RRR ಬಿಡುಗಡೆಯ ಗೊಂದಲ:ಒಂದಲ್ಲಾ, ಎರಡು ಡೇಟ್ ಘೋಷಣೆ ಮಾಡಿ ಸ್ಪಷ್ಟನೆ ನೀಡಿದ ರಾಜಮೌಳಿ.

0
139

ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನಿರ್ದೇಶನದ, ರಾಮ್ ಚರಣ್ ತೇಜಾ ಮತ್ತು ಜೂ.ಎನ್ ಟಿ ಆರ್ ನಾಯಕರಾಗಿ, ಬಾಲಿವುಡ್ ಕಲಾವಿದರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಸಿನಿಮಾ ಥ್ರಿಬಲ್ ಆರ್ ಬಿಡುಗಡೆಗಾಗಿ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ. ಪರಿಸ್ಥಿತಿಗಳು ಸಮರ್ಪಕವಾಗಿ ಇದ್ದಿದ್ದರೆ ಜೂನ್ 7 ರಂದು ತ್ರಿಬಲ್ ಆರ್ ಸಿನಿಮಾ ತೆರೆಯ ಮೇಲೆ ಬಂದು ಅಭಿಮಾನಿಗಳನ್ನು ರಂಜಿಸಬೇಕಿತ್ತು.

ಆದರೆ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿತು ಕೊರೊನಾ. ಕೊರೊನಾ‌ ಕಾರಣದಿಂದ ಬಿಡುಗಡೆ ಮುಂದೆ ಸಾಗುತ್ತಾ ಬಂದು, ಚಿತ್ರತಂಡ ಜನವರಿ 7 ಕ್ಕೆ ಬಿಡುಗಡೆ ದಿನಾಂಕವನ್ನು ಘೋಷಣೆಯನ್ನು ಮಾಡಿತ್ತು, ಭರ್ಜರಿ ಪ್ರಮೋಷನ್ ಗಳು ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ‌ ಕಾರಣ ಸರ್ಕಾರಗಳು ಮತ್ತೊಮ್ಮೆ ಕೋವಿಡ್ ನಿಯಮಗಳನ್ನು, ಮಾರ್ಗಸೂಚಿಗನ್ನು ಬಿಡುಗಡೆ ಮಾಡಿದ್ದರಿಂದ ಸಿನಿಮಾ ಬಿಡುಗಡೆ ರದ್ದಾಯಿತು.

ಇನ್ನು ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿದರೂ ಹೊಸ ಬಿಡುಗಡೆಯ ದಿನಾಂಕ ಯಾವಾಗ? ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇರುವಾಗಲೇ ಚಿತ್ರತಂಡ ತ್ರಿಬಲ್ ಆರ್ ಬಿಡುಗಡೆಯ ದಿನಾಂಕವನ್ನು ಘೋಷಣೆಯನ್ನು ಮಾಡಿದೆ. ಆದರೆ ಇಲ್ಲಿ ಒಂದು ವಿಶೇಷ ಇದೆ. ಅದೇನೆಂದರೆ ಆರ್ ಆರ್ ಆರ್ ಸಿನಿಮಾ ತಂಡ ಈಗ ಒಂದಲ್ಲ, ಬದಲಿಗೆ ಎರಡು ದಿನಾಂಕಗಳನ್ನು ಸಿನಿಮಾ ಬಿಡುಗಡೆಗೆ ಆಯ್ಕೆ ಮಾಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

https://www.instagram.com/p/CY_jmVOpxSM/?utm_medium=copy_link

ಹೌದು, ಚಿತ್ರ ತಂಡವು ಈಗ ಮಾಡಿರುವ ಪೋಸ್ಟ್ ಪ್ರಕಾರ ಮಾರ್ಚ್ 18 ಮತ್ತು ಏಪ್ರಿಲ್ 28 ಎರಡು ದಿನಾಂಕಗಳನ್ನು ಚಿತ್ರ ಬಿಡುಗಡೆಗೆ ಆಯ್ಕೆ ಮಾಡಿದೆ. ಚಿತ್ರ ತಂಡ ಮಾರ್ಚ್ 18 ಕ್ಕೆ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ, ಒಂದು ವೇಳೆ ಕೊರೊನಾ ಕಾರಣದಿಂದ ಆಗಲೂ ಸಿನಿಮಾ ಥಿಯೇಟರ್ ಗಳಲ್ಲಿ 100% ಆಸನಗಳ ಭರ್ತಿಗೆ ಅವಕಾಶವನ್ನು ನೀಡದಿದ್ದರೆ ಅಂತಹ ಸಂದರ್ಭದಲ್ಲಿ ಏಪ್ರಿಲ್ 28 ಕ್ಕೆ ಬಿಡುಗಡೆ ಮುಂದೂಡಲಾಗುವುದು ಎನ್ನುವ ಮಾಹಿತಿಯನ್ನು ನೀಡಿದೆ.

LEAVE A REPLY

Please enter your comment!
Please enter your name here