Alcohol vomiting: ಮಧ್ಯಪಾನ ಸೇವಿಸಿದಾಗ ವಾಂತಿ ಆಗುವುದು ಸಹಜ; ವೈದ್ಯರು ಇದಕ್ಕೆ ತಿಳಿಸುವ ಕಾರಣ ಕೇಳಿ!

Written by Sanjay A

Published on:

---Join Our Channel---

Alcohol Vomiting: ಮಧ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ನಾವು ಸಾಕಷ್ಟು ಬಾರಿ ಕೇಳಿದ್ದೇವೆ, ಹಾಗೂ ಓದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಈ ಮಧ್ಯಪಾನ ಸೇವಿಸುವುದನ್ನು ಫ್ಯಾಷನ್ ಎಂದು ಭಾವಿಸುತ್ತಾರೆ. ನಾವು ಅನೇಕ ಬಾರಿ ಜನರು ಕಂಠ ಪೂರ್ತಿ ಕುಡಿದು ತೂರಾಡುತ್ತಿರುವುದನ್ನು ನೀವು ನೋಡಿರುತ್ತೀರಿ. ಇನ್ನು ಈ ಕಾರಣದಿಂದ ಅನೇಕರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಹ ಸಾಧ್ಯವಾಗದೆ ಇರುವ ಸ್ಥಿತಿಯಲ್ಲಿರುತ್ತಾರೆ.

ಇನ್ನು ಅನೇಕ ಬಾರಿ ಜನರು ಮದ್ಯ ಸೇವಿಸಿ ವಾಂತಿ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಅನೇಕ ಜನರಿಗೆ ಹೀಗೆ ಆಗುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಮೂಡಿದೆ. ಇನ್ನು ಇಂದಿನ ಈ ಪುಟದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ…

ಒಂದು ಸಂಶೋಧನೆಯ ಪ್ರಕಾರ ಅತಿಯಾಗಿ ಮಧ್ಯಪಾನ ಸೇವಿಸುವುದರಿಂದ ಅದು ವಿಷವಾಗಿ ಬದಲಾಗುತ್ತದೆ. ಪುರುಷರು 2 ಗಂಟೆಗಳಲ್ಲಿ 5 ಪಾನೀಯಗಳನ್ನು ಸೇವಿಸಿದರೆ ಅಥವಾ ಮಹಿಳೆಯರು 2 ಗಂಟೆಗಳಲ್ಲಿ 4 ಪಾನೀಯಗಳನ್ನು ಸೇವಿಸಿದರೆ ಅದು ವಿಷವಾಗುತ್ತದೆ. ಆದರೆ ಇದನ್ನು ಕೆಲವರು ಅರಿತುಕೊಳ್ಳುದೆ, ಸಾಕಷ್ಟು ಕುಡಿದು ಬಿಡುತ್ತಾರೆ. ಕುಡಿಯುವುದನ್ನು ನಿಲ್ಲಿಸಿದ ನಂತರವೂ ಸಹ ಮಧ್ಯಪಾನ ರಕ್ತವನ್ನು ಪ್ರವೇಶಿಸುತ್ತದೆ. ಇನ್ನು ಈ ಕಾರಣದಿಂದ ದೇಹದಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಾಗುತ್ತದೆ.

ಹೊಟ್ಟೆಯಲ್ಲಿ ಆಲ್ಕೋಹಾಲ್ ವಿಷವಾಗಿ ಬದಲಾದರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಹೆಚ್ಚಾಗುತ್ತದೆ. ಮಧ್ಯವೂ ಕೇವಲ ಹೊಟ್ಟೆಗೆ ಮಾತ್ರವಲ್ಲದೆ ಲಿವರ್ ಹಾಗೂ ಇನ್ನಿತರ ಭಾಗಗಳಿಗೂ ಸಹ ವಿಷಕಾರಿಯಾಗಿದೆ. ಅಲ್ಲದೆ ಹೆಚ್ಚಾಗಿ ಮಧ್ಯವನ್ನು ಸೇವಿಸಿದರೆ ಹೊಟ್ಟೆಯ ಒಳಪದರದಲ್ಲಿ ಊತ ಉಂಟಾಗುವ ಜೊತೆಗೆ ಅಲ್ಸರ್ ಆಗುವ ಅಪಾಯವೂ ಸಹ ಇದೆ.

ಇನ್ನು ಹೆಚ್ಚಾಗಿ ಮಧ್ಯವನ್ನು ಸೇವಿಸಿದರೆ, ಅದು ವಿಷವಾಗಿ ಬದಲಾಗುತ್ತದೆ. ಇದೇ ಕಾರಣದಿಂದ ಜನರು ವಾಂತಿ ಮಾಡುತ್ತಾರೆ. ಅಲ್ಲದೆ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಾದರೆ ಜನರು ಕೋಮಾಗೆ ಹೋಗುವ ಸಾಧ್ಯತೆ ಇದೆ. ಕೆಲವೊಮ್ಮೆ ಜನರು ಇದೆ ಕಾರಣದಿಂದ ಸಾವನ್ನಪ್ಪುತ್ತಾರೆ.

Leave a Comment