RCB ಗೆ ಭಾರೀ ಹೊಡೆತ: ಬಯೋ ಬಬಲ್ ನಿಂದ ಹೊರ ನಡೆದ ಹರ್ಷಲ್ ಪಟೇಲ್!! ಕಾರಣವಾದ್ರೂ ಏನು??

Entertainment Featured-Articles News

ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐಪಿಎಲ್ ನ ಹದಿನೈದನೇ ಆವೃತ್ತಿಯು ಭರ್ಜರಿಯಾಗಿ ಸಾಗುತ್ತಿದ್ದು, ಕ್ರಿಕೆಟ್‌ ಪಂದ್ಯಾವಳಿಗಳು ಅಭಿಮಾನಿಗಳಿಗೆ ಹಬ್ಬವೋ ಹಬ್ಬ ಎನ್ನುವಂತಹ ವಾ ವಾತಾವರಣವನ್ನು ನಿರ್ಮಾಣ ಮಾಡಿದೆ. ಈ ಬಾರಿಯ ಐಪಿಎಲ್ ನಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಬುತ ಪ್ರದರ್ಶನವನ್ನು ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದೆ. ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತದ ರನ್ ಕಲೆ ಹಾಕಿದ್ದರೂ ಸೋತಿದ್ದ ತಂಡ ಅನಂತರ ಫುಲ್ ಫಾರ್ಮ್ ನಲ್ಲಿ ಮಿಂಚುತ್ತಿದೆ.

ಆಡಿರುವ ಮೂರು ಪಂದ್ಯಗಳಲ್ಲಿ ದೊಡ್ಡ ಮೊತ್ತದ ರನ್ ಕಲೆ ಹಾಕಿದ್ದು, ಅಮೋಘ ಆಟವನ್ನು ಆಡಿ, ಹ್ಯಾಟ್ರಿಕ್ ಜಯವನ್ನು ಪಡೆದಿರುವ ಆರ್ ಸಿ ಬಿ ಐಪಿಎಲ್ 2022 ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಹೀಗೆ ತಂಡವು ಒಂದು ಉತ್ತಮವಾದ ಹಂತವನ್ನು ಪಡೆದುಕೊಂಡು, ಆಟದಲ್ಲಿ ಒಂದು ಸ್ಥಿರತೆಯನ್ನು ಕಾಯ್ದುಕೊಂಡು, ಉತ್ತಮ ನಡೆಯನ್ನು ಸಾಧಿಸುತ್ತಿದೆ ಎನ್ನುವಾಗಲೇ ತಂಡದ ಒಬ್ಬ ಉತ್ತಮ ಪ್ಲೇಯರ್ ಹಾಗೂ ಬೌಲಿಂಗ್ ವಿಚಾರದಲ್ಲಿ ಆರ್ ಸಿ ಬಿಯ ಆಪದ್ಭಾಂದವ ಎನಿಸಿದ್ದ ಹರ್ಷಲ್ ಪಟೇಲ್ ಅವರು ಐಪಿಎಲ್ ನಿಂದ ಬಯೋ ಬಬಲ್ ನಿಂದ ಹೊರ ನಡೆದಿದ್ದಾರೆ.

ವೈಯುಕ್ತಿಕ ಕಾರಣಗಳಿಂದಾಗಿ ಹರ್ಷಲ್ ಪಟೇಲ್ ಅವರು ಬಯೋ ಬಬಲ್ ನಿಂದ ಹೊರಗೆ ಬರಬೇಕಾದ ಅನಿವಾರ್ಯತೆ ಉಂಟಾಗಿದೆ ಎನ್ನಲಾಗಿದೆ. ಇನ್ನು ಬಲ್ಲ ಮೂಲಗಳ ವರದಿಯ ಪ್ರಕಾರ ಹರ್ಷಲ್ ಪಟೇಲ್ ಅವರ ಸಹೋದರಿ ನಿಧನವಾಗಿರುವ ಕಾರಣದಿಂದಾಗಿ ಅವರು ಮುಂಬೈ ವಿ ರು ದ್ಧ ನಡೆದ ಪಂದ್ಯ ಮುಗಿದ ಬಳಿಕ ಪುಣೆಯಿಂದ ನೇರವಾಗಿ ತಮ್ಮ ಊರಿಗೆ ಹೋಗಿದ್ದಾರೆ ಎನ್ನಲಾಗಿದೆ‌. ಆರ್ ಸಿ ಬಿ ಯ ಮುಂದಿನ ಪಂದ್ಯ ಏಪ್ರಿಲ್ 12 ರಂದು ನಡೆಯಲಿದ್ದು, ನಾಲ್ಕು ಬಾರಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಈ ಪಂದ್ಯ ನಡೆಯಲಿದೆ.

ಇನ್ನು ಹರ್ಷಲ್ ಪಟೇಲ್ ಅವರು ಈ ವೇಳೆಗೆ ತಂಡಕ್ಕೆ ಮರಳಿ ಬಂದರೂ ಸಹಾ ಅವರು ನಿಯಮಗಳ ಪ್ರಕಾರ ಕಡ್ಡಾಯವಾಗಿ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕಾಗಿದೆ. ಒಟ್ಟಾರೆ ಆರ್ ಸಿ ಬಿ ತಂಡಕ್ಕೆ ಇದೊಂದು ಅನಿರೀಕ್ಷಿತ ಶಾ ಕ್ ಆಗಿದೆ. ಆರ್ ಸಿ ಬಿ ಅಭಿಮಾನಿಗಳು ಸಹಾ ಹರ್ಷಲ್ ಪಟೇಲ್ ಅವರು ಹೊರಗೆ ಹೋದ ಕಾರಣ ತಿಳಿದು, ಸೋಶಿಯಲ್ ಮೀಡಿಯಾಗಳಲ್ಲಿ ಹರ್ಷಲ್ ಪಟೇಲ್ ಅವರ ಸಹೋದರಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಪೋಸ್ಟ್ ಮಾಡಿದ್ದಾರೆ.

Leave a Reply

Your email address will not be published.