Reserve Bank of India: ಜನರು ತಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೆಲವೊಮ್ಮೆ ಬ್ಯಾಂಕ್ ಗಳಿಂದ ಅಥವಾ ವೈಯಕ್ತಿಕ ಸಾಲ ಕಂಪನಿಗಳಿಂದ ಸಾಲವನ್ನು ಪಡೆಯುತ್ತಾರೆ. ಆದರೆ ಇವುಗಳ ಬಡ್ಡಿ ದರಗಳು ಹೆಚ್ಚಿರುವ ಕಾರಣ ಅವರು ಗ್ರಾಹಕರಿಗೆ ಸಾಲವನ್ನು ಮರು ಪಾವತಿ ಮಾಡುವ ವೇಳೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ವೇಳೆ ಸಾಲ ಮಾರು ಪಾವತಿ ಮಾಡುವಲ್ಲಿ ವಿಳಂಬವಾದರೆ ಬ್ಯಾಂಕ್ ಗಳು ದಂಡವನ್ನು ವಿಧಿಸುತ್ತದೆ. ಇನ್ನು ಈ ಕಾರಣದಿಂದ ಸಾಲಗಾರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಇದೀಗ ಇವುಗಳನ್ನು ಗಮನಿಸಿದ ಆರ್ ಬಿ ಐ (Reserve Bank of India) ಸಾಲಗಾರರಿಗೆ ದೊಡ್ಡ ರಿಲೀಫ್ ನೀಡಿದೆ. ಮುಂದಿನ ವರ್ಷದ ಆರಂಭದಿಂದ ಬ್ಯಾಂಕ್ ನ ಸಾಲದ ಬಡ್ಡಿ ದರಗಳು ಹಾಗೂ ದಂಡಗಳ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಜಾರಿಗೆ ತರಲಿದೆ. ಇನ್ನು ಈಗಾಗಲೆ ಈ ಹೊಸ ನಿಯಮಗಳ ಮಾರ್ಗ ಸೂಚಿಯನ್ನು ಆರ್ ಬಿ ಐ ಸ್ಪಷ್ಟ ಪಡಿಸಿದೆ. ಎಲ್ಲಾ ಬ್ಯಾಂಕ್ ಗಳು ಹಾಗೂ ಫೇನ್ಯಾನ್ಸ್ ಕಂಪನಿಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಸಾಮಾನ್ಯವಾಗಿ ಬ್ಯಾಂಕ್ ಗಳು ಮತ್ತು ಕೆಲವು ವಾಣಿಜ್ಯ ಕಂಪನಿಗಳು ತಮ್ಮ ಆದಾಯವನ್ನು ಹೆಚ್ಚಿಸುವ ಸಲುವಾಗಿ ಸಾಲಗಾರರಿಗೆ ಸಾಲ ಪಾವತಿಯಲ್ಲಿ ತಡವಾದರೆ ದಂಡವನ್ನು ವಿಧಿಸುತ್ತದೆ. ಇನ್ನು ಬ್ಯಾಂಕ್ ಗಳು ಈ ರೀತಿ ದಂದವಿಧಿಸುವುದನ್ನು ಇದೀಗ ಆರ್ ಬಿ ಐ ನಿಷೇಧಿಸಿದೆ. ಸಾಲ ಪಾವತಿಯು ಡೀಫಾಲ್ಟ್ ಆದ ಸಮಯದಲ್ಲಿ ಮಾತ್ರ ದಂಡ ಶುಲ್ಕವನ್ನು ವಿಧಿಸಲು ಸಾಧ್ಯವಾಗುತ್ತದೆ ಎಂದು ಆರ್ ಬಿ ಐ ಮಾಹಿತಿ ನೀಡಿದೆ.
ಇನ್ನು ಇತ್ತೀಚೆಗೆ ಅಂದರೆ ಶುಕ್ರವಾರ ನಡೆದ ದಂಡ ಶುಲ್ಕ ಕುರಿತು ಹೊರಡಿಸಿದ ಅಧಿಸೂಚನೆಯಲ್ಲಿ ಸಾಲಗಾರರ ಸಾಲದ ಮೇಲೆ ದಂಡ ಶುಲ್ಕವನ್ನು ವಿಧಿಸಲು ಯಾವುದೇ ಬ್ಯಾಂಕ್ ಅಥವಾ ಫೇನ್ಯಾನ್ಸ್ ಕ್ಪನಿಗಳಿಗೆ ಅನುಮತಿ ಇಲ್ಲ ಎಂದು ಆರ್ ಬಿ ಐ ತಿಳಿಸಿದೆ. ಇನ್ನು ಸಾಲ ಒಪ್ಪಂದ ನಿಯಮಗಳನ್ನು ಸಾಲಗಾರರು ಪಾಲಿಸದಿದ್ದಲ್ಲಿ ಮಾತ್ರ ಬ್ಯಾಂಕ್ ಗಳು ದಂಡ ಶುಲ್ಕವನ್ನು ವಿಧಿಸಬಹುದು ಎಂದು ತಿಳಿಸಿದೆ.