ಐಪಿಎಲ್ ಪ್ರಾರಂಭದಿಂದ ಹಿಡಿದು ಪ್ರತಿ ಸೀಸನ್‌ನಲ್ಲಿ ಆರ್ ಸಿ ಬಿ ಪರವಾಗಿ ‘ಕಪ್ ನಮ್ದೇ’ ಎನ್ನುವ ಘೋಷಣೆ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆಯುತ್ತದೆ. ಕಪ್ ನಮ್ದೇ ಎನ್ನುವ ಘೋಷಣೆ ಫೇಮಸ್ ಆದರೂ ಕೂಡಾ ಆರ್ಸಿಬಿ ಇದುವರೆಗೂ ಕೂಡಾ ಒಂದು ಸೀಸನ್ ನಲ್ಲೂ ಕಪ್ ತನ್ನದಾಗಿಸಿಕೊಂಡಿಲ್ಲ. ಹಾಗೆಂದ ಮಾತ್ರಕ್ಕೆ ಕಪ್ ನಮ್ದೇ ಎನ್ನುವ ಕ್ರೇಜ್ ಕಡಿಮೆಯಾಗಿಲ್ಲ. ಆದರೆ ಈ ಬಾರಿ ಕಪ್ ನಮ್ದೇ ಎನ್ನುವ ಘೋಷಣೆಗೆ ತಕ್ಕಂತಹ ಒಂದು ಭರವಸೆಯನ್ನು ತಂಡ ಮೂಡಿಸಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ತಮ್ಮದಾಗಿಸಿಕೊಳ್ಳಲು ಇನ್ನು ಎರಡು ಹೆಜ್ಜೆಗಳನ್ನು ಮಾತ್ರವೇ ಇಡಬೇಕಾಗಿದೆ.
ಆ ಎರಡು ಹೆಜ್ಜೆಗಳಲ್ಲಿ ಒಂದು ಇಂದು ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಬೇಕಾಗಿದೆ. ಅಹಮದಾಬಾದ್ ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದ್ದು, ಭರ್ಜರಿ ಆಟವನ್ನು ಎರಡು ತಂಡಗಳ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕಿಳಿಯುತ್ತದೆ.
ಐಪಿಎಲ್ ನ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡ ದಾಖಲೆಯನ್ನು ಮಾಡಿದೆ ರಾಜಸ್ತಾನ ರಾಯಲ್ಸ್ ತಂಡ. ಇನ್ನು ಆರ್ಸಿಬಿ ವಿಚಾರಕ್ಕೆ ಬಂದರೆ 13 ಸೀಸನ್ ಗಳಲ್ಲಿ ಉತ್ತಮ ಪ್ರದರ್ಶನವನ್ನೇನೋ ನೀಡಿರುವ ತಂಡವು ಒಂದು ಬಾರಿಯೂ ಕೂಡಾ ಪ್ರಶಸ್ತಿಯನ್ನು ಗೆದ್ದಿಲ್ಲ ಎನ್ನುವುದು ವಾಸ್ತವದ ವಿಷಯವಾಗಿದೆ. ಇನ್ನು ಈ ಬಾರಿ ವಿರಾಟ್ ಕೊಹ್ಲಿ ಅವರು ತಂಡದ ನಾಯಕ ಸ್ಥಾನವನ್ನು ಬಿಟ್ಟ ಮೇಲೆ ಫಾಫ್ ಡು ಪ್ಲೆಸಿಸ್ ಅವರ ನಾಯಕತ್ವದಲ್ಲಿ ಕ್ವಾಲಿಫೈಯರ್ 2 ಪಂದ್ಯಕ್ಕೆ ಪ್ರವೇಶವನ್ನು ಪಡೆದಿದ್ದು, ಅದೃಷ್ಟ ಈ ಬಾರಿ ತಂಡದ ಕೈಹಿಡಿದಿದೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಹಿಂತಿರುಗಿದ್ದಾರೆ, ಕಳೆದ ಪಂದ್ಯದಲ್ಲಿ ರಜತ್ ಪಾಟಿದರ್ ಶತಕ ಬಾರಿಸುವುದರ ಮೂಲಕ ತಂಡದಲ್ಲಿ ಒಂದು ಹೊಸ ಹುಮ್ಮಸ್ಸು ಹಾಗೂ ಚೈತನ್ಯ ಶಕ್ತಿಯನ್ನು ಮೂಡಿಸಿದ್ದಾರೆ. ಅಭಿಮಾನಿಗಳಲ್ಲಿ ಒಂದು ಭರವಸೆಯನ್ನು ಹುಟ್ಟಿಸಿದ್ದಾರೆ. ಇನ್ನು ನಿಂದು ಆರ್ ಸಿ ಬಿ ತಂಡದ ಪಾಲಿಗೆ ಶುಕ್ರವಾರವು ಶುಭ ಶುಕ್ರವಾರ ಆಗುವುದೋ ಇಲ್ಲವೋ ಎನ್ನುವುದನ್ನು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.