Actor Nagbhushan ಸ್ಯಾಂಡಲ್ವುಡ್ ನಟನ ಕಾರ್ ಅಪಘಾತ: ಸ್ಥಳದಲ್ಲೇ ಮಹಿಳೆ ಸಾವು!

Written by Soma Shekar

Published on:

---Join Our Channel---

Actor Nagabhushan : ಕನ್ನಡ ಸಿನಿಮಾ ರಂಗದಲ್ಲಿ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಮೂಲಕ ಮಿಂಚಿದ್ದ ನಟ ನಾಗಭೂಷಣ್ (Nagabhushan) ಅವರ ವಿರುದ್ಧ ಹಿಟ್ ಅಂಡ್ ರನ್ ಕೇಸ್ ಅನ್ನು (Hit and Run) ದಾಖಲು ಮಾಡಲಾಗಿದೆ. ನಾಗಭೂಷಣ್ ಅವರು ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ಅವರ ಕಸಿನ್ ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

ನಾಗಭೂಷಣ್ ಅವರು ತಮ್ಮ ಪಾತ್ರದ ಮೂಲಕ ಪ್ರೇಕ್ಚಕರ ಮನಸ್ಸನ್ನು ಗೆದ್ದಿದ್ದರು, ಈಗ ಇದೇ ನಟನ ವಿರುದ್ಧ ಹಿಟ್ & ರನ್ ಆರೋಪ ಮಾಡಲಾಗಿದೆ. ಅಕ್ಟೋಬರ್ 30 ರ ರಾತ್ರಿ ನಾಗಭೂಷಣ್ ಅವರ ಕಾರಿಗೆ ಅಪಘಾತವಾಗಿದ್ದು, ಈ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಮತ್ತೊಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ.

ನಾಗಭೂಷಣ್ ಅವರು ರಾಜರಾಜೇಶ್ವರಿ ನಗರದ ತಮ್ಮ ಸ್ನೇಹಿತನ ಮನೆಯಿಂದ ತಮ್ಮ ಮನೆಗೆ ಹಿಂತಿರುಗುವ ವೇಳೆಯಲ್ಲಿ ಅಫಘಾತ ಸಂಭವಿಸಿದ್ದು, ವಿಚಾರಣೆ ವೇಳೆ ಅವರು, ಗಾಯಾಳುಗಳನ್ನು ತಾವೇ ಆಸ್ಪತ್ರೆಗೆ ಸೇರಿಸಿದ್ದರು ಎಂದು ತಿಳಿದು ಬಂದಿದೆ. ಆದರೆ ಮಹಿಳೆಯು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಹಳ್ಳಿ ಕೆ ಎಸ್ ಲೇಔಟ್ ನ ಸಂಚಾರಿ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿದೆ. ಅಪಘಾತಕ್ಕೀಡಾದ ದಂಪತಿಯ ಪುತ್ರ ಇದಕ್ಕೆ ಕಾರಣ ಕಾರು ಚಾಲಕನ ನಿರ್ಲಕ್ಷ್ಯವೇ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ನಟ ನಾಗಭೂಷಣ್ ಅವರು ಠಾಣೆಯಲ್ಲಿ ಇದ್ದಾರೆ ಎನ್ನಲಾಗಿದೆ. ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದವರನ್ನು ಕಾರು ಗುದ್ದಿದೆ ಎನ್ನಲಾಗಿದೆ..

ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬರುವಾಗ, ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೃಷ್ಣ ಮತ್ತು ಪ್ರೇಮ ದಂಪತಿಗೆ ಕಾರು ಡಿಕ್ಕಿ ಹೊಡೆದಿದೆ.ಕಾರ್ ಫುಟ್​ ಪಾತ್​​ ನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಫಘಾತ ಸಂಭವಿಸಿದ ವೇಳೆಯಲ್ಲಿ ಪ್ರೇಮ ಅವರ ಮುಖ, ತಲೆಗೆ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಪಘಾತದ ನಂತರ ಕೆಲವೇ ಕ್ಷಣಗಳಲ್ಲಿ ಪೋಲಿಸರು ಸ್ಥಳಕ್ಕೆ ಆಗಮಿಸಿ ನಾಗಭೂಷಣ್ ಅವರನ್ನು ಬಂಧಿಸಿದ್ದಾರೆ.‌ ನಟ ತಾನು ಮದ್ಯ ಸೇವನೆ ಮಾಡಿರಲಿಲ್ಲ ಎಂದು ಸಹಾ ವಿಚಾರಣೆಯ ವೇಳೆಯಲ್ಲಿ ತಿಳಿಸಿದ್ದಾರೆ.

Leave a Comment