Rashmika: ಸಂಸ್ಕಾರ ಮರೆತಿಲ್ಲ, ಕೆಲಸದವರ ಕಾಲಿಗೂ ನಮಸ್ಕಾರ ಮಾಡುವ ರಶ್ಮಿಕಾ! ಖುಷಿ ಪಟ್ಟ ಫ್ಯಾನ್ಸ್

Written by Soma Shekar

Published on:

---Join Our Channel---

Rashmika Manadanna: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು ನಟಿ ರಶ್ಮಿಕಾ ಮಂದಣ್ಣ‌. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ನಟಿ ಇತ್ತೀಚಿಗೆ ಸ್ವಲ್ಪ ಸಿನಿಮಾಗಳ ಸಂಖ್ಯೆ ಕಡಿಮೆ ಮಾಡಿದಂತೆ ಕಾಣುತ್ತಿದೆ. ಸಿನಿಮಾಗಳಲ್ಲದೇ ನಟಿ ಜಾಹೀರಾತುಗಳಲ್ಲೂ ಸಹಾ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಅವಕಾಶಗಳು ಬಂದ ಮೇಲೆ ನಟಿ ಹೆಚ್ಚು ಅಲ್ಲೇ ಸಕ್ರಿಯವಾಗಿದ್ದ ಕಾರಣ ದಕ್ಷಿಣದಲ್ಲಿ ಇದೀಗ ಒಂದು ಹೊಸ ಸಿನಿಮಾ ಮಾತ್ರವೇ ಘೋಷಣೆ ಆಗಿದೆ. ಅದು ಬಿಟ್ಟರೆ ಪುಷ್ಪ 2 (Pushpa 2) ಸಿನಿಮಾದಲ್ಲಿ ನಟಿ ನಟಿಸುತ್ತಿದ್ದು, ಇದರಲ್ಲೂ ಕೂಡಾ‌ ರಶ್ಮಿಕಾ (Rashmika) ಪಾತ್ರಕ್ಕೆ ಅಷ್ಟೇನೂ ಮಹತ್ವ ಇಲ್ಲ ಎನ್ನುವ ಸುದ್ದಿಗಳು ಸಹಾ ಹರಿದಾಡುತ್ತಿವೆ.

ಈಗ ಇವೆಲ್ಲವುಗಳ ನಡುವೆಯೇ ರಶ್ಮಿಕಾ ಇಷ್ಟೆಲ್ಲಾ ಸ್ಟಾರ್ ಡಂ ಇದ್ದರೂ ಸಹಾ ತಮ್ಮ ಸಂಸ್ಕಾರಗಳನ್ನು ಮರೆತಿಲ್ಲ ಎನ್ನುವ ವಿಚಾರವಾಗಿ ಒಂದು ಸುದ್ದಿ ಹರಿದಾಡಿದ್ದು, ರಶ್ಮಿಕಾ ಅಭಿಮಾನಿಗಳು ನಟಿಯ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ತಾನೇ ಸ್ವತಃ ಈ ವಿಚಾರಗಳನ್ನು ಹೇಳಿಕೊಂಡಿದ್ದು, ಇದೆಲ್ಲಾ ಗಾಸಿಪ್ (Gossip) ಅಲ್ಲ ಸತ್ಯವಾದ ವಿಚಾರವೆಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ. ಹಾಗಾದರೆ ನಟಿ ಹೇಳಿದ ವಿಚಾರಗಳಾದರೂ ಏನು ಅಂತೀರಾ? ಅದಕ್ಕೂ ಉತ್ತರ ಇಲ್ಲಿದೆ ನೋಡಿ.ನಟಿ ರಶ್ಮಿಕಾ ಮಂದಣ್ಣ ಆಡುವ ಮಾತುಗಳು, ನೀಡುವ ಹೇಳಿಕೆಗಳು ಎಲ್ಲವೂ ಸಹಸ ಬಹಳ ಟ್ರೋಲ್ ಆಗುತ್ತೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿಯನ್ನು ಭರ್ಜರಿಯಾಗಿ ವ್ಯಂಗ್ಯ ಮಾಡಲಾಗುತ್ತದೆ. ಇವೆಲ್ಲವುಗಳ ನಡುವೆಯೇ ನಟಿಯು ತಮ್ಮ ಲೈಫ್ ಸ್ಟೈಲ್ ಹೇಗಿದೆ? ಹಿರಿಯರ ಜೊತೆ ತಾನು ಹೇಗೆ ನಡೆದುಕೊಳ್ಳುತ್ತೇನೆ ಎನ್ನುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟಿಯು ತಾನು ಕಲಿತ ಸಂಸ್ಕಾರಗಳನ್ನು ಇನ್ನೂ ಮರೆತಿಲ್ಲ ಎನ್ನುವ ವಿಚಾರವನ್ನು ಎಲ್ಲರೊಡನೇ ಶೇರ್ ಮಾಡಿಕೊಂಡಿದ್ದಾರೆ. ಮನೆಗೆ ಹೋದಾಗ ನಾನು ಎಲ್ಲರ ಕಾಲಿಗೂ ನಮಸ್ಕಾರ ಮಾಡುವ ಅಭ್ಯಾಸವನ್ನು ಹೊಂದಿದ್ದೇನೆ. ಮನೆಯಲ್ಲಿ ನಾನು ಕೆಲಸದವರ ಕಾಲಿಗೂ ಸಹಾ ನಮಸ್ಕರಿಸುತ್ತೇನೆ.

