RCB ಎದುರು ಸೋತ LSG: ಅದೊಂದು ವಿಷಯದಲ್ಲಿ ಎಡವಿದೆವೆಂದು ಕಾರಣ ತಿಳಿಸಿದ ಕೆ.ಎಲ್.ರಾಹುಲ್

Entertainment Featured-Articles News Sports

ಮಂಗಳವಾರ ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಟಾಸ್ ಸೋತು ಆರ್ ಸಿ ಬಿ ತಂಡ ಬ್ಯಾಟಿಂಗ್ ಮಾಡಬೇಕಾಯಿತು. ಆರ್ ಸಿ ಬಿ ಎದುರಾಳಿ ಲಖನೌ ಸೂಪರ್ ಜಯಿಂಟ್ಸ್ ತಂಡದ ದುಷ್ಮಾಂತ ಚಮೀರಾ, ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಗಳನ್ನು ಆರಂಭದಲ್ಲೇ ಉರುಳಿಸುವ ಮೂಲಕ ಆರ್ ಸಿ ಬಿ ಮುಂದೆ ದೊಡ್ಡ ಸವಾಲನ್ನೇ ಇಟ್ಟಿತ್ತು. ಏಕೆಂದರೆ ಆರ್ ಸಿ ಬಿ ಏಳು ರನ್ ಗಳಿಗೆ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆದರೆ ಫಾಫ್ ಡು ಪ್ಲೆಸಿಸ್ ಅವರ ಬ್ಯಾಟಿಂಗ್ ನೆರವಿನಿಂದಾಗಿ ಬೆಂಗಳೂರು ತಂಡ ಏಳು ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕುವಲ್ಲಿ ಯಶಸ್ಸು ಪಡೆಯಿತು.

ನಂತರ 182 ರನ್‌ ಗುರಿಯನ್ನು ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪರ ಆಡಿದ ಕೃಣಾಲ್‌ ಪಾಂಡ್ಯ 42 ಹಾಗೂ ಕೆ.ಎಲ್‌ ರಾಹುಲ್‌ 30 ರನ್‌ ಗಳಿಸಿದ್ದು ಬಿಟ್ಟರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ರನ್ ಗಳಿಸಲುವಲ್ಲಿ ವಿಫಲರಾದರು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳಲ್ಲಿ ಯಾರಾದರೂ ಒಬ್ಬರು ದೀರ್ಘ ಇನಿಂಗ್ಸ್ ಆಡಬೇಕಾಗಿತ್ತು ಎನ್ನುವುದು ರಾಹುಲ್ ಅವರ ಅಭಿಪ್ರಾಯವಾಗಿತ್ತು.

ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ ನಲ್ಲಿ ಮಾತನಾಡಿದ ಕೆ.ಎಲ್.ರಾಹುಲ್ ಅವರು, ಮೊದಲ ಓವರ್ ನಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಉತ್ತಮ ಓಪನಿಂಗ್ ಪಡೆದಿದ್ದೆವು. ಆದರೆ ಪವರ್ ಪ್ಲೇನ್ ನಲ್ಲಿ ನಾವು ರನ್ ಗಳ ಓಟಕ್ಕೆ ಕಡಿವಾಣವನ್ನು ಹಾಕಬೇಕಿತ್ತು. 180 ರನ್ ಕೊಟ್ಟಿರುವ ನಾವು ಹೆಚ್ಚುವರಿಯಾಗಿ 15 ರಿಂದ 20 ರನ್ ಬಿಟ್ಟು ಕೊಟ್ಟಿದ್ದೇವೆ. ಸಿಕ್ಕಿದ್ದ ಉತ್ತಮ ಆರಂಭವನ್ನು ಮದ್ಯಮ ಓವರ್ ಗಳಲ್ಲಿ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಹೇಳಿದ್ದಾರೆ.

ನಮಗೆ ದೊಡ್ಡ ಜೊತೆಯಾಟದ ಅವಶ್ಯಕತೆ ಇತ್ತು ಎಂದಿರುವ ಕೆ ಎಲ್ ರಾಹುಲ್ ಅವರು ನಾವು ಫಾಫ್ ಆರ್ ಸಿ ಬಿ ಪರವಾಗಿ ಹೇಗೆ ಆಡಿದರು ಎನ್ನುವುದನ್ನು ನೋಡಿದ್ದೇವೆ. ನಮ್ಮಲ್ಲಿ ಅಗ್ರ ಕ್ರಮಾಂಕದ ಮೂರು ಅಥವಾ ನಾಲ್ವರು ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರು ದೀರ್ಘ ಇನ್ನಿಂಗ್ಸ್ ಆಡಬೇಕಿತ್ತು ಎಂದಿದ್ದು, ಇನ್ನುಳಿದವರು ಅವರಿಗೆ ಸಾಥ್ ನೀಡಬೇಕಿತ್ತು ಎಂದಿರುವ ರಾಹುಲ್ ಪವರ್ ಪ್ಲೇ ನಲ್ಲಿ ತಮಗೆ ಉತ್ತಮ ಆರಂಭ ಸಿಗಲಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದಾರೆ.

Leave a Reply

Your email address will not be published.