ಬ್ಯುಸಿ ಶೆಡ್ಯೂಲ್ ನಡುವೆ ಡಿನ್ನರ್ ಡೇಟ್ ಗೆ ಹೋದ ಸಮಂತಾ: ಯಾರ ಜೊತೆ ಅಂತ ನೋಡಿ ಖುಷಿ ಪಟ್ಟ ಫ್ಯಾನ್ಸ್
Samantha Ruth Prabhu: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸಿನಿಮಾ, ಮಯೊಸಿಟಿಸ್ ಆರೋಗ್ಯ ಸಮಸ್ಯೆ, ಅದರ ಚಿಕಿತ್ಸೆ ಹೀಗೆ ಸಾಕಷ್ಟು ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿ ತೊಡಗಿಕೊಂಡಿದ್ದಾರೆ. ಆಗಾಗ ಸುದ್ದಿಗಳಲ್ಲಿ ಸಹಾ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಸಮಂತಾ ರುತ್ ಪ್ರಭು ಇತ್ತೀಚಿಗೆ ನಟಿಸಿದ ಶಾಕುಂತಲಂ (Shakuntalam) ಸಿನಿಮಾ ಸೋಲನ್ನು ಕಂಡರೂ ಸಹಾ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.
ಸಮಂತಾ ತಮ್ಮ ಮಾಜಿ ಪತಿ ನಾಗಚೈತನ್ಯ (Nagachaitanya) ಅವರಿಗಿಂತ ಹೆಚ್ಚು ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ನಟಿಯ ಹೊಸ ವೆಬ್ ಸಿರೀಸ್ ಸಿಟಾಡೆಲ್ ನ (citadel) ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
ಸಿನಿಮಾ, ವೆಬ್ ಸಿರೀಸ್ ಮತ್ತು ಜಾಹೀರಾತುಗಳ ನಡುವೆಯೂ ಸ್ವಲ್ಪ ಬಿಡುವು ಮಾಡಿಕೊಂಡು ನಟಿಯು ಡಿನ್ನರ್ ಡೇಟ್ ಮಾಡಿದ್ದಾರೆ. ಅಪರೂಪಕ್ಕೆ ಎನ್ನುವಂತೆ ಹೊರಗೆ ಸುತ್ತಾಡಿ ಎಂಜಾಯ್ ಮಾಡಿದ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
ಸಮಂತಾ ಬಹು ದಿನಗಳ ನಂತರ ತಮ್ಮ ತಾಯಿಯೊಂದಿಗೆ ಡಿನ್ನರ್ ಗೆ ಬಂದಿದ್ದು, ಆ ಸಂತಸದ ಕ್ಷಣಗಳ ಫೋಟೋ ವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋಗೆ ಅವರ ಅಭಿಮಾನಿಗಳ ಮೆಚ್ಚುಗೆಗಳು ಹರಿದು ಬರುತ್ತಿದೆ.
ಪ್ರಸ್ತುತ ನಟಿಯು ಸಿಟಾಡೆಲ್ ವೆಬ್ ಸೀರಿಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದು, ಇದರಲ್ಲಿ ಅವರು ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ನಟಿಸಿದ್ದಾರೆ. ಈ ವೆಬ್ ಸಿರೀಸ್ ಗಾಗಿ ಕೆಲವು ಹಸಿ ಬಿಸಿ ದೃಶ್ಯಗಳಿಗೂ ನಟಿ ಓಕೆ ಎಂದಿದ್ದಾರಂತೆ.
ಇದಲ್ಲದೇ ತೆಲುಗಿನಲ್ಲಿ ನಟ ವಿಜಯ ದೇವರಕೊಂಡ (Vijaya Devarakonda) ಜೊತೆಗೆ ಖುಷಿ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿದ್ದು, ಕೆಲವೇ ದಿನಗಳ ಹಿಂದೆಯಷ್ಟೇ ಈ ಸಿನಿಮಾದ ಒಂದು ಹಾಡು ಬಿಡುಗಡೆ ಆಗಿ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ.
ಇತ್ತೀಚಿನ ದಿನಗಳಲ್ಲಿ ಸಮಂತಾ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಯಶೋಧಾ (Yashodha) ಮತ್ತು ಶಾಕುಂತಲಂ ಎರಡೂ ಕೂಡಾ ನಾಯಕಿ ಪ್ರಧಾನ ಸಿನಿಮಾಗಳೇ ಆಗಿವೆ. ಆದರೆ ಯಶೋಧ ಸ್ವಲ್ಪ ಮಟ್ಟಿಗೆ ಗೆಲುವು ಕಂಡರೆ, ಶಾಕುಂತಲಂ ಹೀನಾಯ ಸೋಲುಂಡಿದೆ.
ನಟಿ ಸಮಂತಾ ಈ ಹಿಂದೆ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ಈಗ ಅದಾದ ಮೇಲೆ ಸಿಟಾಡೆಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಲಿವುಡ್ ನ ಸಿಟಾಡೆಲ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.