Game Changer ರಾಮ್ ಚರಣ್ ಹಾಡು ಲೀಕ್, ಆಕ್ರೋಶಗೊಂಡ ಫ್ಯಾನ್ಸ್! ಅಭಿಮಾನಿಗಳ ಸಿಟ್ಟಿಗೆ ಸಿಗುತ್ತಾ ಉತ್ತರ?
Game Changer ಟಾಲಿವುಡ್ ನ ಸ್ಟಾರ್ ಹೀರೋ ರಾಮ್ ಚರಣ್ (Ram Charan) ನಾಯಕನಾಗಿರುವ ಬಹುನಿರೀಕ್ಷಿತ ಸಿನಿಮಾ ಗೇಮ್ ಚೇಂಜರ್ ನಿಂದ ಒಂದು ಹಾಡು ಲೀಕ್ ಆಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ?social media) ಸಾಕಷ್ಟು ವೈರಲ್ ಆಗುತ್ತಿದೆ. ತ್ರಿಬಲ್ ಆರ್ ಸಿನಿಮಾದ ದೊಡ್ಡ ಯಶಸ್ಸಿನ ನಂತರ ಸಹಜವಾಗಿಯೇ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳ ನಿರೀಕ್ಷೆ ಇದೀಗ ರಾಮಚರಣ್ ಅವರ ಗೇಮ್ ಚೇಂಜರ್ ಸಿನಿಮಾದ ಕಡೆಗೆ ನೆಟ್ಟಿದೆ.
ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಿರ್ದೇಶಕ ಶಂಕರ್ (Shankar) ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಕುರಿತಾಗಿ ಹೊಸ ಅಪ್ಡೇಟ್ ಗಳು ಹೊರಗೆ ಬಂದಿಲ್ಲ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಆಗಾಗ ಕೆಲವೊಂದು ವಿಷಯಗಳು ಲೀಕ್ ಆಗುತ್ತಿದೆ. ಈಗ ಇವೆಲ್ಲವುಗಳ ನಡುವೆ ಈ ಸಿನಿಮಾದ ಹೊಸ ಹಾಡು ಲೀಕಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗೇಮ್ ಚೇಂಜರ್ (Game Changer) ಸಿನಿಮಾದ ಹಾಡು ಲೀಕಾದ ಹಿನ್ನೆಲೆಯಲ್ಲಿ ರಾಮ್ ಚರಣ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮಾಡುತ್ತಿರುವಾಗ ಈ ರೀತಿ ಮಾಡುವುದು ಖಂಡಿತ ಸರಿಯಲ್ಲ ಎನ್ನುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಈ ಹಾಡನ್ನು ದಯವಿಟ್ಟು ಶೇರ್ ಮಾಡಬೇಡಿ, ನಿಲ್ಲಿಸಿ ಎಂದು ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈಗಾಗಲೇ ಹಾಡು ಸಾಕಷ್ಟು ವೈರಲ್ ಆಗಿದೆ.
ಲೀಕ್ ಆದ ಹಾಡನ್ನು ನೋಡಿದ ನಂತರ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳು ಹರಿದು ಬಂದಿವೆ. ಶಂಕರ್ ಸಿನಿಮಾದ ಹಾಡುಗಳು ಎಂದರೆ ಅದಕ್ಕೆ ವಿಶೇಷವಾದ ಪ್ರಾಧಾನ್ಯತೆ ಇರುತ್ತೆ, ಅಲ್ಲಿ ಅದ್ಭುತ ಸಾಹಿತ್ಯ, ಸಂಗೀತ ಇರುತ್ತೆ. ಆದರೆ ಈಗ ಲೀಕ್ ಆಗಿರುವ ಗೇಮ್ ಚೇಂಜರ್ ಹಾಡು, ಅದರ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕ ತಮನ್ ಅವರ ಬೀಟ್ ಚೆನ್ನಾಗಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇಂತಹ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಚಿತ್ರತಂಡ ಇದರಲ್ಲಿ ಬದಲಾವಣೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇದೆ ವೇಳೆ ಇದು ಫೈನಲ್ ಹಾಡಲ್ಲ ಎನ್ನುವುದು ಸ್ಪಷ್ಟವಾಗಿದೆ. ಅದು ಕೇವಲ ಟೆಸ್ಟಿಂಗ್ ಹಾಡು ಎನ್ನಲಾಗಿದೆ. ಅಲ್ಲದೇ ಫೈನಲ್ ಹಾಡಿಗೆ ಸ್ಟಾರ್ ಗಾಯಕರು ದನಿಯಾಗಲಿದ್ದಾರೆ ಎನ್ನುವ ವಿಷಯ ಸಹಾ ಹೊರ ಬಂದಿದೆ.
ಫೈನಲ್ ಮಿಕ್ಸ್ ನಲ್ಲಿ ಇನ್ನು ಸಾಕಷ್ಟು ಕೆಲಸಗಳಿವೆ ಎಂದು ಹೇಳಲಾಗಿದೆ. ಸೌಂಡ್ ಮತ್ತು ಮಿಕ್ಸಿಂಗ್ ನಂತರ ಹಾಡು ಇನ್ನಷ್ಟು ಚೆನ್ನಾಗಿರುತ್ತದೆ. ಅಲ್ಲದೇ ಹಾಡು ಲೀಕಾದರೂ ಸಿನಿಮಾ ತಯಾರಕರು ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿರುವುದರಿಂದ, ಈ ಹಾಡು ಫೈನಲ್ ಅಲ್ಲ ಎನ್ನುವುದು ಮತ್ತು ಇದು ಒರಿಜಿನಲ್ ಹಾಡು ಅಲ್ಲ ಎನ್ನುವುದು ಸ್ಪಷ್ಟವಾಗಿದೆ.