Richest Ganesh: 66 ಕೆಜಿ ಚಿನ್ನ, 295 ಕೆಜಿ ಬೆಳ್ಳಿ, ಇಡೀ ದೇಶದಲ್ಲೇ ಶ್ರೀಮಂತ ಗಣೇಶ, ಇನ್ನು ಮಂಟಪದ ವಿಮೆ ಕೇಳಿದ್ರೆ ಶಾಕ್ ಆಗ್ತೀರಾ! ಎಲ್ಲಿದೆ ಈ ಗಣೇಶ?

0 257

Richest Ganesh : ದೇಶಾದ್ಯಂತ ಇಂದು ಗಣೇಶ ಹಬ್ಬವು ಬಹಳ ಸಡಗರ ಮತ್ತು ಸಂಭ್ರಮದಿಂದ ಆರಂಭವಾಗಿದೆ. ಗಣೇಶನ (Lord Ganesha) ಹಬ್ಬದ ವಿಶೇಷತೆಯೆಂದರೆ ಮಂಟಪಗಳನ್ನು ಸಿದ್ಧಪಡಿಸಿ ಗಣೇಶನ ಪ್ರತಿಷ್ಠಾಪನೆ ಮಾಡಿ ಮೂರು, ಐದು, ಒಂಬತ್ತು ಹೀಗೆ ತಮ್ಮ ಶಕ್ತ್ಯಾನುಸಾರ ದಿನಗಳು ಗಣೇಶನನ್ನು ಆರಾಧನೆ ಮಾಡಲಾಗುತ್ತೆ. ಕೆಲವು ಕಡೆಗಳಲ್ಲಿ ಈ ಸಂದರ್ಭದಲ್ಕಿ ದುಬಾರಿ ಬೆಲೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರೆ, ಇನ್ನು ಕೆಲವೆಡೆ ಬೃಹತ್ ಗಾತ್ರದ ಗಣೇಶನ ಮೂರ್ತಿಗಳನ್ನು, ಅದ್ದೂರಿ ಮಂಟಪಗಳನ್ನು ನಿರ್ಮಿಸಲಾಗಿದೆ.

ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಮುಂಬೈನ (Mumbai) ಪ್ರಸಿದ್ಧ ಜಿ ಎಸ್ ಬಿ (GSB) ಸೇವಾ ಮಂಡಳಿಯ  ‘ಮಹಾಗಣಪತಿ’ ಈ ವರ್ಷ ಸಾಕಷ್ಟು ಸುದ್ದಿಯಾಗುತ್ತಿದೆ. ಹೌದು, ಇಲ್ಲಿನ ವಿಘ್ನೇಶ್ವರನ ಅಲಂಕಾರಕ್ಕೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು (Jewellery) ಬಳಸಲಾಗಿದೆ. ಗಣೇಶನ ಮೂರ್ತಿಯನ್ನು 66.5 ಕೆಜಿ ಚಿನ್ನ ಮತ್ತು 295 ಕೆಜಿಗೂ ಹೆಚ್ಚಿನ ಬೆಳ್ಳಿ ಆಭರಣಗಳಿಂದ ಹಾಗೂ ಇನ್ನಿತರೆ ಬೆಲೆಬಾಳುವ ವಸ್ತುಗಳಿಂದ ಅಲಂಕರಿಸಲಾಗಿದೆ.‌

ಇಲ್ಲಿ ಮತ್ತೊಂದು ವಿಶೇಷ ಏನೆಂದರೆ ಜಿ ಎಸ್‌ ಬಿ ಸೇವಾಮಂಡಳಿಯ ಆಡಳಿತ ಮಂಡಳಿಯು ಗಣೇಶನನ್ನು ಪ್ರತಿಷ್ಠಾಪನೆ ಮಾಡಿರುವ ಮಂಟಪವನ್ನು 360.40 ಕೋಟಿ ರೂ.ಗಳ ದಾಖಲೆ ಮೊತ್ತಕ್ಕೆ ವಿಮೆ ಮಾಡಿಸಿರುವುದಾಗಿ ಮಾದ್ಯಮಗಳಿಗೆ ತಿಳಿಸಿದೆ. ಈ ವರ್ಷ ಇಲ್ಲಿ 69ನೇ ವರ್ಷಾಚರಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮಂಟಪದಲ್ಲಿ ಭದ್ರತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ಮಂಟಪದಲ್ಲಿ ಭದ್ರತಾ ವ್ಯವಸ್ಥೆಗಳ ಭಾಗವಾಗಿ ಫೇಶಿಯಲ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಇನ್ನು ಭಕ್ತರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್ ಮತ್ತು ಡಿಜಿಟಲ್ ಲೈವ್ ಸೇವೆಗಳನ್ನು ಒದಗಿಸಲಾಗಿದೆ. ಕಳೆದ ವರ್ಷ ಈ ಗಣೇಶ ಮಂಟಪಕ್ಕೆ ರೂ.316 ಕೋಟಿಗೆ ವಿಮೆ ಮಾಡಲಾಗಿತ್ತು ಎನ್ನಲಾಗಿದ್ದು, ಈ ವರ್ಷ ಆ ದಾಖಲೆಯನ್ನು ಮುರಿದಿದ್ದಾರೆ.

Leave A Reply

Your email address will not be published.