Animal Movie: 70 ಕೋಟಿ ಸಂಭಾವನೆ ರಿಜೆಕ್ಟ್ ಮಾಡಿದ ರಣ್ಬೀರ್ ಕಪೂರ್: ಅಸಲಿ ಕಾರಣ ಏನು ಗೊತ್ತಾ?

Written by Soma Shekar

Published on:

---Join Our Channel---

Ranbir Kapoor : ಅನಿಮಲ್ ಸಿನಿಮಾ ಬಿಡುಗಡೆಯ ನಂತರ ದೊಡ್ಡ ಸಕ್ಸಸ್ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾದ ಮೊದಲನೇ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ್ದು, 100 ಕೋಟಿಗಳಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ವರದಿಗಳಾಗಿವೆ. ಇನ್ನು ಈ ಸಿನಿಮಾದಲ್ಲಿ ಸಂಭಾವನೆ ವಿಚಾರವಾಗಿ ರಣ್ಬೀರ್ ಕಪೂರ್ (Ranbir Kapoor) ಅವರು ಈಗ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿ ಹರಿದಾಡುತ್ತಿದ್ದಾರೆ.

ಅನಿಮಲ್ ಸಿನಿಮಾ (Animal Movie) ಬಿಡುಗಡೆಗೆ ಮೊದಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಸಿನಿಮಾ ಬಗ್ಗೆ ಒಂದು ಹೈಪ್ ಕ್ರಿಯೇಟ್ ಆಗಿತ್ತು. ಇನ್ನು ಈ ಸಿನಿಮಾಕ್ಕಾಗಿ ರಣ್ಬೀರ್ ಕಪೂರ್ ಅವರು ತಾವು ಸಾಮಾನ್ಯವಾಗಿ ತೆಗೆದುಕೊಳ್ಳುವ ಸಂಭಾವನೆಗಿಂತ ಕಡಿಮೆ ಸಂಭಾವನೆಯನ್ನು ಪಡೆದಿದ್ದಾರೆ ಎನ್ನುವ ಸುದ್ದಿಗಳಾಗಿದೆ.

ಅನಿಮಲ್ ಸಿನಿಮಾದಲ್ಲಿ ನಟಿಸುವುದಕ್ಕೆ ರಣಬೀರ್ ಕಪೂರ್ ಅವರಿಗೆ ದೊರೆತ ಆಫರ್ 70 ಕೋಟಿ ರೂಪಾಯಿಗಳ ಸಂಭಾವನೆಯಾಗಿತ್ತು. ಆದರೆ ನಟ ರಣಬೀರ್ ಕಪೂರ್ ಅವರು ಅಷ್ಟೊಂದು ಸಂಭಾವನೆ ತನಗೆ ಬೇಡ, ಅದರಲ್ಲಿ ಅರ್ಧ ಮಾತ್ರವೇ ಸಾಕು ಎಂದು ಹೇಳಿದ್ದು, ಅವರು 35 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ.

ರಣಬೀರ್ ಕಪೂರ್ ಅವರು ಸಿನಿಮಾದ ಪ್ರೊಡಕ್ಷನ್ ಬಹಳ ಅಚ್ಚುಕಟ್ಟಾಗಿ ಮೂಡಿ ಬರಬೇಕು ಎನ್ನುವ ಕಾರಣಕ್ಕಾಗಿ ತಮ್ಮ ಸಂಭಾವನೆಯನ್ನು ಅರ್ಧಕ್ಕೆ ಇಳಿಸಿಕೊಂಡಿದ್ದಾರೆ. ಅನಿಮಲ್ ನಿರ್ಮಾಪಕರಿಗೆ ಪ್ರೊಡಕ್ಷನ್ ವಿಷಯದಲ್ಲಿ ಬೆಂಬಲವನ್ನು ನೀಡುವ ಸಲುವಾಗಿ ನಟ ಇಂಥದೊಂದು ನಿರ್ಧಾರವನ್ನು ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: Big Boss: ತನ್ನ ಕ್ವಾರಂಟೈನ್ ಕಹಾನಿ ಹೇಳಿದ ಪ್ರತಾಪ್ ಗೆ ಎದುರಾಯ್ತು ಸಂಕಷ್ಟ; ಡ್ರೋನ್ ವಿರುದ್ಧ ಅಧಿಕಾರಿ ಗರಂ

ಆದರೆ ಇದೇ ವೇಳೆ ನಟನು ಸಿನಿಮಾದ ಲಾಭದ ಅಂಶವನ್ನು ಕೇಳಿದ್ದಾರೆನ್ನಲಾಗಿದೆ. ಈ ಸಿನಿಮಾ ಗಳಿಸುವ ಲಾಭದಲ್ಲಿ ರಣಬೀರ್ ಅವರಿಗೂ ಸಹಾ ಪಾಲು ಇದ್ದು, ನಟನಿಗೆ ಖಂಡಿತ ಇನ್ನಷ್ಟು ಲಾಭವನ್ನು ತಂದು ಕೊಡಲಿದೆ. ಈ ಸಿನಿಮಾವನ್ನು ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ.‌

Leave a Comment