ಏಕೆಂದರೆ ನಾನು ಯಾರಲ್ಲೂ ಬೇದ ಭಾವವನ್ನು ಮಾಡುವುದಿಲ್ಲ. ನಾನೂ ಎಲ್ಲರಿಗೂ ಗೌರವವನ್ನು ನೀಡುತ್ತೇನೆ. ಅದು ನನ್ನ ವ್ಯಕ್ತಿತ್ವ ಎನ್ನುವ ಮಾತುಗಳನ್ನು ರಶ್ಮಿಕಾ ಅವರು ಹೇಳಿದ್ದು, ನಟಿ ಹೇಳಿದ ಮಾತುಗಳೀಗ ಸೋಶಿಯಲ್ ಮೀಡಿಯಾಗಳಲ್ಲೂ ಸಹಾ ವೈರಲ್ ಆಗಿದೆ. ನಟಿಯು ನನ್ನ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಹಾ ನನಗೆ ಬಹಳ ಮುಖ್ಯ ಎನಿಸುತ್ತದೆ. ನಾನು ಬೆಳಿಗ್ಗೆ ಎದ್ದ ಬಳಿಕ ಸಾಕು ಪ್ರಾಣಿಗಳ ಜೊತೆಗೆ ಮತ್ತು ಸ್ನೇಹಿತರ ಜೊತೆಗೆ ಸಮಯವನ್ನು ಕಳೆಯುತ್ತೇನೆ. ನನಗೆ ಅದರಿಂದ ಬಹಳ ಖುಷಿ ಸಿಗುತ್ತದೆ. ಮಾತಿಗೆ ತುಂಬಾ ಶಕ್ತಿಯಿದೆ.

ಆಡುವ ಮಾತು ಒಬ್ಬರಿಗೆ ಪೂರಕವೂ ಆಗಬಹುದು ಅಥವಾ ಮಾರಕವೂ ಆಗಬಹುದು. ಆದ್ಧರಿಂದಲೇ ಕೆಲವರು ಏನಾದರೂ ಹೇಳಿದಾಗ ಅದು ನನ್ನ ಮೇಲೆ ಪರಿಣಾಮವನ್ನು ಬೀರುತ್ತದೆ. ನಾನು ಪ್ರತಿ ಚಿಕ್ಕ ವಿಷಯವನ್ನು ಡೈರಿಯಲ್ಲಿ (Dairy)ಬರೆದಿಡುತ್ತೇನೆ ಎಂದಿದ್ದಾರೆ.ಪ್ರಸ್ತುತ ನಟಿಯು ಬಾಲವುಡ್ ನಲ್ಲಿ ನಟ ರಣಬೀರ್ ಕಪೂರ್ ನಾಯಕನಾಗಿರುವ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅದು ಬಿಟ್ಟರೆ ಎರಡು ದಿನಗಳ ಹಿಂದೆಯಷ್ಟೇ ತೆಲುಗಿನ ನಟ ನಿತಿನ್ (Nithin) ಜೊತೆಗೆ ರಶ್ಮಿಕಾ ಹೊಸ ಸಿನಿಮಾ ಘೋಷಣೆ ಆಗಿದೆ.

Leave a Comment