RRR ಸಿನಿಮಾ ಸ್ಟಾರ್ ಗಳ ಸಂಭಾವನೆ ಅಚ್ಚರಿ ಮೂಡಿಸಿದ್ರೆ, ನಿರ್ದೇಶಕ ಪಡೆದ ಸಂಭಾವನೆ ಶಾಕಿಂಗ್ ಆಗಿದೆ!!!

Entertainment Featured-Articles News
73 Views

ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಗಳು ಅಥವಾ ದೊಡ್ಡ ಹೆಸರನ್ನು ಪಡೆದುಕೊಂಡಿರುವ ಜನಪ್ರಿಯ‌ ನಟರ ಸಿನಿಮಾಗಳಲ್ಲಿನ ತಮ್ಮ ನಟನೆಗೆ ತೆಗೆದುಕೊಳ್ಳುವ ಸಂಭಾವನೆ ವಿಚಾರ ಬಹಳ ದೊಡ್ಡ ಸುದ್ದಿಯನ್ನು ಮಾಡುತ್ತದೆ. ಏಕೆಂದರೆ ಈಗಿನ ಸ್ಟಾರ್ ನಟರು ಪಡೆದುಕೊಳ್ಳುವ ಸಂಭಾವನೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಅದರಲ್ಲೂ ದೊಡ್ಡ ಬಜೆಟ್ ನ ಸಿನಿಮಾ ಬರುತ್ತಿದೆಯೆಂದರೆ, ಅಲ್ಲಿ ಸ್ಟಾರ್ ನಟರದ್ದೇ ಕಾರು ಬಾರು, ಆದ ಕಾರಣ ಈ ಸಿನಿಮಾದ ನಟ-ನಟಿಯರು ಎಷ್ಟು ಸಂಭಾವನೆ ಪಡೆದಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಮೂಡುತ್ತದೆ.

ಪ್ರಸ್ತುತ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಿನಿಮಾ ಎಂದರೆ ಬಾಹುಬಲಿ ಮೂಲಕ ವಿಶ್ವಮಟ್ಟದಲ್ಲಿ ಭಾರತೀಯ ಚಿತ್ರರಂಗವನ್ನು ಜನ ತಿರುಗಿ ನೋಡುವಂತೆ ಮಾಡಿದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಆಗಿದೆ
ಭಾರಿ ಬಜೆಟ್ ನೊಂದಿಗೆ ಮಲ್ಟಿಸ್ಟಾರ್ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿರುವ ಈ ಸಿನಿಮಾ ಈಗಾಗಲೇ ಬಹಳಷ್ಟು ವಿಚಾರಗಳಿಂದ ಸದ್ದು ಮಾಡಿದೆ.‌ಈ ಸಿನಿಮಾ ಹೇಗಿರಬಹುದು ಎಂದು ಇಡೀ ದೇಶ ನೋಡಲು ಕಾಯುತ್ತಿದೆ. ಸಿನಿಮಾ ತಂಡ ಹಾಗೂ ನಟರು ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ಈ ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ಕಲಾವಿದರು ಪಡೆದುಕೊಂಡಿರುವ ಸಂಭಾವನೆ ವಿಷಯ ಎಲ್ಲರ ಗಮನ ಸೆಳೆಯುತ್ತಿದೆ. ತೆಲುಗು ಸಿನಿರಂಗದ ಇಬ್ಬರು ಸ್ಟಾರ್ ನಟರಾದ ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ ಟಿ ಆರ್ ಜೊತೆಯಾಗಿ ನಟಿಸಿರುವ ಸಿನಿಮಾ ಇದಾಗಿದ್ದು, ಈ ಇಬ್ಬರೂ ಸ್ಟಾರ್ ನಟರು ಬರೋಬ್ಬರಿ 45 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾದಲ್ಲಿ ಕೇವಲ 15 ನಿಮಿಷಗಳ ಕಾಲವೇ ಆದರೂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಪಾತ್ರಕ್ಕಾಗಿ 9 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ನಟಿಸಿದ್ದು ಅವರು ತೆರೆಯ ಮೇಲೆ ಕೇವಲ 8 ನಿಮಿಷಗಳು ಮಾತ್ರವೇ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ತಮ್ಮ ಪಾತ್ರಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಇನ್ನು ನಿರ್ದೇಶಕ ರಾಜಮೌಳಿ ಅವರ ವಿಚಾರಕ್ಕೆ ಬಂದರೆ ಅವರು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ನಿರ್ದೇಶನಕ್ಕೆ ಅವರು ಪಡೆಯುವ ಸಂಭಾವನೆ ಒಂದು ಒಡಂಬಡಿಕೆಯ ಅನ್ವಯ ಆಗಿದ್ದು, ಅದರ ಪ್ರಕಾರ ಸಿನಿಮಾ ಒಟ್ಟು ಗಳಿಕೆಯಲ್ಲಿ 30% ತಮ್ಮ ಸಂಭಾವನೆಯಾಗಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದರೆ ಒಂದು ವೇಳೆ ಸಿನಿಮಾ ಸಾವಿರ ಕೋಟಿ ಗಳಿಸಿದರೆ ಅದರಲ್ಲಿ 300 ಕೋಟಿ ರಾಜಮೌಳಿ ಅವರ ಸಂಭಾವನೆಯಾಗಿರುತ್ತದೆ.

Leave a Reply

Your email address will not be published. Required fields are marked *