Royal Enfield : ರಾಯಲ್ ಎನ್‌ಫೀಲ್ಡ್ (Royal Enfield) ತನ್ನ ಮೋಟಾರ್ ಸೈಕಲ್ ಹಿಮಾಲಯನ್ 450 (Himalayan 450l ಯನ್ನು ಇದೇ ನವೆಂಬರ್ 1, 2023 ರಂದು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಆದರೆ ಈಗ ಈ ಹೊಸ ಬೈಕ್ ನ ಅಧಿಕೃತವಾದ ಬಿಡುಗಡೆಗೂ ಮೊದಲೇ ಅದರ ಕುರಿತಾಗ ಒಂದಷ್ಟು ಮಾಹಿತಿಗಳು ಸೋರಿಕೆಯಾಗಿದೆ. ಸೋರಿಕೆಯಾಗಿರುವ ಒಂದು ಹೋಮೋಲೋಗೇಶನ್ ಡಾಕ್ಯುಮೆಂಟ್ ನಿಂದ ಇಂಜಿನ್ ಮತ್ತು ಇತರೆ ವಿವರಗಳು ಹೊರ ಬಂದಿವೆ.
ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಈ ಹೊಸ ಅಡ್ವೆಂಚರಸ್ ಬೈಕ್ 451.65 ಸಿಸಿ ಲಿಕ್ವಿಡ್ ಕೂಲ್ಡ್ ಇಂಜಿನ್ ಅನ್ನು ಹೊಂದಿದೆ. ಇದರಲ್ಲಿ 40PS ನ ಗರಿಷ್ಠ ಶಕ್ತಿ ಮತ್ತು ಸುಮಾರು 40-45Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಹಿಮಾಲಯನ್ 450 ಬೈಕ್ ನ ಒಟ್ಟು ತೂಕ 394 ಕೆಜಿ ಗಳಾಗಿದ್ದು, ಅದರ ಲೋಡಿಂಗ್ ಸಾಮರ್ಥ್ಯ 180 ಕೆಜಿ ಆಗಿದೆ. ಇದರ ವೀಲ್ ಬೇಸ್ 1510 ಎಂಎಂ ಉದ್ದವಾಗಿದೆ.
ಯಂತ್ರಾಂಶ (ಹಾರ್ಡ್ ವೇರ್)
KTM 390 ಅಡ್ವೆಂಚರ್ ಗೆ ಹೋಲಿಕೆ ಮಾಡಿದಾಗ, ಹಿಮಾಲಯನ್ 450 ಸ್ವಲ್ಪ ಕಡಿಮೆ ಶಕ್ತಿಯನ್ನು ಹೊಂದಿದೆ. ಈ ಬೈಕ್ 21 ಇಂಚಿನ ಮುಂಭಾಗ ಮತ್ತು 19 ಇಂಚಿನ ಹಿಂಭಾಗದ ಚಕ್ರಗಳನ್ನು ಹೊಂದಿದೆ. ಐಚ್ಛಿಕ ಡ್ಯುಯಲ್ ಚಾನೆಲ್ ABS ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಇದು ಹೊಂದಿದೆ. ಇದು ರೈಡ್-ಬೈ-ವೈರ್ ತಂತ್ರಜ್ಞಾನ, USD ಮುಂಭಾಗದ ಫೋರ್ಕ್ಸ್ ಮತ್ತು ಮೊನೊಶಾಕ್ ಹಿಂಭಾಗದ ಸಸ್ಪೆನ್ಷನ್ ಗಳನ್ನು ಒಳಗೊಂಡಿದೆ.
ವೈಶಿಷ್ಟ್ಯಗಳು (Features)
ಹಿಮಾಲಯನ್ 450 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ನ್ಯಾವಿಗೇಷನ್, ರೌಂಡ್ ಹೆಡ್‌ಲೈಟ್, ಆಲ್ ಎಲ್ ಇ ಡಿ ಲೈಟಿಂಗ್, ಡ್ಯುಯಲ್ ಎಲ್ ಇ ಡಿ ಸೂಚಕಗಳು, ಬ್ರೇಕ್ ಸಿಗ್ನಲ್ ಮತ್ತು ಟ್ರಿಪಲ್-ಇನ್-ಒನ್ ಟೈಲ್ ಲ್ಯಾಂಪ್ ಅನ್ನು ಒಳಗೊಂಡಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಗಾಗಿಯೇ ಬಹು ಸೀಟ್ ಆಯ್ಕೆಗಳು ಲಭ್ಯವಿದೆ. ಕನ್ನಡಿಗಳು, ಕ್ರ್ಯಾಶ್ ಗಾರ್ಡ್‌ಗಳು, ಹ್ಯಾಂಡಲ್ ಬಾರ್ ಗಾರ್ಡ್‌ಗಳು, ಫುಟ್ ಪೆಗ್ ಗಳು ಮತ್ತು ಇನ್ನೂ ಹಲವಾರು ಆಧುನಿಕ ಪರಿಕರಗಳನ್ನು ಸಹಾ ಇದು ತನ್ನ ಗ್ರಾಹಕರಿಗೆ ನೀಡುತ್ತದೆ.
ಬೆಲೆ ಮತ್ತು ಸ್ಪರ್ಧೆ ( Price and Competition) : ಬೆಲೆಯ ವಿಚಾರಕ್ಕೆ ಬಂದಾಗ ರಾಯಲ್ ಎನ್ ಫೀಲ್ಡ್ ಹಿಮಾಲಯನ್ 450 ನ ಎಕ್ಸ್ ಶೋ ರೂಂ ಬೆಲೆ ಸುಮಾರು 2.8 ಲಕ್ಷ ರೂಪಾಯಿಗಳೆಂಬ ನಿರೀಕ್ಷೆ ಇದೆ. ಇದರ ನೇರ ಸ್ಪರ್ಧೆಯು KTM 390 ಅಡ್ವೆಂಚರ್, BMW G310 GS ಮತ್ತು Hero XPulse 400 ಬೈಕ್ ಗಳೊಡನೆ ಇರಲಿದೆ.