ಹಾಸಿಗೇಲಿ ಅವನು, ಮನಸ್ಸಲ್ಲಿ ಇವನು: ಮೆಗಾ ಫ್ಯಾಮಿಲಿ ಮನೆ ಮಗಳ ಡೈಲಾಗ್ ಗೆ ನೆಟ್ಟಿಗರ ಆಕ್ರೋಶ!

Written by Soma Shekar

Published on:

---Join Our Channel---

Niharika Konidela : ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ತಮ್ಮನ ಮಗಳು ನಿಹಾರಿಕ ಕೊನಿಡೇಲಾ ಅವರ ವಿಚಾರವಾಗಿ ಇತ್ತೀಚಿಗೆ ಮಾದ್ಯಮಗಳಲ್ಲಿ ಸುದ್ದಿಗಳು ಬರುತ್ತಲೇ ಇದೆ. ನಿಹಾರಿಕ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಹಾಕಲು, ಪತಿ ಚೈತನ್ಯ ಜಿವಿ (Chaitanya G V ) ಅವರಿಗೆ ವಿಚ್ಛೇದನ ನೀಡಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈಗಾಗಲೇ ನಿಹಾರಿಕಾ ಮತ್ತು ಚೈತನ್ಯ ಸೋಶಿಯಲ್ ಮೀಡಿಯಾಗಳಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ವಿಚ್ಛೇದನದ ಅಧಿಕೃತ ಘೋಷಣೆ ಮಾತ್ರವೇ ಬಾಕಿ ಉಳಿದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ವಿಚ್ಛೇದನದ (Divorce) ಸುದ್ದಿಗಳ ನಡುವೆಯೇ ವೆಬ್ ಸಿರೀಸ್ ಗಳಲ್ಲಿ ನಟಿಸುವ ಮೂಲಕ ನಿಹಾರಿಕ ಸುದ್ದಿಯಲ್ಲಿದ್ದಾರೆ. ಡೆಡ್ ಪಿಕ್ಸೆಲ್ ಹೆಸರಿನ ವೆಬ್ ಸಿರೀಸ್ ನ ಟ್ರೈಲರ್ ನಲ್ಲಿ ಈಗ ನಟಿ ನಿಹಾರಿಕ ಡೈಲಾಗ್ ಈಗ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದೊಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ನಿಹಾರಿಕಾ ಮತ್ತು ಚೈತನ್ಯ (Chaitanya) ಇಬ್ಬರೂ ಪ್ರೀತಿಸಿ ಮದುವೆಯಾದವರು. ಇವರ ವಿವಾಹವು ರಾಜಸ್ಥಾನದ ಪ್ಯಾಲೇಸ್ ಒಂದರಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು. ಆದರೆ ಈಗ ಇಬ್ಬರೂ ತಮ್ಮ ಪ್ರೀತಿ ಹಾಗೂ ದಾಂಪತ್ಯಕ್ಕೆ ವಿಚ್ಚೇದನದ ಮೂಲಕ ಅಂತ್ಯ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮತ್ತೆ ಮದುವೆ: ನರೇಶ್ ಪವಿತ್ರ ಲೈಫ್ ನಲ್ಲಿ ರಮ್ಯಾ, ಸುಚೇಂದ್ರ ವಿಲನ್ ಗಳಾದ್ರ? ಶಾಕ್ ಆದ ನೆಟ್ಟಿಗರು

ವೈಯಕ್ತಿಕ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲದ ಕಾರಣದಿಂದಾಗಿ ಇದೀಗ ನಿಹಾರಿಕ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯ ಕೆಲಸಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿದ್ದಾರೆ. ಮಾದ್ಯಮಗಳಲ್ಲಿ ನಿಹಾರಿಕ ಅವರ ಕುರಿತಾಗಿ ಇಷ್ಟೆಲ್ಲಾ ಸುದ್ದಿಗಳಾಗಿದ್ದರೂ ಸಹಾ ಮೆಗಾ ಫ್ಯಾಮಿಲಿ (Mega Family) ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಮೌನವಾಗಿರುವುದು ಹರಡಿರುವ ಸುದ್ದಿಗಳಿಗೆ ಇನ್ನಷ್ಟು ಇಂಬನ್ನು ನೀಡುವಂತಾಗಿದೆ‌. ಇವೆಲ್ಲವುಗಳ ನಡುವೆ ಈಗ ನಟಿಯ ಹೇಳಿಕೆ ವೈರಲ್ ಆಗಿ ಸದ್ದು ಮಾಡುತ್ತಿದೆ.

ಡೆಡ್ ಪಿಕ್ಸೆಲ್ (Dead Pixel) ಸಿರೀಸ್ ನಲ್ಲಿ ಆನ್ಲೈನ್ ಗೇಮ್ ಅನ್ನು ತೋರಿಸಲಾಗಿದೆ. ಆನ್ ಲೈನ್ ಗೇಮ್ ಒಂದು ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ. ಈಬ ಟ್ರೈಲರ್ ನಲ್ಲಿ ನಿಹಾರಿಕಾ, ರೋಷನ್ ಬೆಡ್ ಮೇಲೆ, ಭಾರ್ಗವ್ ಮನಸ್ಸಿನಲ್ಲಿ ಎನ್ನುವ ಅರ್ಥವನ್ನು ನೀಡುವಂತೆ ಡೈಲಾಗ್ ಒಂದನ್ನು ಹೇಳಿದ್ದಾರೆ. ಈ ಟ್ರೈಲರ್ ಒಂದು ಕಡೆ ಕುತೂಹಲವನ್ನು ಕೆರಳಿಸಿದೆ. ಅದೇ ವೇಳೆ ಮತ್ತೊಂದು ಕಡೆ ಅಭಿಮಾನಿಗಳು ಮತ್ತು ನೆಟ್ಟಿಗರು ಟ್ರೈಲರ್ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Comment