ಒಂದು ಟವೆಲ್ ಗಾಗಿ ಅಮ್ಮನ ಮೇಲೆ ರೇಗಾಡಿದ ಸಾರಾ: ಅಸಲಿ ವಿಷಯ ತಿಳಿದು ಭೇಷ್ ಸಾರಾ ಎಂದ್ರು ನೆಟ್ಟಿಗರು

0 3

Sara Ali Khan : ಸೆಲೆಬ್ರಿಟಿಗಳ ಜೀವನ ಅದರಲ್ಲೂ ಸಿನಿಮಾ ಸೆಲೆಬ್ರಿಟಿಗಳ ಜೀವನ ಎಂದರೆ ಅದೊಂದು ಐಶಾರಾಮೀ ಬದುಕು ಎನ್ನುವಂತೆಯೇ ಬಿಂಬಿತವಾಗಿದೆ. ಅವರು ಬಳಸುವ ವಸ್ತುಗಳಿಂದ ಹಿಡಿದು ಅವರು ತಿನ್ನುವ ಆಹಾರ, ಭೇಟಿ ನೀಡುವ ಸ್ಥಳಗಳು, ತೊಡುವ ವಸ್ತ್ರಗಳು ಕೂಡಾ ಬ್ರಾಂಡೆಡ್ ಆಗಿರುತ್ತವೆ. ಸಾವಿರಗಳಲ್ಲ, ಲಕ್ಷಗಳ ಮೊತ್ತದಲ್ಲಿನ ಡ್ರೆಸ್ ಗಳನ್ನು ತೊಟ್ಟು ಮಿಂಚುತ್ತಾರೆ. ಇವರಿಗೆ ಸಾವಿರಗಳೆಂದರೆ ಲೆಕ್ಕಕ್ಕೆ ಇಲ್ಲವೇನೋ ಎನಿಸುವಂತೆ ಇರುತ್ತದೆ ಇವರ ಬದುಕು.

ಆದರೆ ಈಗ ನಟಿ ಸಾರಾ ಆಲಿ ಖಾನ್ ವಿಚಾರಕ್ಕೆ ಬಂದಾಗ ಸುಳ್ಳು ಎನಿಸುತ್ತದೆ. ಸಾರಾ ಆಲಿ ಖಾನ್ ಪಟೌಡಿ (Pataudi) ರಾಜ ಮನೆತನದವರು, ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan) ಮತ್ತು ಅವರ ಮೊದಲ ಪತ್ನಿ ನಟಿ ಅಮೃತಾ ಸಿಂಗ್ (Amrita Singh) ಅವರ ಮಗಳು. ಐಶಾರಾಮೀ ಜೀವನದಲ್ಲೇ ಬೆಳೆದವರು. ಆದರೆ ಸಾರಾ ಮಾತ್ರ ತಾವು ಆದಷ್ಟು ಸಿಂಪಲ್ ಆಗಿರಲು ಮತ್ತು ಅನಾವಶ್ಯಕವಾಗಿ ದುಂದು ವೆಚ್ಚ ಮಾಡದಿರಲು ಬಯಸುವ ಯುವತಿಯಾಗಿದ್ದಾರೆ. ಇದನ್ನೂ ಓದಿ: ಕೇರಳ ಸ್ಟೋರಿಗೆ ಅಮೆರಿಕಾದಲ್ಲಿ ಇದೆಂತಾ ಕ್ರೇಜ್: ಸಿನಿಮಾನ ಟೀಕೆ ಮಾಡೋರು ಈಗ ಏನಂತಾರೆ?

ಇತ್ತೀಚಿಗೆ ಇಂತಹುದೊಂದು ವಿಚಾರವನ್ನ ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಅವರು ಹೇಳಿದ್ದಾರೆ. ವಿಕ್ಕಿ ಕೌಶಲ್ ಮತ್ತು ಸಾರಾ ಜೋಡಿಯಾಗಿ ನಟಿಸಿರುವ ಝರಾ ಹಟ್ಕೇ, ಝರಾ ಬಚ್ಕೇ (Zara Hatke Zara Bachke) ಸಿನಿಮಾ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆ ಕಂಡಿದೆ. ಈ ಸಿನಿಮಾದ ಪ್ರಚಾರ ಕಾರ್ಯದ ವೇಳೆ ವಿಕ್ಕಿ ಸಾರಾ ಬಗ್ಗೆ ಒಂದು ಆಸಕ್ತಿಕರವಾದ ವಿಚಾರವನ್ನು ಹೇಳಿದ್ದಾರೆ.

ಸಾರಾ ತಮ್ಮ ತಾಯಿ 1600 ರೂಪಾಯಿ ಕೊಟ್ಟು ಒಂದು ಟವೆಲ್ ಅನ್ನು ಖರೀದಿಸಿದರಂತೆ. ಆದರೆ ಅದನ್ನು ತಿಳಿದಾಗ ಸಾರಾ ತಮ್ಮ ಅಮ್ಮನ ಗಟ್ಟಿಯಾಗಿ ಮಾತನಾಡುತ್ತಾ, ಒಂದು ಟವಲ್ ಗೆ ಯಾರು ಸಾವಿರದ ಆರನೂರು ರೂಪಾಯಿ ಕೊಡ್ತಾರೆ ಎಂದು ಕೇಳಿದರಂತೆ. ವಿಕ್ಕಿ ಹೇಳಿದ ಮಾತಿಗೆ ಸಾರಾ (Sara) ಪ್ರತಿಕ್ರಿಯೆ ನೀಡುತ್ತಾ, ನಿಜಕ್ಕೂ ಯಾರು ಅಷ್ಟು ಹಣ ಕೊಟ್ಟು ಟವೆಲ್ ತಗೋಳ್ತಾರೆ. ಅದೂ ಅಲ್ಲದೇ ವ್ಯಾನಿಟಿ ವ್ಯಾನ್ ನಲ್ಲಿ ಒಳ್ಳೆ ಟವಲ್ ನಾನು ಇಟ್ಟಿರ್ತೀನಿ.

ಅಮ್ಮ ಹೀಗೆ ಸುಮ್ಮನೆ ದುಂದು ವೆಚ್ಚ ಯಾಕೆ ಮಾಡಬೇಕು ಎಂದು ಸಾರಾ ಹೇಳಿದ್ದಾರೆ. ಈ ಹಿಂದೆ ಒಂದು ಶೋ ನಲ್ಲೂ ಸಹಾ ಸಾರಾ ತಾನು ಸಿಂಪಲ್ ಆಗಿ ಇರೋಕೆ ಇಷ್ಟ ಪಡ್ತೀನಿ ಅಂತ ಹೇಳಿದ್ರು. ಟೂತ್ ಪೇಸ್ಟ್ ನ ಟ್ಯೂಬ್ ನ ಕೂಡಾ ಅದ್ರಲ್ಲಿರೋ ಪೇಸ್ಟ್ ಎಲ್ಲಾ ತೆಗೆಯೋ ವರೆಗೂ ಬಿಸಾಡಲ್ಲ ಎಂದು ಹೇಳಿ ಅಚ್ಚರಿಯನ್ನು ಮೂಡಿಸಿದ್ದರು.

Leave A Reply

Your email address will not be published.