Rashmika Mandanna: Jr. NTR ಜೊತೆ ನಟಿಸಲು ರಶ್ಮಿಕಾ ಹಾಕಿದ ಷರತ್ತು; ಬೆಚ್ಚಿ ಬಿದ್ದ ತೆಲುಗು ಸಿನಿಮಾ ರಂಗ

Written by Soma Shekar

Published on:

---Join Our Channel---

Rashmika Mandanna: ಭಾರತೀಯ ಸಿನಿಮಾ ರಂಗದಲ್ಲಿ ಸದ್ಯಕ್ಕಂತೂ ದಕ್ಷಿಣದ ನಟಿಯರದ್ದೇ (South Heroins) ಕಾರು ಬಾರು ಅಂದರೆ ತಪ್ಪಾಗೋದಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌತ್ ಸಿನಿಮಾಗಳ ಅಬ್ಬರ ನೋಡಿದ ನಂತರ ಬಾಲಿವುಡ್ ಮಂದಿ ಸೌತ್ ನಟ, ನಟಿಯರ ಕಡೆಗೆ ಗಮನ ನೀಡಲು ಆರಂಭಿಸಿದ್ದಾರೆ. ಹೀಗೆ ಬಾಲಿವುಡ್ ಗಮನವನ್ನು ಸೆಳೆದ ದಕ್ಷಿಣದ ನಟಿಯರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಅನಿಮಲ್ ಸಿನಿಮಾ ನಂತರ ರಶ್ಮಿಕಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

ಸ್ಯಾಂಡಲ್ವುಡ್ ನಿಂದ ತನ್ನ ಜರ್ನಿ ಆರಂಭಿಸಿದ ರಶ್ಮಿಕಾ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲೂ ಜನಪ್ರಿಯತೆಯನ್ನು ಪಡೆದುಕೊಂಡು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಕ್ಸಸ್ ಪಡೆದ ನಂತರ ರಶ್ಮಿಕಾ ಸಂಭಾವನೆ ಕೂಡಾ ಏರಿಕೆಯಾಗಿದೆ ಅನ್ನೋದ್ರಲ್ಲಿ ಅನುಮಾನವೇ ಬೇಡ. ಹಾಗಾದರೆ ನಟಿ ಈಗ ಪಡೆಯೋ ಸಂಭಾವನೆ ಎಷ್ಟು? ತಿಳಿಯೋಣ ಬನ್ನಿ.

ಪ್ರಸ್ತುತ ಜೂ.ಎನ್ ಟಿ ಆರ್ (Jr NTR) ಜೊತೆಗೆ ಸಿನಿಮಾವೊಂದಕ್ಕೆ ನಟಿಸುವ ಅವಕಾಶ ರಶ್ಮಿಕಾಗೆ ಬಂದಿದ್ದು, ಈ ಸಿನಿಮಾದಲ್ಲಿ ನಟಿಸೋದಕ್ಕೆ ನಟಿ ಇಟ್ಟ ಸಂಭಾವನೆಯ ಬೇಡಿಕೆ ಕೇಳಿ ಸಿನಿಮಾ ರಂಗ ಶಾಕ್ ಆಗಿದ್ದು, ಈ ವಿಚಾರವು ಈಗ ತೆಲುಗು ರಾಜ್ಯಗಳಲ್ಲಿ ಸುದ್ದಿಯಾಗಿ ಹರಿದಾಡಿದೆ. ಹೌದು, ರಶ್ಮಿಕಾ ಜೂ.ಎನ್ ಟಿ ಆರ್ ಜೊತೆಗೆ ನಟಿಸಲು ರಶ್ಮಿಕಾ ಬರೋಬ್ಬರಿ ಏಳು ಕೋಟಿ ರೂಗಳ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.

ಜೂ.ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನಲ್ಲಿ ಬರಲಿರುವ ಹೊಸ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಆಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಇದರಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ನಟಿ ಇಟ್ಟಿರುವ ಸಂಭಾವನೆಯ ಬೇಡಿಕೆ ವಿಚಾರ ದೊಡ್ಡ ಸುದ್ದಿ ಮಾಡಿದೆ.

Leave a Comment