾರ್ಟ್ ಫೋನ್ನಲ್ಲಿ YONO SBI ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಅಪ್ಲಿಕೇಶನ್ ಡೌನ್ಲೋಡ್ ಆದ ನಂತರ ನೀವು NRI ಮತ್ತು NRO ಖಾತೆಯನ್ನು ತೆರೆಯುವ ಆಯ್ಕೆ ನಿಮಗೆ ಸಿಗುತ್ತದೆ, ಅದನ್ನು ಆಯ್ಕೆಮಾಡಿ.
- ನಂತರ ಹೊಸ ಪುಟವು ತೆರೆಯುತ್ತದೆ, ಇದರಲ್ಲಿ ನಿಮಗೆ KYC ವಿವರಗಳನ್ನು ನೀಡಲು ಮತ್ತೆ ಎರಡು ಆಯ್ಕೆಗಳು ಲಭ್ಯವಿರುತ್ತವೆ.
- ಭಾರತದಲ್ಲಿ ನಿಮ್ಮ ಆದ್ಯತೆಯ SBI ಶಾಖೆಯಲ್ಲಿ ಡಾಕ್ಯುಮೆಂಟ್ ಗಳನ್ನು ಠೇವಣಿ ಮಾಡುವ ಆಯ್ಕೆ ನಿಮಗೆ ಲಭ್ಯವಿರುತ್ತದೆ.
- ನಿಮ್ಮ ಆದ್ಯತೆಯ ಶಾಖೆಯನ್ನು ಆಯ್ಕೆ ಮಾಡಿಕೊಂಡ ನಂತರ, ಮುಂದಿನ ಪ್ರಕ್ರಿಯೆಯನ್ನು ಅನುಸರಿಸಿದರೆ ಆಯಿತು.
- SBI ವಿದೇಶಾಂಗ ಕಚೇರಿ, ಹೈಕಮಿಷನ್, ಕೋರ್ಟ್ ಮ್ಯಾಜಿಸ್ಟ್ರೇಟ್, ಭಾರತೀಯ ರಾಯಭಾರ ಕಚೇರಿ, ಪ್ರತಿನಿಧಿ ಕಚೇರಿ ಅಥವಾ ನ್ಯಾಯಾಧೀಶರೊಂದಿಗೆ KYC ದಾಖಲೆಗಳನ್ನು ಪರಿಶೀಲಿಸಿ ಮತ್ತು ಮುಂದಿನ ಪ್ರಕ್ರಿಯೆಗಾಗಿ ಗೊತ್ತುಪಡಿಸಿದ ಶಾಖೆಗೆ ಮೇಲ್ ಮಾಡಿ.
- ಈ ರೀತಿಯ ಪ್ರಕ್ರಿಯೆಗಳ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು SBI ನಲ್ಲಿ ತೆರೆಯಲಾಗುತ್ತದೆ.
NRE ಮತ್ತು NRO ಖಾತೆಗಳು ಯಾವುವು?
ಎನ್ ಆರ್ ಐ ತನ್ನ ಹೆಸರಿನಲ್ಲಿ ತನ್ನ ವಿದೇಶಿ ಗಳಿಕೆಯನ್ನು ಉಳಿಸುವುದಕ್ಕಾಗಿ ಭಾರತದಲ್ಲಿ ಎನ್ ಆರ್ ಐ ಖಾತೆಯನ್ನು ತೆರೆಯುತ್ತಾರೆ. ಆದೇ ವೇಳೆ ತಮ್ಮ ಭಾರತೀಯ ಆದಾಯವನ್ನು ನಿರ್ವಹಿಸಲು, ಭಾರತದಲ್ಲಿ NRO ಖಾತೆಯನ್ನು ತೆರೆಯಲಾಗುತ್ತದೆ. ಈ ಗಳಿಕೆಗಳಲ್ಲಿ ಲಾಭಾಂಶ, ಬಡ್ಡಿ, ಪಿಂಚಣಿ, ಬಾಡಿಗೆ ಇತ್ಯಾದಿಗಳು ಸಹಾ ಸೇರಿವೆ.