RRR ಸಿನಿಮಾ ಚಿತ್ರೀಕರಣ ಉಕ್ರೇನ್ ನಲ್ಲಿ?? ಭಾರತೀಯ ಸಿನಿಮಾ ನಿರ್ಮಾಪಕರಿಗೆ ಉಕ್ರೇನ್ ಪ್ರಿಯವಾದ ತಾಣ??

Written by Soma Shekar

Published on:

---Join Our Channel---

ಪ್ರಸ್ತುತ ವಿಶ್ವದ ಗಮನ ರಷ್ಯಾ ಹಾಗೂ ಉಕ್ರೇನ್ ಹಾಗೂ ರಷ್ಯಾದ ನಡುವೆ ನಡೆಯುತ್ತಿರುವ ಯು ದ್ಧ ದ ಮೇಲಿದೆ. ಹಿಂದೊಮ್ಮೆ ತನ್ನದೇ ಭಾಗವಾಗಿದ್ದ ಉಕ್ರೇನ್ ಮೇಲೆ ರಷ್ಯಾ ಇದೀಗ ಭೀ ಕ ರ ಸ ಮ. ರ ವನ್ನು ಸಾರಿದೆ. ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಉಕ್ರೇನ್ ನಲ್ಲಿ ಭಾರೀ ಸಾ ವು ನೋ ವುಗಳು ಸಂಭವಿಸುತ್ತಿದೆ. ಈ ವೇಳೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಹಾಗೂ ಇನ್ನಷ್ಟು ಕಠಿಣ ನಿರ್ಧಾರಗಳನ್ನು ಮಾಡಲಿರುವ ಘೋಷಣೆಯನ್ನು ಮಾಡಿರುವ ಬೆನ್ನಲ್ಲೇ ಔಪಚಾರಿಕವಾಗಿ ರಷ್ಯಾ, ಉಕ್ರೇನ್ ಜೊತೆ ಶಾಂತಿ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

ಉಕ್ರೇನ್ ನಲ್ಲಿ ಈಗ ಯುದ್ಧ ನಡೆಯುತ್ತಿರುವುದರಿಂದ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಕೆಲವೇ ತಿಂಗಳುಗಳ ಹಿಂದೆ ಇದು ಬಹಳಷ್ಟು ಜನ ಭಾರತೀಯ ಚಿತ್ರ ನಿರ್ಮಾಪಕರಿಗೆ ಬಹಳ ಪ್ರಿಯವಾದ ತಾಣವಾಗಿತ್ತು. ಪೂರ್ವ ಯೂರೋಪಿನ ದೇಶಗಳಿಗೆ ಹೋಲಿಕೆ ಮಾಡಿದಾಗ ಇಲ್ಲಿ ಸಿನಿಮಾ ಚಿತ್ರೀಕರಣಕ್ಕೆ ತಗಲುವ ವೆಚ್ಚ ಶೇಕಡಾ 20ರಿಂದ 30ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಆದ್ದರಿಂದಲೇ ಇಲ್ಲಿ ಕಡಿಮೆ ಖರ್ಚಿನಲ್ಲಿ ಬಹಳ ಸುಂದರವಾದ ಲೋಕೇಶನ್ ಗಳಲ್ಲಿ ಚಿತ್ರೀಕರಣ ಸುಲಭ ಎನ್ನಲಾಗಿದೆ.

ಉಕ್ರೇನ್ ನಲ್ಲಿ ಸ್ಥಳೀಯ ಸಿಬ್ಬಂದಿ ಉತ್ತಮವಾಗಿದ್ದು, ಇಲ್ಲಿ ಆರ್ಥಿಕವಾಗಿಯೂ ಕೂಡಾ ಬಹಳ ಅನುಕೂಲಕರವಾಗಿರುವುದರಿಂದ ನಿರ್ಮಾಪಕರ ಮೊದಲ ಆಯ್ಕೆ ಯುಕ್ರೇನ್ ಆಗಿತ್ತು. ದಶಕಗಳ ಕಾಲದಿಂದಲೂ ಹಲವು ಭಾರತೀಯ ಸಿನಿಮಾಗಳ ಚಿತ್ರೀಕರಣ ಉಕ್ರೇನ್ ನಲ್ಲಿ ನಡೆದಿದೆ. ಕಳೆದ ವರ್ಷವಂತೂ ಹಲವು ಭಾರತೀಯ ಸಿನಿಮಾಗಳು ಉಕ್ರೇನ್ ನಲ್ಲಿ ಚಿತ್ರೀಕರಣವನ್ನು ಮುಗಿಸಿವೆ. ವಿಶೇಷ ಎಂದರೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಚಿತ್ರೀಕರಣ ಸಹಾ ಉಕ್ರೇನ್ ನಲ್ಲಿ ನಡೆದಿದೆ ಎನ್ನಲಾಗಿದೆ.

ಆರ್ ಆರ್ ಆರ್ ಸಿನಿಮಾ ತಂಡ ಒಂದು ತಿಂಗಳಿಗೂ ಹೆಚ್ಚಿನ ಕಾಲ ಇಲ್ಲಿ ಚಿತ್ರೀಕರಣ ನಡೆಸಿತ್ತು ಎನ್ನಲಾಗಿದೆ. ಇದಲ್ಲದೇ ದೇವ್, ವಿನ್ನರ್, 93 ಸಾಂಗ್ಸ್ , ಸೇರಿದಂತೆ ಇನ್ನೂ ಅನೇಕ ಸಿನಿಮಾಗಳು ಕಳೆದ ವರ್ಷ ಇಲ್ಲಿ ಚಿತ್ರೀಕರಣಗೊಂಡಿದೆ ಎನ್ನಲಾಗಿದೆ. ಅಲ್ಲದೇ ಮುಂದಿನ ಮೇ ನಲ್ಲೂ ಸಹಾ ಕೆಲವು ಸಿನಿಮಾಗಳ ಚಿತ್ರೀಕರಣ ನಡೆಸಲು ಶೆಡ್ಯೂಲ್ ಮಾಡಲಾಗಿತ್ತು. ಆದರೆ ಈಗ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಚಿತ್ರೀಕರಣವು ಸಾಧ್ಯವಾಗುತ್ತದೋ ಇಲ್ಲವೋ ಎನ್ನುವ ಅನುಮಾನ ಕೂಡಾ ಉಂಟಾಗಿದೆ.

Leave a Comment