RCB ಸೋಲಿಗೆ ಇವರೇ ಕಾರಣವಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಿಟ್ಟು

Entertainment Featured-Articles News Sports

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿ ರು ದ್ಧ ನಡೆದಂತಹ ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿನ್ನೆ ನಡೆದ ಪಂದ್ಯದಲ್ಲಿ ತೀವ್ರವಾದ ಪ್ರತಿಸ್ಪರ್ಧೆಯನ್ನು ನೀಡಿದ ಹೊರತಾಗಿಯೂ ಸಹಾ 23 ರನ್ ಗಳಿಂದ ಸೋಲನ್ನು ಅನುಭವಿಸಿದೆ. ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ವಿ ರು ದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಟ್ವಿಟರ್ ನಲ್ಲಿ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಕಿಡಿ ಕಾರಿದ್ದಾರೆ.

ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ಮಂಗಳವಾರ ಆರ್ ಸಿ ಬಿ ಮತ್ತು ಸಿ ಎಸ್ ಕೆ ತಂಡಗಳ ನಡುವೆ ಪಂದ್ಯಾವಳಿ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ, ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೇ ಅವರ ಭರ್ಜರಿ ಬ್ಯಾಟಿಂಗ್ ನ ಬೆಂಬಲದೊಂದಿಗೆ ಸಿ ಎಸ್ ಕೆ ತನ್ನ ನಿಗಧಿತ 20 ಓವರ್ ಗಳಿಗೆ 216 ರನ್ ಗಳನ್ನು ಗಳಿಸುವ ಮೂಲಕ ಆರ್ ಸಿ ಬಿ ಗೆ ಈ ಮೊತ್ತವನ್ನು ಬೆನ್ನಟ್ಟುವ ಅಥವಾ ಗುರಿ ಹಿಂಬಾಲಿಸುವ ಸವಾಲನ್ನು ನೀಡಿತ್ತು.

ನಂತರ ಬ್ಯಾಟಿಂಗ್ ಮಾಡಿದ ಆರ್ ಸಿ ಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳನ್ನಷ್ಟೇ ಮಾಡಲು ಸಫಲವಾಯಿತು. 217 ರನ್ ಗಳ‌ ಗುರಿಯನ್ನು ತಲುಪಬೇಕಾಗಿದ್ದ ಆರ್ ಸಿ ಬಿ ಗೆ ಭರ್ಜರಿಯಾದ ಆರಂಭದ ಅನಿವಾರ್ಯತೆ ಖಂಡಿತ ಇತ್ತು ಎನ್ನಲಾಗಿದೆ. ಇನ್ನಿಂಗ್ಸ್ ಆರಂಭಿಸಿದ ಫಾಫ್ ಡಿ ಪ್ಲೆಸಿಸ್ ಹಾಗೂ ಅನುಜ್ ರಾವತ್ ಅವರ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

ಆದರೆ ತಂಡದ ಮೊತ್ತವು 20 ರನ್ ಇರುವಾಗಲೇ ವಿಕೆಟ್ ಒಪ್ಪಿಸಿ ಬಿಟ್ಟರು. ಪಂಜಾಬ್ ಕಿಂಗ್ಸ್ ವಿ ರು ದ್ಧ ಪಂದ್ಯ ನಡೆದ ದಿನ, ಇದೇ ಮೈದಾನದಲ್ಲಿ ಫಾಫ್ ಡಿ ಪ್ಲೆಸಿಸ್ ಅವರು ಮಿಂಚಿನ ಬ್ಯಾಟಿಂಗ್ ಅಬ್ಬರಿಸಿದ ಕಾರಣದಿಂದಾಗಿ, ಆದರೆ ಸ್ಪಿನ್ನರ್ ಮಹೇಶ್ ತೀಕ್ಷಣ ಅವರ ಎಸೆತದಲ್ಲಿ ದೊಡ್ಡ ಹೊಡತವನ್ನು ನೀಡಲು ಪ್ರಯತ್ನ ಮಾಡಿದ ಡು ಪ್ಲೆಸಿಸ್ ಕ್ಯಾಚ್ ನೀಡುವ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಶೆಯನ್ನು ಮೂಡಿಸಿದೆ.

ಇದಾದ ನಂತರ ಮೂರನೇ ಕ್ರೀಸ್ ನಲ್ಲಿ ಕಣಕ್ಕೆ ಇಳಿದ ವಿರಾಟ್ ಕೊಹ್ಲಿ ಪಂದ್ಯದಲ್ಲಿ ಅಬ್ಬರಿಸಬಹುದು ಎನ್ನುವ ನಿರೀಕ್ಷೆಗಳಿದ್ದವು. ಏಕೆಂದರೆ ಮುಂಬೈ ಇಂಡಿಯನ್ಸ್ ವಿ ರು ದ್ಧ ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮವಾದ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಅಭಿಮಾನಿಗಳನ್ನು ಖುಷಿ ಪಡಿಸಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಅವರು ಮೂರು‌ ಎಸೆತಗಳಲ್ಲಿ ಒಂದೇ ಒಂದು ರನ್ ಮಾಡಿ, ಮುಖೇಶ್ ಚೌಧರಿಗೆ ವಿಕೆಟ್ ಒಪ್ಪಿಸಿದರು.

ಇನ್ನು ಆರ್ ಸಿ ಬಿ ಸೋಲು ಅನುಭವಿಸಿದ ಕೂಡಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಟ್ಟನ್ನು ಹೊರಹಾಕಿದ್ದಾರೆ. ಬ್ಯಾಟಿಂಗ್ ವೈಫಲ್ಯ ಎದುರಿಸಿರುವ ಫಾಫ್ ಡಿ ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಲಾಗುತ್ತಿದೆ.‌ ಆರ್ ಸಿ ಬಿ ಸೋಲಿಗೆ ಇವರಿಬ್ಬರೇ ಕಾರಣ ಎನ್ನುತ್ತಿದ್ದಾರೆ. ಫಾಫ್ ಸಿ ಎಸ್ ಕೆ ಗೆ ಒಳ್ಳೆಯದು ಮಾಡುವ ಕಡೆಗೆ ಗಮನ ನೀಡಿದ್ದಾರೆ ಎಂದಿದ್ದಾರೆ. ವೀಡಿಯೋಗಳನ್ನು ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *