RRR ಸಿನಿಮಾದ 15 ನಿಮಿಷದ ಪಾತ್ರಕ್ಕಾಗಿ ಆಲಿಯಾ ಪಡೆದಷ್ಟು ಸಂಭಾವನೆ ದಕ್ಷಿಣದ ಯಾವ ನಟಿಗೂ ಇನ್ನೂ ಸಿಕ್ಕಿಲ್ಲ.

Entertainment Featured-Articles News

ದಕ್ಷಿಣದ ಸಿನಿಮಾಗಳಿಗೆ ಬಾಲಿವುಡ್ ನಟಿಯರನ್ನು ಕರೆತರುವುದು ಬಹಳ ಹಿಂದಿನಿಂದಲೂ ಇರುವ ವಾಡಿಕೆ. ದಕ್ಷಿಣದ ನಾಲ್ಕು ಭಾಷೆಗಳಲ್ಲೂ ಸಹಾ ಒಂದು ಭಾರೀ ಬಜೆಟ್ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದರೆ ಅಲ್ಲೊಬ್ಬ ಬಾಲಿವುಡ್ ನಟಿ ನಾಯಕಿಯಾಗಿಯೋ ಅಥವಾ ಐಟಂ ಸಾಂಗ್ ನಲ್ಲೋ ಕಾಣಿಸಿಕೊಳ್ಳುವುದು ಸಹಜ. ವಿಶೇಷವೆಂದರೆ ಹೀಗೆ ದಕ್ಷಿಣಕ್ಕೆ ಬಂದ ಕೆಲವು ಬಾಲಿವುಡ್ ನಟಿಯರು ಇಲ್ಲಿ ಸ್ಟಾರ್ ನಟಿಯರೇ ಆದರೆ, ಇನ್ನೂ ಕೆಲವು ಬಾಲಿವುಡ್ ಸ್ಟಾರ್ ನಟಿಯರು ಒಂದೆರಡು ಸಿನಿಮಾ ಮಾತ್ರವೇ ಮಾಡಿ, ಮತ್ತೆ ಬಾಲಿವುಡ್ ನಲ್ಲೇ ಮಿಂಚುತ್ತಾರೆ.

ಹೀಗೆ ಬಾಲಿವುಡ್ ನಿಂದ ದಕ್ಷಿಣದ ಸಿನಿಮಾಗಳಿಗೆ ಬರುವ ನಟಿಯರ ಸಂಭಾವನೆ ಇಲ್ಲಿನ ನಟಿಯರಿಗಿಂತ ಹೆಚ್ಚಾಗಿಯೇ ಇರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದಕ್ಷಿಣದಲ್ಲೇ ಅದ್ಭುತ ನಟಿಯರಿದ್ದರೂ ಕೂಡಾ ಕೆಲವೊಂದು ಪಾತ್ರಗಳಿಗೆ ಬಾಲಿವುಡ್ ಬೆಡಗಿಯರೇ ಬೇಕು ಎನ್ನುವುದು ನಿರ್ದೇಶಕ, ನಿರ್ಮಾಪಕರ ಆಸಕ್ತಿಯಾಗಿರುತ್ತದೆ‌. ಇಂತಹ ಆಸಕ್ತಿಯಿಂದ ಈಗ ಬಾಹುಬಲಿ ನಿರ್ದೇಶಕ ರಾಜಮೌಳಿ ಕೂಡಾ ಹೊರತಾಗೇನೂ ಇಲ್ಲ. ಏಕೆಂದರೆ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಗೆ ಬಾಲಿವುಡ್ ನಟಿಯನ್ನು ಕರೆ ತಂದಿದ್ದಾರೆ.

ಆರ್ ಆರ್ ಆರ್ ಸಿನಿಮಾದಲ್ಲಿ ಬಾಲಿವುಡ್ ನ ಸ್ಟಾರ್ ನಟಿ ಆಲಿಯಾ ಭಟ್ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಇನ್ನು ಹೊಸ ಅಪ್ಡೇಟ್ ಒಂದರಲ್ಲಿ ಆಲಿಯಾ ಭಟ್ ಸಿನಿಮಾದಲ್ಲಿ ನಾಯಕಿಯಾದರೂ ಕೂಡಾ ಅವರು ಈ ಸಿನಿಮಾದಲ್ಲಿ ಕೇವಲ 15 ನಿಮಿಷಗಳು ಮಾತ್ರವೇ ಪ್ರೇಕ್ಷಕರ ಮುಂದೆ, ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಸಖತ್ ಸದ್ದನ್ನು ಮಾಡಿದೆ. ಅಲ್ಲದೇ 15 ನಿಮಿಷದ ಪಾತ್ರಕ್ಕೆ ಆಲಿಯಾ ಏಕೆ ಬೇಕಾಗಿತ್ತು?? ಎಂದು ಪ್ರಶ್ನೆ ಕೂಡಾ ಮಾಡಿದ್ದಾರೆ ನೆಟ್ಟಿಗರು.

ಈಗ ಈ ಹದಿನೈದು ನಿಮಿಷದ ಪಾತ್ರಕ್ಕೆ ಆಲಿಯಾ ಭಟ್ ಪಡೆಯುತ್ತಿರುವ ಸಂಭಾವನೆ ಈಗ ಮತ್ತೊಂದು ದೊಡ್ಡ ಸುದ್ದಿಯಾಗಿದೆ. ಹೌದು ಆಲಿಯಾ ಹದಿನೈದು ನಿಮಿಷದ ಪಾತ್ರಕ್ಕೆ ಪಡೆದ ಭಾರೀ ಮೊತ್ತದ ಸಂಭಾವನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹಾಗಾದ್ರೆ ಆಲಿಯಾ ಪಡೆದುಕೊಂಡ ಸಂಭಾವನೆ ಎಷ್ಟು ಎನ್ನುವುದಾದರೆ, 15 ನಿಮಿಷದ ತನ್ನ ಪಾತ್ರಕ್ಕೆ ನಟಿ ಆಲಿಯಾ ಭಟ್ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಸಂಭಾವನೆ ಆಗಿ ಪಡೆದಿದ್ದಾರೆ ಎನ್ನಲಾಗಿದೆ.

ಒಂದು ಸಣ್ಣ ಪಾತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿರುವುದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ. ಅಲ್ಲದೇ ಇಷ್ಟು ಸಂಭಾವನೆ ನೀಡುವ ಬದಲು ಇಲ್ಲಿನ ಪ್ರತಿಭಾವಂತ ನಟಿಯರನ್ನೇ ಏಕೆ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎನ್ನುವ ಮಾತು ಕೂಡಾ ನೆಟ್ಟಿಗರಿಂದ ಕೇಳಿ ಬಂದಿದೆ. ಒಟ್ಟಾರೆ ಅದೆಂತಹ ಅದ್ಭುತ ಪಾತ್ರವೋ ತೆರೆಯ ಮೇಲೆಯೇ ನೋಡಬೇಕಾಗಿದೆ.

Leave a Reply

Your email address will not be published. Required fields are marked *