ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ, ಮಲ್ಟಿಸ್ಟಾರರ್ ಸಿನಿಮಾ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ, ತ್ರಿಬಲ್ ಆರ್ ಸಿನಿಮಾ ಮಾರ್ಚ್ 25ರಂದು ತೆರೆಗೆ ಬಂದು, ಜನರ ಅಪಾರವಾದ ಆದರಣೆ ಯನ್ನು ಪಡೆದುಕೊಳ್ಳುತ್ತಿದೆ. ಸಿನಿಮಾ ಯಶಸ್ಸಿನ ನಾಗಲೋಟ ವನ್ನು ಮುಂದುವರೆಸಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 223 ಕೋಟಿ ಹಣವನ್ನು ಗಳಿಸಿ, ಮೂರು ದಿನಗಳ ವೇಳೆಯಲ್ಲಿಯೇ ಐನೂರು ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡು, ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿದೆ.
ಈ ಸಿನಿಮಾದಲ್ಲಿ ಇಬ್ಬರು ನಾಯಕ ನಟರಾದ ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆಗಳು ಹರಿದುಬರುತ್ತಿದೆ. ಈ ಸಿನಿಮಾದ ಮೂಲಕ ಬಾಲಿವುಡ್ ಬೆಡಗಿ ಆಲಿಯಾ ಭಟ್ ದಕ್ಷಿಣ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ ವಿಷಯ ಕೂಡಾ ಎಲ್ಲರಿಗೂ ತಿಳಿದಿದೆ. ಇನ್ನು ನಿರ್ದೇಶಕ ರಾಜಮೌಳಿ ತಮ್ಮ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಪಾತ್ರಕ್ಕೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಅವರ ಹಿಂದಿನ ಸಿನಿಮಾಗಳು ಅದಕ್ಕೆ ಸಾಕ್ಷಿಯಾಗಿದೆ. ಆದರೆ ಈಗ ಅವರ ಹೊಸ ಸಿನಿಮಾದಲ್ಲಿ ಈ ವಿಚಾರವಾಗಿ ಒಂದು ಅಪಸ್ವರ ಎದ್ದಿದೆ.
ಈ ಬಾರಿ ಫಿಕ್ಷನ್ ಥ್ರಿಲ್ಲರ್ ಸಿನಿಮಾ ಆಗಿ ತೆರೆಗೆ ಬಂದಿರುವ ತ್ರಿಬಲ್ ಆರ್ ನಲ್ಲಿ ಆಲಿಯಾ ಭಟ್ ಪಾತ್ರಕ್ಕೆ ಸರಿಯಾದ ಪ್ರಾಧಾನ್ಯತೆಯನ್ನು ನೀಡಲಾಗಿಲ್ಲ, ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವವಿಲ್ಲ ಎಂದು ವಿಮರ್ಶಕರು ಟೀಕೆಗಳನ್ನು ಮಾಡಿದ್ದಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಆಲಿಯ ಪಾತ್ರಕ್ಕೆ ಮಹತ್ವ ಇಲ್ಲ ಎನ್ನುವ ವಿಚಾರ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದೆ. ಇವೆಲ್ಲವು ಬೆನ್ನಲ್ಲೇ ಇದೀಗ ಆಲಿಯಾ ಭಟ್ ಮಾಡಿರುವ ಕೆಲಸ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.
ಹೌದು, ನಟಿ ಆಲಿಯಾ ಭಟ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ತ್ರಿಬಲ್ ಆರ್ ಸಿನಿಮಾಕ್ಕೆ ಸಂಬಂಧಿಸಿದಂತಹ ಎಲ್ಲಾ ಫೋಟೋಗಳನ್ನು ತೆಗೆದುಹಾಕಿದ್ದಾರೆ. ಅದು ಮಾತ್ರವೇ ಅಲ್ಲದೇ ನಟಿ ನಿರ್ದೇಶಕ ರಾಜಮೌಳಿ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಆಲಿಯಾ ಮಾಡಿರುವ ದಿಢೀರ್ ನಿರ್ಧಾರದ ಹಿಂದಿನ ಕಾರಣ ಏನೆಂದು ಇನ್ನೂ ಸ್ಪಷ್ಟವಾಗಿ ಹೊರ ಬಂದಿಲ್ಲವಾದರೂ, ಸಿನಿಮಾದಲ್ಲಿ ತನ್ನ ಸ್ಕ್ರೀನ್ ಟೈಮ್ ಬಹಳ ಕಡಿಮೆ ತನ್ನ ಪಾತ್ರಕ್ಕೆ, ಸರಿಯಾದ ಪ್ರಾಧಾನ್ಯತೆ ದೊರೆತಿಲ್ಲ ಎನ್ನುವ ಕಾರಣಕ್ಕೆ ಆಲಿಯಾ ಭಟ್ ಇಂತಹದೊಂದು ನಿರ್ಧಾರ ಮಾಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ.
ಕೊರೊಮಾ ಮೂರನೇ ಅಲೆಗೂಬಮುಂಚೆ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಚಿತ್ರತಂಡದ ಜೊತೆಗೆ ಆಲಿಯಾ ಭಟ್ ಬಹಳ ಉತ್ಸುಕತೆಯಿಂದ ಪಾಲ್ಗೊಂಡಿದ್ದರು. ಆದರೆ ಎರಡನೇ ಹಂತದ ಪ್ರಚಾರ ಕಾರ್ಯದಲ್ಲಿ ಆಲಿಯಾ ಭಟ್ ಎಲ್ಲೂ ಸಹಾ ಕಾಣಿಸಿಕೊಂಡಿಲ್ಲ ಎನ್ನುವುದು ಈಗ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಆಲಿಯಾ ತ್ರಿಬಲ್ ಆರ್ ಸಿನಿಮಾ ಬಗ್ಗೆ ಅಸಮಾಧಾನ ಪಟ್ಟಿದ್ದಾರೆ ಆದ್ದರಿಂದಲೇ ಎಲ್ಲೂ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.