Yash 19- ಮೃಣಾಲ್ ಠಾಕೂರ್, ಸಾಯಿ ಪಲ್ಲವಿ; ರಾಕಿಂಗ್ ಸ್ಟಾರ್ ಜೊತೆ ಹೆಜ್ಜೆ ಹಾಕೋದ್ಯಾರು?

Written by Soma Shekar

Published on:

---Join Our Channel---

Yash 19 : ಕೆಜಿಎಫ್ ಚಾಪ್ಟರ್ ಟು (KGF 2) ನಂತರ ನಟ ಯಶ್ (Yash) ಅವರ ಮುಂದಿನ ಸಿನಿಮಾ ಯಾವುದು ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರೆ, ಅವರ ಹೊಸ ಸಿನಿಮಾದ ಕುರಿತಾಗಿ ಒಂದಷ್ಟು ಸುದ್ದಿಗಳು ಹರಿದಾಡಿತ್ತಾದರೂ ಅಧಿಕೃತವಾಗಿ ಯಾವುದೇ ಸುದ್ದಿ ಮಾತ್ರ ಹೊರಗೆ ಬಂದಿರಲಿಲ್ಲ. ನಟ ಯಶ್ ಕೂಡಾ ತಮ್ಮ ಹೊಸ ಸಿನಿಮಾದ ಬಗ್ಗೆ ಯಾವುದೇ ಸುಳಿವನ್ನು ಸಹಾ ನೀಡಿರಲಿಲ್ಲ.

ಆದರೆ ಈಗ ಯಶ್ ಅವರು ತಾವು ಕೆವಿಎನ್ ಪ್ರೊಡಕ್ಷನ್ಸ್ ನ ಹೊಸ ಸಿನಿಮಾ (Yash 19) ಮಾಡುವುದಾಗಿ ಘೋಷಣೆಯನ್ನು ಮಾಡಿದ್ದು, ಡಿಸೆಂಬರ್ 8 ರಂದು ಬೆಳಿಗ್ಗೆ 9:55 ಕ್ಕೆ ಸಿನಿಮಾ ಶೀರ್ಷಿಕೆಯನ್ನು ಅನಾವರಣ ಮಾಡಲಾಗುವುದು ಎಂದು ಯಶ್ ಅವರು ಮಾಹಿತಿಯನ್ನು ನೀಡಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಈಗ ಸಿನಿಮಾದಲ್ಲಿ ನಾಯಕಿಯಾರು ಎನ್ನುವ ವಿಚಾರವಾಗಿ ಒಂದಷ್ಟು ಸುದ್ದಿಗಳು ಹರಿದಾಡಿದೆ. ಟಾಲಿವುಡ್ ನಲ್ಲಿ ಸೀತಾರಾಮಂ ಸಿನಿಮಾ ಮೂಲಕ ಜನ ಮೆಚ್ಚುಗೆಯನ್ನು ಪಡೆದಿರುವ ನಟಿ ಮೃಣಾಲ್‌ ಠಾಕೂರ್ (Mrunal Thakur) ಅವರು ಈ ಸಿನಿಮಾಕ್ಕೆ ನಾಯಕಿ ಆಗಲಿದ್ದಾರೆನ್ನುವ ಸುದ್ದಿಗಳು ಹರಿದಾಡಿದೆ.

ಮತ್ತೊಂದು ಕಡೆ ಲೇಡಿ ಪವರ್ ಸ್ಟಾರ್ ಖ್ಯಾತಿಯ ಸಾಯಿ ಪಲ್ಲವಿ (Sai Pallavi) ಕೂಡಾ ಈ ಸಿನಿಮಾದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳಾಗಿದ್ದು, ಈ ವಿಚಾರವನ್ನು ಕೇಳಿ ಸಿನಿಮಾ ಬಗ್ಗೆ ಅಭಿಮಾನಿಗಳು ಇನ್ನಷ್ಟು ಎಕ್ಸೈಟ್ ಆಗಿದ್ದಾರೆ. ಈಗ ಎಲ್ಲರ ಗಮನ ಡಿಸೆಂಬರ್ ಎಂಟರ ಕಡೆಗಿದೆ.

Leave a Comment