ಕೇದಾರನಾಥದಲ್ಲಿ ಖಾನ್ ಮಗಳು! ಜೈ ಭೋಲೇನಾಥ್ ಜೊತೆಗೆ ನಟಿ ಹೇಳಿದ ಮಾತಿಗೆ ಹರಿದು ಬರ್ತಿದೆ ಮೆಚ್ಚುಗೆ

Written by Soma Shekar

Published on:

---Join Our Channel---

Sara Ali Khan : ಬಾಲಿವುಡ್ ನ (Bollywood) ಯುವ ಸ್ಟಾರ್ ನಟಿಯರಲ್ಲಿ ಸಾರಾ ಅಲಿ ಖಾನ್ ಕೂಡಾ ಒಬ್ಬರಾಗಿದ್ದಾರೆ. ನಟಿ ಸಾರಾ ಅಲಿ ಖಾನ್ ಪಟೌಡಿ ಕುಟುಂಬದಿಂದ ಬಂದಿದ್ದರೂ, ತನ್ನ ತಂದೆ ತಾಯಿ ಇಬ್ಬರು ಬಾಲಿವುಡ್ ನ ಸ್ಟಾರ್ ಗಳಾಗಿದ್ದರೂ, ಸಾಕಷ್ಟು ಸರಳತೆಯನ್ನು ಮೆರೆಯುವ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಸಾರಾ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿದ್ದು, ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡದಾಗಿದೆ. ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದಷ್ಟು ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ಈಗ ವೈರಲ್ ಆಗಿದ್ದು, ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ಸಾರಾ ಖಾಲಿಖಾನ್ ಹಂಚಿಕೊಂಡಿರುವ ಹೊಸ ಫೋಟೋಗಳ ವಿಶೇಷತೆ ಏನು ಎನ್ನುವುದಾದರೆ, ಸಾರಾ ಎರಡನೇ ಬಾರಿಗೆ ಕೇದಾರನಾಥ ದಿವ್ಯ ಧಾಮಕ್ಕೆ ಭೇಟಿಯನ್ನು ನೀಡಿದ್ದಾರೆ. ಅಲ್ಲಿನ ಫೋಟೋಗಳನ್ನು ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ : ಮುಖ್ಯ ಪಾತ್ರಧಾರಿಯ ಕಿರಿಕ್! ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯಕ್ಕೆ ಅಸಲಿ ಕಾರಣ ಬೇರೇನೇ ಇದೆ

ಸಾರಾ ಆಲಿ ಖಾನ್ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಮೊದಲ ಸಿನಿಮಾದ ಹೆಸರು ಕೇದಾರನಾಥ್ (Kedarnath). ಈ ಸಿನಿಮಾದಲ್ಲಿ ಅಗಲಿದ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪ್ರೇಕ್ಷಕರ ವಿಶೇಷ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.

ಸಾರಾ ಅಲಿ ಖಾನ್ ಬಾಲಿವುಡ್ ನ ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan) ಮತ್ತು ಅವರ ಮೊದಲನೇ ಪತ್ನಿ ಅಮೃತ ಸಿಂಗ್ (Amrita Singh( ಅವರ ಹಿರಿಯ ಮಗಳಾಗಿದ್ದಾಳೆ. ಸಾರಾ ಆಗಾಗ ದೇವಾಲಯಗಳಿಗೆ ಭೇಟಿ ನೀಡಿ, ಧಾರ್ಮಿಕ ವಿಧಿ ವಿಧಾನಗಳ ಅನುಸಾರ ದೇವರ ದರ್ಶನವನ್ನು ಮಾಡುತ್ತಾರೆ.

ಕೇದಾರನಾಥ ದೇವಸ್ಥಾನಕ್ಕೆ ನಟಿಯ ಜೀವನದಲ್ಲಿ ಒಂದು ವಿಶೇಷ ಸ್ಥಾನವಿದೆ. ಏಕೆಂದರೆ ನಟಿ ತಮ್ಮ ಸಿನಿಮಾ ವೃತ್ತಿ ಜೀವನದ ಆರಂಭದಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಿದ್ದು ಇದೇ ಪುಣ್ಯಕ್ಷೇತ್ರದಲ್ಲಿ ಎನ್ನುವುದು ವಿಶೇಷವಾಗಿದೆ.

ಕೆಲವೇ ಜನರಷ್ಟೇ ಈ ಪುಣ್ಯಕ್ಷೇತ್ರಕ್ಕೆ ಬರಲು ಅದೃಷ್ಟ ಪಡೆದಿರುತ್ತಾರೆ. ನಾನು ಇಲ್ಲಿಗೆ ಎರಡನೇ ಬಾರಿಗೆ ಬರುತ್ತಿದ್ದು, ಇದು ನನ್ನ ಪಾಲಿನ ಪುಣ್ಯವೆಂದು ಭಾವಿಸಿದ್ದೇನೆ ಎಂದು ನಟಿ ಸಂತೋಷದಿಂದ ಹೇಳಿಕೊಂಡಿದ್ದಾರೆ.

Leave a Comment