RRR ಸಿನಿಮಾ ರಿಜೆಕ್ಟ್ ಮಾಡಿದ ನಟಿಯರು ಇವರು! ಆಲಿಯಾ, ಒಲಿವಿಯಾ ಪಾತ್ರ ಮಾಡಬೇಕಿದ್ದವರು ಇವರೇ!!

Entertainment Featured-Articles News

ರಾಮ್ ಚರಣ್ ತೇಜ ಹಾಗೂ ಜೂ. ಎನ್ ಟಿ ಆರ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ, ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಪ್ರಸ್ತುತ ಕಲೆಕ್ಷನ್ ಮಳೆಯನ್ನು ಸುರಿಸುತ್ತಿದೆ. ಈಗಾಗಲೇ ಕಲೆಕ್ಷನ್ ವಿಷಯದಲ್ಲಿ 500 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿರುವ ಸಿನಿಮಾ, ಸಾವಿರ ಕೋಟಿ ರೂಪಾಯಿಗಳ ಗಳಿಕೆಯ ಕಡೆಗೆ ದಾಪುಗಾಲು ಹಾಕುತ್ತಿದೆ. ಇಂಡಸ್ಟ್ರಿಯ ಹಳೆಯ ದಾಖಲೆಗಳನ್ನು ಒಂದೊಂದಾಗಿ ಮುರಿಯುತ್ತಾ ಮುಂದೆ ಹೋಗುತ್ತಿದೆ ತ್ರಿಬಲ್ ಆರ್. ಅಭಿಮಾನಿಗಳು ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ಹರಿಸುತ್ತಾ, ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ.

ಅಲ್ಲೂರಿ ಸೀತಾರಾಮರಾಜು ಪಾತ್ರದಿಂದ ಸ್ಫೂರ್ತಿಪಡೆದ ರಾಮಚರಣ್ ಪಾತ್ರ ಹಾಗೂ ಕೋಮರಂ ಭೀಮ್ ಪಾತ್ರದಿಂದ ಪ್ರೇರಣೆ ಪಡೆದ ಎನ್ ಟಿ ಆರ್ ಪಾತ್ರಗಳು ಜನರನ್ನು ಅದ್ಭುತವಾಗಿ ರಂಜಿಸಿ, ಅಪಾರ ಪ್ರೇಕ್ಷಕ ಆದರಣೆ ಯನ್ನು ಪಡೆದುಕೊಳ್ಳುತ್ತಿವೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಹಾಲಿವುಡ್ ನಟಿ ಒಲಿವಿಯ ಮೊರೇಸ್ ನಾಯಕಿಯರಾಗಿ ನಟಿಸಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ನಿರ್ದೇಶಕ ರಾಜಮೌಳಿ ಅವರು ಇವರಿಬ್ಬರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡುವ ಮುನ್ನ ಇನ್ನೂ ಕೆಲವು ನಟಿಯರನ್ನು ಈ ಪಾತ್ರಗಳಿಗಾಗಿ ಸಂಪರ್ಕಿಸಿದ್ದರು ಎನ್ನಲಾಗಿದೆ.

ಆದರೆ ಆ ನಟಿಯರು ಕೆಲವು ಕಾರಣಗಳಿಂದ ತ್ರಿಬಲ್ ಆರ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದರು ಎಂದು ತಿಳಿದು ಬಂದಿದೆ. ರಾಜಮೌಳಿ ಅವರ ತ್ರಿಬಲ್ ಸಿನಿಮಾದಲ್ಲಿ ಸೀತಾ ಪಾತ್ರ ಈಗ ಬಹಳ ಜನಪ್ರಿಯ ಆಗಿದ್ಹು, ನಟಿ ಆಲಿಯಾ ಭಟ್ ಲುಕ್ ಜನರ ಗಮನ ಸೆಳೆದಿದೆ. ಆದರೆ ಇದೇ ಸೀತಾ ಪಾತ್ರಕ್ಕಾಗಿ ರಾಜಮೌಳಿ ಮೊದಲು ಸಂಪರ್ಕಿಸಿದ್ದು ಬಾಲಿವುಡ್ ನಟಿ ಶ್ರದ್ದ ಕಪೂರ್ ಅವರನ್ನು. ಆದರೆ ಶ್ರದ್ಧಾ ಅದಾಗಲೇ ಕೆಲವು ಸಿನಿಮಾಗಳಲ್ಲಿ ತೊಡಗಿಕೊಂಡು ತುಂಬಾ ಬ್ಯುಸಿಯಾಗಿದ್ದರು.

ಶ್ರದ್ದ ಕಪೂರ್ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ತಮಗೆ ದೊರೆತ ಅವಕಾಶವನ್ನು ಬಿಟ್ಟುಕೊಟ್ಟರು. ನಂತರ ಇದೇ ಪಾತ್ರಕ್ಕಾಗಿ ಮತ್ತೊಬ್ಬ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ಸಂಪರ್ಕಿಸಲಾಯಿತು. ಆದರೆ ಪರಿಣಿತಿ ಕೂಡಾ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಈ ಸಿನಿಮಾ ಅವಕಾಶವನ್ನು ಬಿಡಲೇ ಬೇಕಾಯಿತು ಎಂದು ತಿಳಿದುಬಂದಿದೆ. ಕೊನೆಗೆ ಈ ಪಾತ್ರ ಆಲಿಯಾ ಭಟ್ ಅವರ ಕೈ ಸೇರಿತು, ಆಲಿಯಾ ನಾಯಕಿಯಾಗಿ ಕಾಣಿಸಿಕೊಂಡರು.

ಇದೇ ಸಿನಿಮಾದಲ್ಲಿ ಎನ್ ಟಿ ಆರ್ ಗೆ ಜೋಡಿಯಾಗಿ ನಟಿಸುವ ನಾಯಕಿಯಾಗಿ ಮೊದಲು ಅಮಿ ಜಾಕ್ಸನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಆಕೆ ಪ್ರೆಗ್ನೆನ್ಸಿ ಕಾರಣದಿಂದ ನೋ ಹೇಳಿದರು. ನಂತರ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹೋದರಿ ಇಸಾಬೆಲ್ಲಾ ಕೈಫ್ ಅವರನ್ನು ಕರೆ ತರವು ಪ್ರಯತ್ನ ಮಾಡಲಾಗಿತ್ತು. ಅದು ಕೈಗೂಡದೆ ಹೋದಾಗ, ಹಾಲಿವುಡ್ ನಟಿ ಡೈಸಿ ಎಡ್ಗರ್ ಜೋನೆಸ್ ಅವರನ್ನು ಕರೆತರಲಾಯಿತು. ಆದರೆ ಆ ನಟಿಯು ಆರಂಭದಲ್ಲೇ ಸಿನಿಮಾದಿಂದ ಹೊರನಡೆದ ಕಾರಣ ಆ ಪಾತ್ರ ಒಲಿವಿಯಾ ಪಾಲಾಯಿತು.

Leave a Reply

Your email address will not be published.