ಆ ಒಂದು ಸಮಸ್ಯೆಯಿಂದ ಸಲ್ಮಾನ್ ಮದುವೆ ಆಗಿಲ್ಲ: ನಟನ ತಂದೆ ಬಹಿರಂಗಪಡಿಸಿದ ಸತ್ಯ
Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ನಟನಾಗಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗವಿದೆ. ಸಿನಿಮಾ ವಿಚಾರಗಳಿಗೆ ಮಾತ್ರವೇ ಅಲ್ಲದೇ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಸಹಾ ಆಗಾಗ ಸುದ್ದಿಗಳಾಗುತ್ತಲೇ ಇರುತ್ತಾರೆ.. ಸಿನಿಮಾ ರಂಗ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನ (Big Boss) ನಿರೂಪಣೆ ಮಾಡುವ ಮೂಲಕ ಅವರು ಕಿರುತೆರೆಯಲ್ಲಿ ಸಹಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ನಟ ಸಲ್ಮಾನ್ ಖಾನ್ ಅವರು ಬಾಲಿವುಡ್ ನ ಹಲವು ಸ್ಟಾರ್ ನಟಿಯರ ಜೊತೆಗೆ ಡೇಟಿಂಗ್ ಮಾಡಿದ್ದಾರೆ ಎನ್ನುವ ವಿಚಾರವು ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಅಲ್ಲದೇ ಎಲ್ಲರಿಗೂ ಆಗ ಮೂಡುವ ಪ್ರಶ್ನೆ ಒಂದೇ. ಇಷ್ಟು ಜನ ಗರ್ಲ್ ಫ್ರೆಂಡ್ಸ್ ಇದ್ದರೂ ಸಲ್ಮಾನ್ ಖಾನ್ ಏಕೆ ಮದುವೆಯಾಗಿಲ್ಲ ಎನ್ನುವುದು. ಈಗ ಚಾಟ್ ಶೋ ಒಂದರಲ್ಲಿ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (Salim Khan) ತಮ್ಮ ಮಗ ಬ್ರಹ್ಮಚಾರಿಯಾಗಿ ಉಳಿದಿರುವುದು ಏಕೆ ಎನ್ನುವುದನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಸ್ತು ಶುಭಮಸ್ತು ನಲ್ಲಿ ದೊಡ್ಡ ಬದಲಾವಣೆ: ಸಮರ್ಥ್ ಪಾತ್ರದಿಂದ ದೀಪಕ್ ಹೊರ ನಡೆದಿದ್ದೇಕೆ?
ಸಲೀಂ ಖಾನ್ ಅವರು ತಮ್ಮ ಪತ್ನಿ ಸಲ್ಮಾ ಖಾನ್ (Salma Khan) ಮತ್ತು ಮಗ ಸಲ್ಮಾನ್ ಖಾನ್ ಜೊತೆಗೆ ನಿರ್ದೇಶಕಿ ಫರಾ ಖಾನ್ (Farah Khan) ನಡೆಸಿಕೊಡುವ ತೆರೆ ಮೇರೆ ಬೀಚ್ ಮೇ ಟಾಕ್ ಶೋ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲಾಯಿತು. ಆಗ ಸಲ್ಮಾನ್ ಖಾನ್ ಮದುವೆಯಾಗದೇ ಉಳಿದಿರುವುದು ಏಕೆ ಎನ್ನುವ ಪ್ರಶ್ನೆಯನ್ನು ಸಹಾ ಸಲೀಂ ಖಾನ್ ಅವರನ್ನು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಸಲೀಂ ಖಾನ್ ನೀಡಿದ ಉತ್ತರ ಈಗ ಸುದ್ದಿಯಾಗಿದೆ.
ಸಲೀಂ ಖಾನ್ ಅವರು, ಸಲ್ಮಾನ್ ಮದುವೆಯಾಗದೇ ಉಳಿದಿರುವುದಕ್ಕೆ ಆತನ ತಾಯಿ ಸಲ್ಮಾ ಖಾನ್ ಕಾರಣ ಎಂದಿದ್ದಾರೆ. ಅಲ್ಲದೇ ಅದು ಹೇಗೆ ಎನ್ನುವುದನ್ನು ಸಹಾ ಅವರು ವಿವರಿಸಿ ಹೇಳಿದ್ದಾರೆ. ಯಾವ ಹುಡುಗಿಯನ್ನು ಸಲ್ಮಾನ್ ಪ್ರೀತಿಸುತ್ತಾನೆಯೋ ಆ ಹುಡುಗಿಯಲ್ಲಿ ತನ್ನ ತಾಯಿಯನ್ನು ಹುಡುಕಲು ಆರಂಭಿಸುತ್ತಾನೆ. ಇದರಿಂದ ಆ ಹುಡುಗಿ ಸಲ್ಮಾನ್ ಅನ್ನು ಬಿಟ್ಟು ಹೋಗುತ್ತಾಳೆ. ಪ್ರೀತಿ ಮದುವೆಯಾಗಿ ಪರಿವರ್ತನೆ ಆಗುವುದೇ ಇಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.